Slide
Slide
Slide
previous arrow
next arrow

ಭೀಮಕೋಲ್‌ನ ಗೋಪಿಚಂದಗೆ ಗಡಿಪಾರು

300x250 AD

ಕಾರವಾರ: ತಾಲೂಕಿನ ಭೀಮಕೋಲ್‌ನ ಗೋಪಿಚಂದ ಪಡುವಳ್ಕರ್ ಎನ್ನುವಾತನನ್ನು ಜಿಲ್ಲೆಯಿಂದ ಗಡಿಪಾರು ಮಾಡಿ ಆದೇಶಿಸಲಾಗಿದೆ.
ತಾಲೂಕಿನಾದ್ಯಂತ ಶಾಂತಿಯುತ ಜೀವನ ನಡೆಸುವ ನಾಗರಿಕರಿಗೆ, ಸಮಾಜಕ್ಕೆ ಮತ್ತು ಸ್ವತ್ತಿಗೆ ಈತ ಅಪಾಯಕಾರಿ ವ್ಯಕ್ತಿಯಾಗಿದ್ದು, ಈತನ ವಿರುದ್ಧ ಕಳೆದ 1998ನೇ ಸಾಲಿನಿಂದ ಈವರೆಗೆ 1 ಕೊಲೆ, 1 ಕೊಲೆ ಯತ್ನ, 5 ದೈಹಿಕ ಹಲ್ಲೆ, 3 ಜೀವದ ಬೆದರಿಕೆ, 1 ಇತರ ಐಪಿಸಿ ಪ್ರಕರಣ (160 ಐ ಪಿ ಸಿ), 16 ಅಬಕಾರಿ ಕಾಯ್ದೆ ಪ್ರಕರಣ ಹೀಗೆ ಒಟ್ಟು 27 ಪ್ರಕರಣಗಳಲ್ಲಿ 131 ದಿನಗಳವರೆಗೆ ನ್ಯಾಯಾಂಗ ಬಂಧನದಲ್ಲಿದ್ದು, 2019ನೇ ಸಾಲಿನಲ್ಲಿ ಗೂಂಡಾ ಕಾಯ್ದೆಯಡಿಯೂ ಈತನ ಮೇಲೆ ಪ್ರಕರಣವಿದೆ.
1 ತಿಂಗಳಕಾಲ ಧಾರವಾಡ ಜೈಲಿನಲ್ಲಿದ್ದು ಬಿಡುಗಡೆ ಹೊಂದಿದ ಮೇಲೂ ತನ್ನ ಚಟುವಟಿಕೆಗಳನ್ನು ನಿರಂತರವಾಗಿ ಮುಂದುವರೆಸಿಕೊoಡು ಬಂದಿದ್ದು, ಈತನ ಚಟುವಟಿಕೆಗಳನ್ನು ನಿಯಂತ್ರಿಸುವ ಸಲುವಾಗಿ ಜಿಲ್ಲೆಯಿಂದ 6 ತಿಂಗಳವರೆಗೆ ಹಾವೇರಿ ಜಿಲ್ಲೆಗೆ ಗಡಿಪಾರು ಮಾಡಲು ಆದೇಶ ಹೊರಡಿಸಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top