• Slide
  Slide
  Slide
  previous arrow
  next arrow
 • ಶ್ರೀ ಶಂಕರನಾರಾಯಣ ದೇವಳದಲ್ಲಿ ಸಂಭ್ರಮದ ದೀಪೋತ್ಸವ ಕಾರ್ಯಕ್ರಮ

  300x250 AD

  ಶಿರಸಿ:  ತಾಲೂಕಿನ ಸುಧಾಪುರ ಕ್ಷೇತ್ರದ ಮಠದೇವಳ ಗ್ರಾಮ ಹಳೇಯೂರು ಮಜರೆಯಲ್ಲಿರುವ ಸೋದೆ ಅರಸರ ಕಾಲದಲ್ಲಿ ಬೃಹತ್ ಶಿಲೆಗಳಿಂದ, ಅಪರೂಪದ ಕಲಾಕೃತಿ ಗಳಿಂದ ಮೇಳೈಸಿದ, ಐತಿಹಾಸಿಕ ದೇಗುಲ ವೇ ಶ್ರೀ ಶಂಕರ-ನಾರಾಯಣ ದೇವಸ್ಥಾನದಲ್ಲಿ‌ ಇತ್ತೀಚಿಗೆ ಶ್ರೀ ದೇವರುಗಳಿಗೆ ದೀಪೋತ್ಸವ ಕಾರ್ಯಕ್ರಮವನ್ನು ಸಂಭ್ರಮದಿಂದ ನೆರವೇರಿಸಲಾಯಿತು.

  ಮುಂಜಾನೆ 9 ಗಂಟೆಯಿಂದ ಶ್ರೀ ದೇವರಿಗೆ ರುದ್ರಾಭಿಷೇಕ -ಪಂಚಾಮೃತಾಭಿಶೇಕ-ಶ್ರೀ ಸೂಕ್ತ -ಪುರುಷಸೂಕ್ತ -ಕುಂಕುಮಾರ್ಚನೆಯೊಂದಿಗೆ ಅಷ್ಟೋತ್ತರ ಪೂಜೆ ಸಲ್ಲಿಸಿ, ಸಂಜೆ 7 ಘಂಟೆಯಿಂದ ಮಾತೃ ಮಂಡಳ ಸೋಂದಾ ಹಾಗೂ ಶ್ರೀ ಶಂಕರ – ನಾರಾಯಣ ಸ್ವ ಸಹಾಯ ಸಂಘಗಳ ಮಾತೆಯರಿಂದ ಭಗವದ್ಗೀತೆ ಪಠಣ,ಭಜನಾ ಕಾರ್ಯಕ್ರಮ ನಡೆಸಲಾಯಿತು.

  300x250 AD

  ನಂತರ ವೇ,ಮೂ, ನಾರಾಯಣ ಶಾಸ್ತ್ರಿಗಳು ಸಂಪೇಸರ ಇವರ ನೇತೃತ್ವದಲ್ಲಿ ವಿಶೇಷ ಪೂಜೆ ಮತ್ತು ದೀಪೋತ್ಸವ ಕಾರ್ಯಕ್ರಮವನ್ನು , ಶಿವರಾಮ ಮ. ಹೆಗಡೆ ದಂಪತಿಗಳ ಯಜಮಾನಿಕೆಯಲ್ಲಿ, ಹಾಗೂ ಗೌರವ ಅರ್ಚಕ ಸುಬ್ರಾಯ ಜೋಶಿ ಸಂಪೇಸರ, ಹಾಗೂ ಮಾಬ್ಲೇಶ್ವರ ಭಟ್ ಸಹಕಾರದಲ್ಲಿ ಭಕ್ತಿ ಪೂರ್ವಕವಾಗಿ ನೆರವೇರಿಸಲಾಯಿತು.ಈ ದೇವತಾರಾಧನೆಯಲ್ಲಿ, ಸೋಂದಾ ಜಾಗೃತ ವೇದಿಕೆಯ ಪದಾಧಿಕಾರಿಗಳು, ಸೋಂದಾ ಮಾತೃಮಂಡಳದ  ಮಾತೆಯರು, ಶ್ರೀ ಶಂಕರ- ನಾರಾಯಣ ಸ್ವ ಸಹಾಯ ಸಂಘಗಳ ಸದಸ್ಯರು ,ಸುಧಾಪುರ ಕ್ಷೇತ್ರದ ನಾಗರೀಕರು ಶ್ರದ್ಧಾ -ಭಕ್ತಿಯಿಂದ ಪಾಲ್ಗೊಂಡಿದ್ದರು.

  Share This
  300x250 AD
  300x250 AD
  300x250 AD
  Leaderboard Ad
  Back to top