Slide
Slide
Slide
previous arrow
next arrow

ಇಹಲೋಕ ಯಾತ್ರೆ ಮುಗಿಸಿದ ಸಿದ್ದೇಶ್ವರ ಸ್ವಾಮೀಜಿ: ಸ್ವರ್ಣವಲ್ಲೀ ಶ್ರೀ ಶೋಕ

300x250 AD

ಶಿರಸಿ: ವಿಜಯಪುರದ ಜ್ಞಾನ ಯೋಗಾಶ್ರಮ ಶ್ರೀಗಳಾದ ಸಿದ್ದೇಶ್ವರ ಸ್ವಾಮೀಜಿಯವರ ಅಗಲಿಕೆಗೆ ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶ ಗಂಗಾಧರೇAದ್ರ ಸರಸ್ವತೀ ಸ್ವಾಮೀಜಿ ಶೋಕ ವ್ಯಕ್ತಪಡಿಸಿದ್ದಾರೆ.
ತಮ್ಮ ಅರ್ಥಗರ್ಭಿತವಾದ ಪ್ರವಚನಗಳ ಮೂಲಕ, ಭಕ್ತಾದಿಗಳ ಮನದಲ್ಲಿ ಭಕ್ತಿಭಾವವನ್ನು ಮೂಡಿಸಿದ ಸಿದ್ದೇಶ್ವರರು ಉತ್ತರಾಯಣದ ಶುಕ್ಲ ಪಕ್ಷದ ವೈಕುಂಠ ಏಕಾದಶಿ ದಿನದಂದು ದೇಹ ತ್ಯಾಗ ಮಾಡಿದ್ದು ಗಮನಿಸಿದರೆ ಅವರೊಬ್ಬರು ಶ್ರೇಷ್ಠ ಮಹಾತ್ಮರು ಎಂಬುದು ತಿಳಿಯುತ್ತದೆ. ಅವರು ಪ್ರಾತಃಸ್ಮರಣೀಯರು ಕೂಡ. ಸಿದ್ದೇಶ್ವರ ಸ್ವಾಮೀಜಿಗಳನ್ನು ಹಿಂದೂ ಧರ್ಮಸಭಾದಲ್ಲಿ, ಭಗವದ್ಗೀತಾ ಅಭಿಯಾನದಲ್ಲಿ ಹಾಗೂ ಹಳಿಯಾಳದಲ್ಲಿ ಒಮ್ಮೆ ಭೇಟಿ ಆಗಿದ್ದೆವು. ಅವರ ಜ್ಞಾನ ಯೋಗಾಶ್ರಮಕ್ಕೂ ಭೇಟಿ ನೀಡಿದ್ದೆವು. ನಮ್ಮ ಭೇಟಿಯ ಸಂದರ್ಭದಲ್ಲಿ ಶಾಲು ಹಾಕಲು ಮುಂದಾದಾಗ ನಿರಾಕರಿಸಿದ್ದರು. ಆದರೆ, ಪುಸ್ತಕ ಕೊಟ್ಟಾಗ ಸ್ವೀಕರಿಸಿದ್ದರು ಎಂದೂ ಸ್ವರ್ಣವಲ್ಲೀ ಶ್ರೀಗಳು ಸ್ಮರಿಸಿಕೊಂಡಿದ್ದಾರೆ.

300x250 AD
Share This
300x250 AD
300x250 AD
300x250 AD
Back to top