ಕುಮಟಾ: ಸೆಂಟರ್ ಫಾರ್ ಇಕಾಲಾಜಿಕಲ್ ಸೈನ್ಸ್ & ಭಾರತೀಯ ವಿಜ್ಞಾನ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಡಿ.27ರಿಂದ 31ರವರೆಗೆ ನಡೆದ 13ನೇ ಲೇಕ್ ಸಿಂಪೋಸಿಯo ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಸೆಕೆಂಡರಿ ಹೈಸ್ಕೂಲ್ ಹಿರೇಗುತ್ತಿ ವಿಜ್ಞಾನ ಶಿಕ್ಷಕ ಮಹಾದೇವ ಗೌಡ ಮಂಡಿಸಿದ ಪರಿಸರ ಮಾಲಿನ್ಯ ತಡೆಗಟ್ಟುವ ಕ್ರಮ, ಪರಿಹಾರೋಪಾಯಗಳು ವಿಷಯದ ಪೇಪರ್ ಪ್ರೆಸೆಂಟೇಶನ್‌ನಲ್ಲಿ ದ್ವಿತೀಯ ಸ್ಥಾನ ಪಡೆದು ‘ಸಹ್ಯಾದ್ರಿ ಶಿಕ್ಷಕ’ ಪ್ರಶಸ್ತಿ ಪಡೆದಿದ್ದಾರೆ. ವಿದ್ಯಾರ್ಥಿಗಳಾದ ಸುವರ್ಣ ಭಂಡಾರಕರ ಹಾಗೂ ಸಾನಿಕ ನಾಯ್ಕ ಇವರು ಔಷಧಿ ಸಸ್ಯಗಳ ಕುರಿತು ಪೇಪರ್ ಪ್ರೆಸೆಂಟೇಶನ್ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇವರಿಗೆ ವಿಜ್ಞಾನ ಶಿಕ್ಷಕ ಮಹಾದೇವ ಬಿ.ಗೌಡ ಮಾರ್ಗದರ್ಶನ ನೀಡಿದ್ದರು. ಪ್ರತಿವರ್ಷವೂ ಹಿರೇಗುತ್ತಿ ಹೈಸ್ಕೂಲ್ ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಭಾಗವಹಿಸುತ್ತಿರುವುದು ವಿಶೇಷವಾಗಿದೆ.
ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಹಾತ್ಮಗಾಂಧೀ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಹೊನ್ನಪ್ಪ ನಾಯಕ, ಉಪಾಧ್ಯಕ್ಷ ಶ್ರೀಕಾಂತ ನಾಯಕ, ಕಾರ್ಯದರ್ಶಿ ಮೋಹನ ಕೆರೆಮನೆ ಮತ್ತು ಸದಸ್ಯರು, ಮುಖ್ಯಾಧ್ಯಾಪಕ ರೋಹಿದಾಸ ಗಾಂವಕರ, ಶಿಕ್ಷಕ ವೃಂದದವರು, ಆಶ್ರಯ ಫೌಂಡೇಶನ್ ಅಧ್ಯಕ್ಷ ರಾಜೀವ ಗಾಂವಕರ, ಗ್ರಾಮ ಪಂಚಾಯತಿ ಅಧ್ಯಕ್ಷ ನಾಗರತ್ನ ಗಾಂವಕರ, ಗ್ರಾಮ ಪಂಚಾಯತಿ ಉಪಾಧ್ಯಕ್ಷÀ ಶಾಂತಾ ಎನ್.ನಾಯಕ, ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ನೀಲಕಂಠ ನಾಯಕ, ಬ್ರಹ್ಮ ಜಟಕ ಯುವಕ ಸಂಘದ ಅಧ್ಯಕ್ಷ ಜಗದೀಶ (ಪಪ್ಪು) ನಾಯಕ ಮತ್ತು ಸದಸ್ಯರು, ಊರ ನಾಗರಿಕರು, ಡಿಡಿಪಿಐ ಈಶ್ವರ ನಾಯ್ಕ, ಡಯಟ್‌ನ ಎನ್.ಜಿ.ನಾಯಕ, ಬಿ.ಇ.ಓ ಆರ್.ಎಲ್.ಭಟ್ಟ್ ಅಭಿನಂದನೆ ಸಲ್ಲಿಸಿ ಶುಭಹಾರೈಸಿದ್ದಾರೆ.