Slide
Slide
Slide
previous arrow
next arrow

ಪಡಿತರ ಚೀಟಿ ತಿದ್ದುಪಡಿಗೆ ಶಾಸಕ ದಿನಕರ ಶೆಟ್ಟಿ ಚಾಲನೆ

300x250 AD

ಕುಮಟಾ: ಹೊಸ ಪಡಿತರ ಚೀಟಿ ಮತ್ತು ಹಳೆ ಕಾರ್ಡಿನಲ್ಲಿ ಆನ್‌ಲೈನ್ ಮೂಲಕ ವಿವಿಧ ತಿದ್ದುಪಡಿಗಳಿಗೆ ಕ್ರಮ ಜರುಗಿಸಲು ಶಾಸಕ ದಿನಕರ ಶೆಟ್ಟಿ ಚಾಲನೆ ನೀಡಿದರು.
ಕಳೆದ ಕೆಲವು ವರ್ಷಗಳಿಂದ ಹೊಸ ಪಡಿತರ ಚೀಟಿಯ ನಿರೀಕ್ಷೆಯಲ್ಲಿದ್ದ ಜನರಿಗೆ ಸರ್ಕಾರ ಅವಕಾಶ ಕಲ್ಪಿಸಿಕೊಟ್ಟಿದೆ. ಬಿಪಿಎಲ್ ಹಾಗೂ ಎಪಿಎಲ್ ಕಾರ್ಡುಗಳಿಗೆ ನೂರಾರು ಸಂಖ್ಯೆಯಲ್ಲಿ ಅರ್ಜಿ ಸಲ್ಲಿಸಿದರು.ಅಲ್ಲದೆ ಪಡಿತರ ಚೀಟಿಯಲ್ಲಿ ಹೆಸರು ಸೇರ್ಪಡೆ, ಕಡಿತಗೊಳಿಸುವದು, ವಿಂಗಡಿಸುವದು ಹೀಗೆ ಹಲವು ಮಾರ್ಪಾಡುಗಳನ್ನು ಮಾಡಬೇಕಾದವರು ಸುದೀರ್ಘ ಸಮಯದಿಂದ ನಿರೀಕ್ಷೆಯಲ್ಲಿದ್ದರು. ಸರ್ಕಾರ ಆನ್‌ಲೈನ್ ಮೂಲಕ ಎಲ್ಲಾ ಪ್ರಕ್ರಿಯೆಗಳನ್ನು ನಡೆಸಲು ಆಯ್ಕೆ ನೀಡಿದೆ. ಹೀಗಾಗಿ ಬುಧವಾರ ಶಾಸಕ ದಿನಕರ ಶೆಟ್ಟಿ ತಹಶೀಲ್ದಾರ ಕಛೇರಿಯ ಆಹಾರ ನಾಗರಿಕ ಪೂರೈಕೆ ವಿಭಾಗಕ್ಕೆ ಆಗಮಿಸಿ ಪಡಿತರ ಚೀಟಿಗೆ ಸಂಬಂಧಿಸಿದಂತೆ ಜನರ ಹಲವಾರು ಬೇಡಿಕೆಗಳನ್ನು ಪಾಲಿಸಿದರು. ಅಲ್ಲದೆ ಜನರಿಂದ ಅರ್ಜಿಗಳನ್ನು ಸ್ವೀಕರಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಹೊಸ ಬಿಪಿಎಲ್ ಕಾರ್ಡುದಾರರಿಗೆ ಪ್ರಸ್ತುತ ಮಾನದಂಡಗಳನ್ನು ಪರಿಷ್ಕರಿಸಿ 5 ಮಾನದಂಡಗಳನ್ನು ನಿಗಧಿ ಪಡಿಸಿದೆ. ಸರ್ಕಾರದ ಅನುದಾನ ಪಡೆಯುತ್ತಿರುವ ಸಂಸ್ಥೆಗಳು ಸರ್ಕಾರಿ ಸೌಮ್ಯದ ಮಂಡಳಿ ನಿಗಮಗಳು ಇತ್ಯಾದಿ ಒಳಗೊಂಡ0ತೆ ಸೇವಾ ತೆರಿಗೆ, ವೃತ್ತಿ ತೆರಿಗೆ ಪಾವತಿಸುವ ಎಲ್ಲಾ ಕುಟುಂಬಗಳು. ಗ್ರಾಮೀಣ ಪ್ರದೇಶದಲ್ಲಿ 3 ಹೆಕ್ಟೇರ್ ಒಣ ಭೂಮಿ ಅಥವಾ ತತ್ಸಮಾನ ನೀರಾವರಿ ಭೂಮಿ ಹೊಂದಿರುವ ಕುಟುಂಬಗಳು ನಗರ ಪ್ರದೇಶದಲ್ಲಿ ಸಾವಿರ ಚದರ್ ಅಡಿಗಿಂತ ಹೆಚ್ಚು ವಿಸ್ತಿರ್ಣದ ಪಕ್ಕಾ ಮನೆ ಹೊಂದಿರುವ ಕುಟುಂಬಗಳು, ಜೀವನೋಪಾಯಕ್ಕಾಗಿ ಓಡಿಸುವ ಒಂದು ವಾಣಿಜ್ಯ ವಾಹನ ನಾಲ್ಕು ಚಕ್ರದ ವಾಹನಗಳನ್ನು ಹೊಂದಿರುವ ಎಲ್ಲಾ ಕುಟುಂಬಗಳು. ಪ್ರತಿ ತಿಂಗಳು 150ಕ್ಕಿಂತ ಹೆಚ್ಚು ವಿದ್ಯುತ್ ಯುನಿಟ್ ಬಳಕೆ ಮಾಡುವ ಕುಟುಂಬಗಳು. ವಾರ್ಷಿಕ ಆದಾಯ 1.20 ಲಕ್ಷಗಳಿಗಿಂತಲೂ ಹೆಚ್ಚು ಇರುವ ಕುಟುಂಬಗಳು. ಸೂಚಿತ ಮಾನದಂಡವನ್ನು ಗುರುತಿಸಲಾದ ಆದ್ಯತೇತರ ಕುಟುಂಬಗಳನ್ನು ಹೊರತು ಪಡಿಸಿ ಉಳಿದ ಕುಟುಂಬಗಳು ಆದ್ಯತಾ ಪಡೆತರ ಚೀಟಿಯನ್ನು ಪಡೆಯಲು ಅರ್ಹ ಕುಟುಂಬಗಳೆ0ದು ಪರಿಗಣಿಸಲಾಗುತ್ತದೆ. ಪಡಿತರ ಚೀಟಿ ನೀಡುವ ಪ್ರಕ್ರಿಯೆ ಡಿ.15ರವರೆಗೆ ನಡೆಯಲಿದೆ ಎಂದು ಕಂದಾಯ ಅಧಿಕಾರಿಗಳು ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top