ಶಿರಸಿ: ಅರಣ್ಯವಾಸಿಗಳ ಸಮಸ್ಯೆ ಸಮಗ್ರ ಕ್ರೋಢೀಕರಿಸಿ ಅರಣ್ಯವಾಸಿಗಳ ಹಿತ ಕಾಪಾಡುವ ಮತ್ತು ಭೂಮಿ ಹಕ್ಕಿಗೆ ಆಗ್ರಹಿಸಿ ಡಿ.17ರಂದು ಶಿರಸಿಯಲ್ಲಿ ರಾಜ್ಯಮಟ್ಟದ ಅರಣ್ಯವಾಸಿಗಳ ಬೃಹತ್ ರ‍್ಯಾಲಿ ಸಂಘಟಿಸಲಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ.
ಸದ್ರಿ ರ‍್ಯಾಲಿಯು ಮಧ್ಯಾಹ್ನ 3 ಗಂಟೆಯಿ0ದ ಶಿರಸಿಯ ಶ್ರೀ ಮಾರಿಕಾಂಬ ದೇವಸ್ಥಾನದ ಎದುರಿನಿಂದ ಪ್ರಾರಂಭವಾಗಿ ಸಾಮ್ರಾಟ ಎದುರು, ಪೋಲೀಸ್‌ಠಾಣೆ ಎದುರು ಇರುವ ಲೋಕಪಯೋಗಿ ಸುಪರ್ದಿಯಲ್ಲಿರುವ ಕ್ರೀಡಾಂಗಣದವರೆಗೆ ಹಮ್ಮಿಕೊಳ್ಳಲಾಗಿದೆ ಹಾಗೂ ಈ ರ‍್ಯಾಲಿಯಲ್ಲಿ ಜಿಲ್ಲಾ ಪರಿಷತ್ತಿನ ವಿರೋಧ ಪಕ್ಷದ ನಾಯಕರಾದ ಬಿ.ಕೆ ಹರಿಪ್ರಸಾದ ಅವರು ಪಾಲ್ಗೋಳ್ಳುವರು.
ಚಳಿಗಾಲದ ಅಧಿವೇಶನ ಡಿಸೆಂಬರ್ 19ರಿಂದ ಬೆಳಗಾಂವದಲ್ಲಿ ಜರುಗುವ ಹಿನ್ನೆಲೆಯಲ್ಲಿ, ಅರಣ್ಯವಾಸಿಗಳ ಸಮಸ್ಯೆಗಳಿಗೆ ಸ್ಫಂದಿಸುವ ದಿಶೆಯಲ್ಲಿ, ಕರ್ನಾಟಕ ರಾಜ್ಯದ ಅರಣ್ಯವಾಸಿಗಳ ಸಮಸ್ಯೆಗಳಿಗೆ ಅರಣ್ಯ ಭೂಮಿ ಹಕ್ಕಿನೊಂದಿಗೆ ಆರು ಬೇಡಿಕೆಗಳ ಹಕ್ಕೊತ್ತಾಯಕ್ಕೆ ಆಗ್ರಹಿಸಿ ಸರಕಾರದ ಮೇಲೆ ಒತ್ತಡ ಹೇರುವ ಉದ್ದೇಶದಿಂದ ರ‍್ಯಾಲಿ ಸಂಘಟಿಸಲಾಗಿದೆ ಎಂದು ಅವರು ಹೇಳಿದರು.
ಕಾರಣ, ಆಸಕ್ತ ಅರಣ್ಯ ಅತಿಕ್ರಮಣದಾರರು ಹೇಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಅಧ್ಯಕ್ಷ ರವೀಂದ್ರ ನಾಯ್ಕ ಕೋರಿದ್ದಾರೆ.