Slide
Slide
Slide
previous arrow
next arrow

ದ್ವೀಪದಲ್ಲಿ ವಿಜೃಂಭಣೆಯ ನರಸಿಂಹ ದೇವರ ಜಾತ್ರೆ

300x250 AD

ಕಾರವಾರ: ಪ್ರತಿವರ್ಷ ಜನವರಿ ತಿಂಗಳ ಹುಣ್ಣಿಮೆಯಂದು ನಡೆಯುವ ಮೀನುಗಾರರ ಆರಾಧ್ಯ ದೈವವಾದ ನರಸಿಂಹ ದೇವರ ಜಾತ್ರೆಯು ಅದ್ಧೂರಿಯಾಗಿ ಜರುಗಿತು.
ನಗರದಿಂದ ಸುಮಾರು 10 ಕಿಲೋ ಮೀಟರ್ ದೂರದಲ್ಲಿರುವ ಕೂರ್ಮಗಡ ದ್ವೀಪದಲ್ಲಿ ನೆಲೆನಿಂತಿರುವ ನರಸಿಂಹ ದೇವರ ಜಾತ್ರೆಗೆ ಬೋಟಿನಲ್ಲಿ ತೆರಳುವುದೇ ಒಂದು ವಿಶಿಷ್ಟ ಅನುಭವವಾಗಿದ್ದು, ದ್ವೀಪದಲ್ಲಿನ ಸುಂದರ ಪರಿಸರ ಜಾತ್ರೆಗೆ ಬಂದವರಿಗೆ ಪ್ರವಾಸದ ಅನುಭವ ಸಹ ನೀಡುತ್ತದೆ. ಸಾವಿರಾರು ಜನ ಬೆಳಿಗ್ಗೆಯಿಂದ ಬೋಟ್‌ಗಳಲ್ಲಿ ಕೂರ್ಮಗಡ ನಡುಗಡ್ಡೆಗೆ ತೆರಳಿ ದೇವರ ದರ್ಶವನ್ನ ಪಡೆದರು. ಈ ಜಾತ್ರೆಗೆ ಕೇವಲ ಮೀನುಗಾರರಷ್ಟೇ ಅಲ್ಲದೇ, ವಿವಿಧ ಸಮುದಾಯ ಜನರು ವಿವಿಧೆಡೆಗಳಿಂದ ಆಗಮಿಸಿದ್ದರು.
ದೇವರಲ್ಲಿ ಹರಕೆ ಹೊತ್ತುಕೊಂಡರೆ ಇಷ್ಟಾರ್ಥಗಳು ಈಡೇರುತ್ತವೆ ಎನ್ನುವ ನಂಬಿಕೆ ಇಲ್ಲಿಗೆ ಬರುವ ಭಕ್ತರದ್ದಾಗಿದ್ದು, ಅದಕ್ಕಾಗಿ ದೇವರಿಗೆ ಬಾಳೆಗೊನೆ ಸೇವೆ ನೀಡುವುದು ಈ ಜಾತ್ರೆಯ ಸಂಪ್ರದಾಯ. ಮೀನುಗಾರರು ಪ್ರತಿವರ್ಷ ಜಾತ್ರೆಗೆ ಆಗಮಿಸಿ ದೇವರಿಗೆ ಬಾಳೆಗೊನೆಯನ್ನ ಅರ್ಪಿಸಿ ಮೀನುಗಾರಿಕೆ ಉತ್ತಮವಾಗಿ ನಡೆಯಲಿ ಎಂದು ಬೇಡಿಕೊಳ್ಳುವುದು ವಿಶೇಷ.

ಜಾತ್ರೆಯ ಇತಿಹಾಸ: ಈ ಕೂರ್ಮಗಡ ಜಾತ್ರೆಗೆ ನೂರಾರು ವರ್ಷಗಳ ಇತಿಹಾಸವಿದೆ. ಹಿಮಾಲಯದಿಂದ ಬಂದ ಸಾದು ಒರ್ವ ಸಾಲಿಗ್ರಾಮವನ್ನ ತಂದು ತಾಲೂಕಿನ ಕಡವಾಡ ಗ್ರಾಮದ ಮನೆಯವರಿಗೆ ನೀಡಿ ಕಾಳಿ ನದಿ ಹಾಗೂ ಅರಬ್ಬಿ ಸಮುದ್ರ ಸೇರುವ ಸಂಗಮದಲ್ಲಿ ಸಾಲಿಗ್ರಾಮವನ್ನ ಇಟ್ಟು ಪೂಜೆ ಮಾಡಬೇಕು ಎಂದು ಹೇಳಿದ್ದರಂತೆ. ಅದರಂತೆ ಪ್ರತಿ ವರ್ಷ ಕಾಳಿ ಸಂಗಮ ಸಮೀಪ ಇರುವ ಕೂರ್ಮಗಡ ನಡುಗಡ್ಡೆಗೆ ದೇವರನ್ನ ತಂದು ಪೂಜೆ ನಡೆಸಲಾಗುತ್ತದೆ.

300x250 AD
Share This
300x250 AD
300x250 AD
300x250 AD
Back to top