Slide
Slide
Slide
previous arrow
next arrow

ಜ. 8ಕ್ಕೆ ಶಿರಸಿಯಲ್ಲಿ ಮುಕ್ತ ಚದುರಂಗ ಪಂದ್ಯಾವಳಿ

300x250 AD

ಶಿರಸಿ: ಉತ್ತರ ಕನ್ನಡ ಜಿಲ್ಲಾ ಚದುರಂಗ ಸಂಘ ಹಾಗೂ ಭಟ್ ಚದುರಂಗ ಶಾಲಾ ಆಶ್ರಯದಲ್ಲಿ ಜ.8 2023, ಭಾನುವಾರ ಮುಂಜಾನೆ 9 ಗಂಟೆಗೆ ಮುಕ್ತ ಚದುರಂಗ ಪಂದ್ಯಾವಳಿಯನ್ನು ಸಾಮ್ರಾಟ್ ಹೊಟೆಲ್, ವಿನಾಯಕ ಕಾಲನಿ ಶಿರಸಿಯಲ್ಲಿ ಆಯೋಜಿಸಲಾಗಿದೆ. ಪಂದ್ಯಾವಳಿಯು ರೂ. 70,000/- ನಗದು ಹಾಗು 24 ಟ್ರೋಫಿಗಳನ್ನೊಳಗೊಂಡಿರುತ್ತದೆ. ಪ್ರವೇಶ ಶುಲ್ಕ ರೂ. 500 ಮಾತ್ರ ಇದ್ದು, ಪಂದ್ಯಾವಳಿಯು ಫಿಡೆ ಸ್ವಿಸ್ ಮಾದರಿಯಲ್ಲಿ 15 ನಿಮಿಷ ಮತ್ತು 5 ಸೆಕೆಂಡ್ ಪ್ರತಿ ನಡೆಗೆ ಹೆಚ್ಚುವರಿ ಸೇರ್ಪಡೆಯಾಗಿ ಜರುಗಲಿದೆ. ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಆಟಗಾರರಿಗೆ ಉಚಿತವಾಗಿ ನೀಡಲಾಗುತ್ತದೆ.

ಆಸಕ್ತ ಚದುರಂಗ ಆಟಗಾರರು ಜ.6 ರೊಳಗಾಗಿ ತಮ್ಮ ಹೆಸರನ್ನು ನೊಂದಾಯಿಸುವದು ಕಡ್ಡಾಯವಾಗಿದ್ದು, ಆಟಗಾರರು ತಮ್ಮ ಅರ್ಜಿಯನ್ನು https://forms.gle/EuzeqTo1hgxzJmj76 ಲಿಂಕ್ ಮುಖಾಂತರ ರವಾನಿಸಿ, ನವೀನ ಹೆಗಡೆ ವಾಟ್ಸ್ ಆಪ್ ನಂ- 9480621062 ಕ್ಕೆ ಜಿ-ಪೇ ಅಥವಾ ಫೋನ್ ಪೇ ಮುಖಾಂತರ ಹಣ ವರ್ಗಾವಣೆ ಮಾಡಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಆನಂದ ಸ್ವಾಮಿ ಮೊ: 8762480128 ಅಥವಾ ರವಿ ಹೆಗಡೆ ಮೊ: 8073230690 ಇವರನ್ನು ಸಂಪರ್ಕಿಸಬಹುದಾಗಿದೆ.

300x250 AD
Share This
300x250 AD
300x250 AD
300x250 AD
Back to top