• first
  Slide
  Slide
  previous arrow
  next arrow
 • ಶಿರಸಿಯಲ್ಲಿ ಹಲವೆಡೆ ರಸ್ತೆ ಮಧ್ಯದಲ್ಲೇ ದರೋಡೆ: ಬೆಚ್ಚಿಬಿದ್ದ ಜನತೆ

  300x250 AD

  ಶಿರಸಿ: ಕಳೆದೆರಡು ತಿಂಗಳ ಹಿಂದೆ ಬನವಾಸಿ ವ್ಯಾಪ್ತಿಯಲ್ಲಿ ನಡೆದ ದರೋಡೆ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ದರೋಡೆ ಪ್ರಕರಣ ನಡೆದಿದ್ದು, ನಾಗರಿಕರನ್ನು ಬೆಚ್ಚಿ ಬೀಳಿಸಿದೆ.

  ಬನವಾಸಿ ವ್ಯಾಪ್ತಿಯ ಉಂಚಳ್ಳಿ, ಕಡಗೋಡ, ಕೆರೆಕೊಪ್ಪ ಹಾಗೂ ಹೆಗಡೆಕಟ್ಟಾ ಕ್ರಾಸ್ ಬಳಿ ಎರಡು ಬೈಕ್’ನಲ್ಲಿ ಬಂಡ ದರೋಡೆಕೋರರು ವಾಹನ ಸವಾರರನ್ನು ಅಡ್ಡಗಟ್ಟಿ, ಬೆದರಿಸಿ ಹಣ ದೋಚಿದ ಘಟನೆ ನಡೆದಿದೆ.,
  ಬನವಾಸಿ ರಸ್ತೆಯ ಉಂಚಳ್ಳಿ ಬಳಿ ವ್ಯಕ್ತಿಯೋರ್ವನಿಗೆ ಬೆದರಿಸಿ 2500 ರೂ. ನಗದು ಹಾಗೂ ಬೈಕ್ ಸವಾರನ ಕೀ ಕಸಿದು ಪರಾರಿಯಾಗಿದ್ದು, ಹಾಗೆಯೇ ಬಿದ್ರಳ್ಳಿ ಬಳಿ ತರಕಾರಿ ಮಾರಾಟ ಮಾಡಿ ವಾಪಸ್ ಹೋರಾಟ ಶ್ರೀಕಾಂತ್ ಕಬ್ಬೇರ ಎಂಬುವವರಿಗೆ ಚಾಕು ತೋರಿಸಿ ಬೆದರಿಸಿ, 20000 ರೂ. ನಗದನ್ನು ದೋಚಿ ಪರಾರಿಯಾಗಿದ್ದಾರೆ. ಕೆರೆಕೊಪ್ಪ ಬಳಿ ರತ್ನಾಕರ ನಾಯ್ಕ್ ಎಂಬುವರ ಬೈಕ್ ಕೀ, ಹಾಗು ಹೆಗಡೇಕಟ್ಟಾ ಕ್ರಾಸ್ ಬಳಿ ಮೊಬೈಲ್ ಹಾಗೂ ಪರ್ಸ್ ದೋಚಿದ್ದಾರೆ.
  ಬನವಾಸಿ- ಮಧುರವಳ್ಳಿ ಮಧ್ಯೆ ಎಪಿಎಂಸಿ ಮಾಜಿ ಅಧ್ಯಕ್ಷ ಶಿವಕುಮಾರ್ ಗೌಡರನ್ನು ತಡೆದು ಚಾಕು ತೋರಿಸಿ ಮೊಬೈಲ್ ಸಹಿತ ಪರಾರಿಯಾಗಿದ್ದು, ಐದಾರು ತಂಡಗಳಿಂದ ಈ ಕೃತ್ಯ ನಡೆದಿದೆ. ಸುಲಿಗೆಕೋರರ ಪತ್ತೆಗಾಗಿ ಬನವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಶೋಧ ಕಾರ್ಯ ಪ್ರಾರಂಭಿಸಿದ್ದಾರೆ.

  300x250 AD
  Share This
  300x250 AD
  300x250 AD
  300x250 AD
  Back to top