ಶಿರಸಿ: ಸಿದ್ದಾಪುರದ ಹಣಜಿಬೈಲಿನ ಶ್ರೀಮಹಾಗಣಪತಿ ಯಕ್ಷಗಾನ ಮಂಡಳಿ ತಾಲೂಕಿನ ದೊಡ್ನಳ್ಳಿಯಲ್ಲಿ ಪೌರಾಣಿಕ ಯಕ್ಷೋತ್ಸವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರವಾರದ ಸಹಕಾರದಲ್ಲಿ ಡಿಸೆಂಬರ್ 29ರಂದು ಸಂಜೆ 6ರಿಂದ ನಡೆಯಲಿದೆ.
ಉದ್ಘಾಟನೆಯನ್ನು ಉಪೇಂದ್ರ ಪೈ ಸೇವಾ ಟ್ರಸ್ಟ ಅಧ್ಯಕ್ಷ ಉಪೇಂದ್ರ ಪೈ ನೆರವೇರಿಸಲಿದ್ದು, ಅಧ್ಯಕ್ಷತೆಯನ್ನು ಗ್ರಾ.ಪಂ. ಅಧ್ಯಕ್ಷೆ ಶೃತಿ ಕಾನಡೆ ವಹಿಸಿಕೊಳ್ಳುವರು. ಅತಿಥಿಗಳಾಗಿ ದೇವಸ್ಥಾನದ ಅಧ್ಯಕ್ಷ ಶ್ರೀಪಾದ ಹೆಗಡೆ, ಪತ್ರಕರ್ತ ಜೆ.ಆರ್. ಸಂತೋಷ ಕುಮಾರ, ನಿವೃತ್ತ ಪ್ರಾಚಾರ್ಯ ಚಂದ್ರಶೇಖರ ಗಣಗೇರಿ, ಸಾಮಾಜಿಕ ಸಂಪನ್ಮೂಲ ವ್ಯಕ್ತಿ ಎಸ್.ಎನ್.ಹೆಗಡೆ ಪಾಲ್ಗೊಳ್ಳುವರು. ದೇವಸ್ಥಾನದ ಪ್ರಧಾನ ಅರ್ಚಕ ವೇ.ಮೂ.ಪರಮೇಶ್ವರ ಭಟ್ಟ ಅವರನ್ನು ಗೌರವಿಸಲಾಗುತ್ತಿದೆ.
ಬಳಿಕ ‘ರಾಮಾಶ್ವಮೇಧ’ ಯಕ್ಷಗಾನ ನಡೆಯಲಿದೆ. ಹಿಮ್ಮೇಳದಲ್ಲಿ ಕೇಶವ ಹೆಗಡೆ ಕೊಳಗಿ, ನಾಗರಾಜ ಮುಗಳ್ಳೆ, ನಾಗರಾಜ ಕೆರೇಕೈ ಭಾಗವಹಿಸುವರು. ಮುಮ್ಮೇಳದಲ್ಲಿ ಅಶೋಕ ಭಟ್ ಸಿದ್ದಾಪುರ, ಪ್ರಭಾಕರ ಹಣಜಿಬೈಲ್, ಮಹಾಬಲೇಶ್ವರ ಇಟಗಿ, ಸದಾನಂದ ಹೆಗಡೆ, ರಾಮಕೃಷ್ಣ ಹೆಗಡೆ, ಪ್ರವೀಣ, ಪ್ರಕಾಶ, ಪ್ರದೀಪ, ಪ್ರಸನ್ನ, ಅವಿನಾಶ ಕೊಪ್ಪ, ಸುಬ್ರಹ್ಮಣ್ಯ ಹೆಗಡೆ, ಮಹಾಬಲೇಶ್ವರ ಗೌಡ, ಹುಚ್ಚಪ್ಪ ಗೌಡ, ಪೂಜಾ, ಪವಿತ್ರಾ ಪಾಲ್ಗೊಳ್ಳುವರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.