ಯಲ್ಲಾಪುರ: ಸಾಹಿತ್ಯ ಸಾಮಾಜಿಕ ಜಾಗೃತಿ, ಪರಿವರ್ತನೆ ತರುವಲ್ಲಿ ಪ್ರೇರಣೆ ಆಗಬೇಕು ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಹೇಳಿದರು.
ಪಟ್ಟಣದ ಅಡಿಕೆ ಭನವನದಲ್ಲಿ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಮಂಗಲಾ ಭಾಗ್ವತ್ ಹಾಗೂ ಮಧುಕೇಶ್ವರ ಭಾಗ್ವತ್ ಅವರ ಮಧುರ ಭಾವಸಂಗಮ, ಗೊಂಚಲು ಹಾಗೂ ನಂದಗೋಪನ ಉಲಿಗಳು ಕೃತಿಗಳ ಲೋಕಾರ್ಪಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕೃತಿಗಳನ್ನು ಲೋಕಾರ್ಪಣೆಗೊಳಿಸಿದ ಹಿರಿಯ ಸಾಹಿತಿ ಈಶ್ವರ ಸಂಪಗಾವಿ ಬೆಳಗಾವಿ, ಹಿಂದಿನ ಮತ್ತು ಇಂದಿನ ಸಾಹಿತ್ಯದಲ್ಲಿ ಆಗಿರುವ ಬದಲಾವಣೆಗಳು ಹಾಗೂ ಹೊಸ ಸಾಹಿತಿಗಳು ಹೇಗೆ ಬರೆಯಬೇಕು ಎನ್ನುವದರ ಕುರಿತು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕಾಧ್ಯಕ್ಷ ಸುಬ್ರಹ್ಮಣ್ಯ ಭಟ್, ಯಲ್ಲಾಪುರ ಕನ್ನಡ ಸಾಹಿತ್ಯ ಪರಿಷತ್ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡವರಿಗೆ ಬಹಳಷ್ಟು ಪ್ರೋತ್ಸಾಹ ಮಾರ್ಗದರ್ಶನ ನೀಡುತ್ತದೆ. ಮಂಗಲಾ ಭಾಗ್ವತ ಹಾಗೂ ಮಧುಕೇಶ್ವರ ಭಾಗ್ವತ್ ಅವರಿಂದ ಮತ್ತಷ್ಟು ಪ್ರತಿಗಳ ರಚನೆ ಆಗಲಿ ಎಂದು ಹಾರೈಸಿದರು.
ಉಡುಪಿಯ ಸಾಹಿತಿ ಶೋಭಾ ಹರಿಪ್ರಸಾದ ಮಾತನಾಡಿ, ಯಲ್ಲಾಪುರ ಭಾಗದಲ್ಲಿ ಸಾಹಿತ್ಯ ಮತ್ತು ಸಂಸ್ಕೃತಿಗೆ ಇರುವ ಪ್ರೋತ್ಸಾಹ ಕಂಡು ಹಾಗೂ ಸಹಕಾರ ಈ ಕಾರ್ಯಕ್ರಮದಲ್ಲಿ ಕಂಡುಬoದಿದೆ. ಭಾಗ್ವತ ದಂಪತಿಗಳಿಂದ ಮತ್ತಷ್ಟು ಕೃತಿಗಳು ಹೊರಬರಲಿ ಎಂದು ಹೇಳಿದರು.
ಸಚಿವ ಹೆಬ್ಬಾರ್ ಧರ್ಮಪತ್ನಿ ವನಜಾಕ್ಷಿ ಹೆಬ್ಬಾರು ವೇದಿಕೆಯಲ್ಲಿದ್ದರು. ಮಧುರ ಭಾವ ಸಂಗಮ ಕಾವ್ಯ ಕುಚ್ಚ ಹಾಗೂ ನಂದಗೋಪನ ಉಲಿಗಳು ಮುಕ್ತಕಗಳ ಸಂಕಲನ ಕೃತಿಗಳ ಅವಲೋಕನವನ್ನು ಕೋಟದ ಸುಮನಾ ಹೇರ್ಳೆ ಹಾಗೂ ಗೊಂಚಲು ಉಜಿರೆಯ ಅರುಣಾ ಶ್ರೀನಿವಾಸ ಅವಲೋಕನ ಮಾಡಿದರು. ಕೃತಿಕಾರರಾದ ಮಧುಕೇಶ್ವರ ಭಾಗ್ವತ್ ಸ್ವಾಗತಿಸಿದರು. ಇನ್ನೋರ್ವ ಕೃತಿಕಾರರಾದ ಮಂಗಲಾ ಭಾಗ್ವತ್ ಬರವಣಿಗೆಯ ಅನಿಸಿಕೆಗಳನ್ನು ಹೇಳಿಕೊಂಡರು, ಡಾ.ರವಿ ಭಟ್ ನಿರೂಪಿಸಿ ವಂದಿಸಿದರು.