Slide
Slide
Slide
previous arrow
next arrow

ಸುರಂಗ, ಫ್ಲೈಓವರ್ ಸಂಚಾರಕ್ಕೆ ಸಂಸದ ಹೆಗಡೆ ಚಾಲನೆ

300x250 AD

ಕಾರವಾರ: ನಗರದ ಫ್ಲೈಓವರ್, ಸುರಂಗ ಮಾರ್ಗವನ್ನ ಸಂಸದ ಅನಂತಕುಮಾರ ಹೆಗಡೆ ಉದ್ಘಾಟಿಸಿ ಏಕಮುಖ ಸಂಚಾರಕ್ಕೆ ಚಾಲನೆ ನೀಡಿದರು.
ರಾಷ್ಟ್ರೀಯ ಹೆದ್ದಾರಿ 66ರ ಅಗಲೀಕರಣದ ಭಾಗವಾಗಿ ಸುರಂಗ ಮಾರ್ಗ, ಫ್ಲೈಓವರ್ ನಿರ್ಮಾಣಗೊಂಡಿದೆ. ಹೆದ್ದಾರಿಯಲ್ಲಿ ನಗರದ ಲಂಡನ್ ಬ್ರಿಡ್ಜ್ನಿಂದ ಆರ್‌ಟಿಓ ಕಚೇರಿವರೆಗೆ ಸುಮಾರು 2 ಕಿ.ಮೀ. ಉದ್ದದ ಫ್ಲೈಓವರ್ ನಿರ್ಮಿಸಲಾಗಿದ್ದು, ಫ್ಲೈಓವರ್ ಮೇಲೆ ಹೆದ್ದಾರಿಯ ಏಕಮುಖ ಸಂಚಾರಕ್ಕೆ ಸದ್ಯ ಅವಕಾಶ ನೀಡಿ, ಒಂದು ಟನಲ್ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ.
ನಗರದ ಆರ್‌ಟಿಓ ಕಚೇರಿ ಬಳಿ ಪೂಜೆ ಬಳಿಕ ಸುರಂಗ ಮಾರ್ಗ ಹಾಗೂ ಫ್ಲೈಓವರ್ ಉದ್ಘಾಟಿಸುವ ಮೂಲಕ ಸಂಸದ ಹೆಗಡೆ ಏಕಮುಖ ಸಂಚಾರಕ್ಕೆ ಮುಕ್ತಗೊಳಿಸಿದರು. ಉದ್ಘಾಟನೆಯ ಬಳಿಕ ಕಾರಿನಲ್ಲಿ ತೆರಳಿದ ಅವರು, ಸುರಂಗದ ಒಳಭಾಗವನ್ನ ಸುತ್ತಾಡಿ ಬಂದರು. ಈ ವೇಳೆ ಸಂಸದರಿಗೆ ಕರಾವಳಿ ಶಾಸಕರಾದ ರೂಪಾಲಿ ನಾಯ್ಕ, ದಿನಕರ ಶೆಟ್ಟಿ, ಸುನೀಲ್ ನಾಯ್ಕ ಸಾಥ್ ನೀಡಿದರು.

300x250 AD
Share This
300x250 AD
300x250 AD
300x250 AD
Back to top