ಕಾರವಾರ: ರೋಟರಿ ಕ್ಲಬ್‌ನ ಸದಸ್ಯರು ಸದಾಶಿವಗಡದ ಸುರಭಿ ವೃದ್ಧಾಶ್ರಮಕ್ಕೆ ಭೇಟಿ ನೀಡಿ, ಅಲ್ಲಿರುವ 22 ವೃದ್ಧರಿಗೆ ಮದ್ಯಾಹ್ನದ ಊಟ ನೀಡಿದರು. ಸದ್ರಿ ಊಟದ ಖರ್ಚನ್ನು ಗಾನಾ ಅನುಪ ಪ್ರಭುರವರು ಪ್ರಾಯೋಜಿಸಿದ್ದರು.
ರೋಟರಿ ಸದಸ್ಯರೆಲ್ಲರೂ ಒಟ್ಟೂಗೂಡಿ ಹಣ್ಣು- ಹಂಪಲು, 5 ಚೀಲ ಅಕ್ಕಿ, ಬೆಲ್ಲ, ಸಕ್ಕರೆ ಚಾಪುಡಿ, ಬೆಡ್‌ಶೀಟ್, ಟವೆಲ್, ಟೂತ್ ಬ್ರಷ್, ತೂಟ್ ಪೇಸ್ಟ, ಇನ್ನಿತರ ಸಾಮಗ್ರಿಗಳನ್ನು ಅವರ ದಿನನಿತ್ಯದ ಉಪಯೋಗಕ್ಕಾಗಿ ನೀಡಿದ್ದಾರೆ. ಸದ್ರಿ ಸಾಮಗ್ರಿಗಳನ್ನು ಕೆ.ಡಿ.ಪೆಡ್ನೇಕರ, ನಾಗರಾಜ ಜೋಶಿ, ಡಾ.ಸಮೀರಕುಮಾರ ನಾಯ್ಕ, ಸುನೀಲ ಸೋನಿ, ವಿನೋದ ಕೊಠಾರಕರ, ಗುರುರಾಜ ಭಟ್, ಪ್ರಸನ್ನ ತೆಂಡೂಲ್ಕರ, ಗಣೇಶ ಪೈಗರಡಿ, ಮಾಧವ ನೆವರೇಕರ ಪ್ರಾಯೋಜಿಸಿದ್ದರು.
ಮೇಲ್ವಿಚಾರಕ ಹಾಲೇಶ, ರೋಟರಿ ಅಧ್ಯಕ್ಷ ರಾಘವೇಂದ್ರ ಜಿ.ಪ್ರಭು, ಕಾರ್ಯದರ್ಶಿ ಗುರುದತ್ತ ಬಂಟ, ಮಾಜಿ ಶಾಸಕ ಗಂಗಾಧರ ಭಟ್ಟ ಹಾಗೂ ರೋಟರಿ ಸದಸ್ಯರಾದ ಕೆ.ಡಿ.ಪೆಡ್ನೇಕರ, ಪ್ರಸನ್ನ ತೆಂಡೂಲ್ಕರ, ಶೈಲೇಶ ಹಳದಿಪೂರಕರ, ಸುನೀಲ ಸೋನಿ, ನಾಗರಾಜ ಜೋಶಿ, ಡಾ. ಸಮೀರಕುಮಾರ ನಾಯ್ಕ, ಗಣೇಶ ಪೈಗರಡಿ, ವಿನೋದ ಕೊಠಾರಕರ ಇದ್ದರು.