Slide
Slide
Slide
previous arrow
next arrow

ಯಡಹಳ್ಳಿಯಲ್ಲಿ ನೂತನ ಸುಕರ್ಮ ಯಾಗ ಶಾಲೆ, ಸಭಾಭವನ; ಡಿ.11ಕ್ಕೆ‌ ಅನಾವರಣ

300x250 AD

ಶಿರಸಿ: ವೈದಿಕ ಕ್ಷೇತ್ರದಲ್ಲಿ ಇನ್ನಷ್ಟು ಸೌಲಭ್ಯ ಒದಗಿಸಿ ಸನಾತನ ಧರ್ಮದ ಭಕ್ತಿ ಭಾವನೆ ಕಾಪಾಡುವ ಆಶಯದಲ್ಲಿ ತಾಲೂಕಿನ ಯಡಹಳ್ಳಿಯಲ್ಲಿ ವಿಶಿಷ್ಟ ಧಾರ್ಮಿಕ ಕೇಂದ್ರವೊಂದು ನಿರ್ಮಾಣವಾಗಿದೆ.
ಋಷಿ ಪರಂಪರಾ‌ ಶೈಲಿಯಲ್ಲಿ ಮೂರು ಸಾವಿರ ಚದುರಡಿ ವಿಸ್ತೀರ್ಣದಲ್ಲಿ ಈ ಕಟ್ಟಡ ನಿರ್ಮಾಣಗೊಂಡಿದ್ದು ಡಿ.1, ಭಾನುವಾರದಂದು ಬೆಳಿಗ್ಗೆ 10ಗಂಟೆಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಈ ಕಟ್ಟಡದ ಫಲಕ ಅನಾವರಣಗೊಳಿಸಲಿದ್ದಾರೆ.
ಈ ಸುಕರ್ಮ ಕೇಂದ್ರದಲ್ಲಿ ಯಾಗ ಶಾಲೆ, ಸುಕರ್ಮ ಜೋತಿಷ್ಯ ಕೇಂದ್ರ, ಹಿರಿಯ ಸಹಕಾರಿ ಯಡಹಳ್ಳಿ ಭಾಸ್ಕರ ಮನೆ ಶಾಂತಾರಾಮ ಹೆಗಡೆ ಅವರ ನೆನಪಿನಲ್ಲಿ ಶಾಂತಣ್ಣ ಭಾಸ್ಕರಮನೆ ಸಭಾಭವನ ಕೂಡ ನಿರ್ಮಾಣವಾಗಿದೆ.
ಸ್ಥಳೀಯ ಯಡಹಳ್ಳಿ ಸೇವಾ ಸಹಕಾರಿ ಸಂಘದ ಮುಂಭಾಗದಲ್ಲಿ ಇರುವ ಈ ಕೇಂದ್ರವು ಭಾಸ್ಕರ ನ.ಹೆಗಡೆ ಅವರ ಒಡೆತನದ್ದಾಗಿದೆ. ಅಂಕಣಕಾರ, ಪ್ರಸಿದ್ಧ ಜೋತಿಷಿ ವಿ.ಡಿ. ಭಟ್ಟ‌ ಕರಸುಳ್ಳಿ ನೇತೃತ್ವದಲ್ಲಿ ಇನ್ನು‌ ಮುಂದೆ ಈ ಕೇಂದ್ರ ನಿರ್ವಹಣೆಗೊಳ್ಳಲಿದೆ.
ಈ ಕಟ್ಟಡವನ್ನು ಅಭಿಯಂತ ವಿ.ಎಂ.ಭಟ್ಟ ವಿನ್ಯಾಸಗೊಳಿಸಿದ್ದು, ಗಣೇಶ ಆಚಾರಿ ಗಿಡಮಾವಿನಕಟ್ಟೆ ನಿರ್ಮಾಣ ಮಾಡಿದ್ದಾರೆ.
ಧಾರ್ಮಿಕ ಚಟುವಟಿಕೆಗಳಿಗೆ ಇಲ್ಲಿ‌ ಮುಕ್ತ ಅವಕಾಶ ನೀಡಲಾಗುತ್ತಿದ್ದು, ಶಾಂತಣ್ಣ ಭಾಸ್ಕರಮನೆ ಸಭಾಭವನದಲ್ಲಿ ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರೋತ್ಸಾಹಿಸುವ ಕೆಲಸವನ್ನೂ ಮಾಡಲು ಉದ್ದೇಶಿಸಲಾಗಿದೆ ಎಂದು ಭಾಸ್ಕರ ಹೆಗಡೆ ಯಡಹಳ್ಳಿ ಹಾಗೂ ವಿ.ಡಿ.ಭಟ್ಟ ಕರಸುಳ್ಳಿ ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top