Slide
Slide
Slide
previous arrow
next arrow

ಅಡುಗೆ ಸಹಾಯಕಿಯರ ಬಗ್ಗೆ ದೂರು: ಸಹಾಯಕಿಯರೇ ಬೇಡವೆಂದ ಎಸ್‌ಡಿಎಂಸಿ

300x250 AD

ಮುಂಡಗೋಡ: ತಾಲೂಕಿನ ಚಿಗಳ್ಳಿ ಗ್ರಾಮದ ದೇವಕ್ಕ ಛಾಯಪ್ಪ ಕಲಾಲ್ ಸರಕಾರಿ ಪ್ರೌಢಶಾಲೆಯ ಅಡುಗೆ ಸಹಾಯಕಿಯರ ಬಗ್ಗೆ ಹಲವು ದೂರುಗಳು ಕೇಳಿ ಬಂದಿರುವ ಬಗ್ಗೆ ಶಾಲೆಯ ಎಸ್.ಡಿ.ಎಂ.ಸಿ ಸಮಿತಿಯು ಸಭೆ ಕರೆದು, ಅಡುಗೆ ಸಹಾಯಕಿಯರು ಬೇಡ ಎಂದು ನಿರ್ಧರಿಸಲಾಗಿದೆ.
ಶಾಲೆಯಲ್ಲಿ ಒಟ್ಟು 4 ಅಡುಗೆ ಸಹಾಯಕಿಯರು ಇದ್ದು, ಅದರಲ್ಲಿ ಓರ್ವ ಅಡುಗೆ ಸಹಾಯಕಿಯು ನಾನು ಅಡುಗೆ ಮಾಡಲು ಶಾಲೆಗೆ ಬರುವುದಿಲ್ಲ. ನನ್ನೊಂದಿಗೆ ಇದ್ದ ಅಡುಗೆ ಸಹಾಯಕಿಯರು ನನ್ನನ್ನು ಸಾಕಷ್ಟು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅದರಿಂದ ಮನಸ್ಸಿಗೆ ತುಂಬಾ ನೋವಾಗಿದೆ ಎಂದು ಸಭೆಯಲ್ಲಿ ತಿಳಿಸಿದರು.
ಇನ್ನುಳಿದ ಮೂರು ಅಡುಗೆ ಸಹಾಯಕಿಯರು ನೊಂದ ಅಡುಗೆ ಸಹಾಯಕಿಯ ಮನವೊಲಿಸಲು ಪ್ರಯತ್ನಪಟ್ಟರು. ಕಾಲಿಗೂ ಬಿದ್ದರೂ ನೊಂದ ಮಹಿಳೆ ಒಪ್ಪಲಿಲ್ಲ. ಇದರಿಂದ ಶಾಲೆಯ ಎಸ್.ಡಿ.ಎಂ.ಸಿ ಸಮಿತಿಯು ಅಡುಗೆ ಸಹಾಯಕಿಯರಿಗೆ ಅಡುಗೆ ಮಾಡಲು ಬರುವುದಾದರೆ ನಾಲ್ಕು ಮಹಿಳೆಯರು ಬನ್ನಿ, ಇಲ್ಲವೆಂದರೆ ನಾಲ್ವರೂ ಕೆಲಸ ಬಿಡಿ ಎಂದು ಸೂಚಿಸಿದರು. ಮನನೊಂದ ಮಹಿಳೆ ಒಪ್ಪದೆ ಇದ್ದದ್ದರಿಂದ ಅವರನ್ನ ಕಮಿಟಿಯು ತೆಗೆದು ಹೊಸಬರಿಗೆ ತೆಗೆದುಕೊಳ್ಳಲು ಎಸ್‌ಡಿಎಂಸಿ ಸಭೆಯಲ್ಲಿ ನಿರ್ಧರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಎಲ್.ಟಿ ಪಾಟೀಲ್, ಸಂಗೂರಮಠ, ರಾಜಶೇಖರ ಹಿರೇಮಠ, ಬಾಬಣ್ಣ ಲಾಡನವರ, ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾರತಿ ಲಿಂಬಾಯಿ, ಉಪಾಧ್ಯಕ್ಷೆ ಹುಲಿಗೇವ್ವ ಶಿರಗೇರಿ, ಎಸ್‌ಡಿಎಂಸಿ ಅಧಕ್ಷ ಫಕ್ಕೀರಸ್ವಾಮಿ ಹುಲಿಯವರ, ಉಪಾಧ್ಯಕ್ಷ ಮಹಾಬಲೇಶ್ವರ ಪಾಟೀಲ್, ವಿಷ್ಣು ಅಂತೋಜಿ, ಮಾಂತೇಶ ವಾಲ್ಮೀಕಿ, ಕಲ್ಮೇಶ ಕೀವುಡನವರ ಹಾಗೂ ಪಿಡಿಓ ಶಿವಾಜಿ ವಾಸಂಬಿ ಇದ್ದರು

300x250 AD
Share This
300x250 AD
300x250 AD
300x250 AD
Back to top