ಅಂಕೋಲಾ: ಸ್ವಾತಂತ್ರ್ಯ ಹೋರಾಟ, ಸಾಂಸ್ಕೃತಿಕವಾಗಿ ಮತ್ತು ಸಾಹಿತ್ಯಿಕವಾಗಿ ಸಾಕಷ್ಟು ಕೊಡುಗೆಯನ್ನು ನಾಡಿಗೆ ನೀಡಿದ ನೆಲ ಅಂಕೋಲಾ. ಈಗ 9ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಜ.20ರಂದು ಪಟ್ಟಣದ ನಾಡವರ ಸಮುದಾಯ ಭವನದಲ್ಲಿ ಸ್ವಾಗತ ಸಮಿತಿಯ ಅನುಮತಿಯ ಮೇರೆಗೆ ಆಯೋಜಿಸಲಾಗಿದೆ.
ಈ ಸಮ್ಮೇಳನದಲ್ಲಿ ಕವಿಗೋಷ್ಠಿ, ಅಂಕೋಲೆಗೆ ಸಂಬಂಧಿಸಿದ ವಿಚಾರಗೋಷ್ಠಿಗಳು ನಡೆಯಲಿದ್ದು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗೌರವಿಸಲಾಗುವುದು. ಸಾಹಿತ್ಯ, ಜನಪದ, ಯಕ್ಷಗಾನ ಅಲ್ಲದೆ ವಿವಿಧ ಕ್ಷೇತ್ರಗಳಲ್ಲಿ ಅಂಕೋಲಾ ಗುರುತಿಸಿಕೊಂಡಿದೆ. ಈ ಸಮ್ಮೇಳನದಲ್ಲಿ ಹಿರಿ- ಕಿರಿಯ ಸಾಹಿತಿಗಳು, ಕಲಾವಿದರು, ಸಾಹಿತ್ಯಾಸಕ್ತರು, ಕಸಾಪ ಆಜೀವ ಸದಸ್ಯರು ಹಾಗೂ ಸಾರ್ವಜನಿಕರು ಪಾಲ್ಗೊಂಡು ಕಾರ್ಯಕ್ರಮ ಯಶಸ್ಸುಗೊಳಿಸಲು ಕಸಾಪ ಅಧ್ಯಕ್ಷ ಗೋಪಾಲಕೃಷ್ಣ ನಾಯಕ, ಗೌರವ ಕಾರ್ಯದರ್ಶಿಗಳಾದ ಜಗದೀಶ ನಾಯಕ ಹೊಸ್ಕೇರಿ, ಜಿ.ಆರ್. ತಾಂಡೇಲ, ಕೋಶಾಧ್ಯಕ್ಷ ಡಾ.ಎಸ್.ವಿ.ವಸ್ತ್ರದ ಕೋರಿದ್ದಾರೆ.