ಶಿರಸಿ: ಕಾರವಾರದಲ್ಲಿ ನಡೆದ ಜಿಲ್ಲಾ ಮಟ್ಟದ ಯುವಜನೋತ್ಸವದಲ್ಲಿ ಇಲ್ಲಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ ವಿವಿಧ ವಿಭಾಗದಲ್ಲಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಏಕಾಂಕ ನಾಟಕ ವಿಭಾಗದಲ್ಲಿ ಸೌಮ್ಯ ಎನ್.ಗಾಣಿಗ ಪ್ರಥಮ, ಜನಪದ ಗೀತೆಯಲ್ಲಿ ಸಂದೀಪ ಮರಾಠೆ, ಪ್ರಿಯಾಂಕಾ ಹೆಗಡೆ, ನಂದಿನಿ ಹೇರೂರು, ದಿವ್ಯಾ ಹೆಗಡೆ, ನಿಖಿಲಾ ಹೆಗಡೆ, ರಜತಾ ಹೆಗಡೆ, ಸೀತಾ ಹೆಗಡೆ, ಭಾರ್ಗವ ನಾಯ್ಕ ಸಂಗಡಿಗರು ದ್ವಿತೀಯ ಮತ್ತು ಆಶುಭಾಷಣದಲ್ಲಿ ಪ್ರಸನ್ನ ಮರಾಠಿ ತೃತೀಯ ಹಾಗೂ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಸಂದೀಪ ಮರಾಠಿ ಪ್ರಥಮ ಸ್ಥಾನ ಪಡೆದು ಕಾಲೇಜಿಗೆ ಹೆಮ್ಮೆ ತಂದಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಪ್ರಾಂಶುಪಾಲರಾದ ಡಾ.ದಾಕ್ಷಾಯಣಿ ಜಿ.ಹೆಗಡೆ ಮತ್ತು ಸಾಂಸ್ಕೃತಿಕ ವೇದಿಕೆ ಸಂಚಾಲಕ ಡಾ.ಸತೀಶ ಎನ್.ನಾಯ್ಕ, ಕ್ರೀಡಾ ಸಂಚಾಲಕ ಭುವನೇಶ್ವರ ವಿ.ಬಿ., ರಾಘವೇಂದ್ರ ಶೆಟ್ಟಿ ಹರ್ಷ ವ್ಯಕ್ತಪಡಿಸಿದ್ದಾರೆ.
ಮ್ಯಾರಾಥಾನ್‌ನಲ್ಲಿ ರನ್ನರ್ ಅಪ್
ಕಾಲೇಜಿನ ಬಿ.ಎ ಅಂತಿಮ ವರ್ಷದ ವಿದ್ಯಾರ್ಥಿ ಮದನ ಭಟ್ ಹುಬ್ಬಳ್ಳಿಯ ಕೆ.ಎಲ್.ಇ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ವತಿಯಿಂದ ಆಯೋಜಿಸಿದ್ದ 10 ಕಿ.ಮೀ. ಮ್ಯಾರಾಥಾನ್ ಮತ್ತು ಮಂಗಳೂರು ನಿವಿಯಸ್ ಮ್ಯಾರಾಥಾನ್‌ನಲ್ಲಿ 10 ಕಿ.ಮೀ. ವಿಭಾಗದಲ್ಲಿ ಭಾಗವಹಿಸಿ ರನ್ನರ್ ಆಪ್ ಫಿನಿಶರ್ ಪ್ರಶಸ್ತಿಗೆ ಭಾಜನರಾಗಿದ್ದಾನೆ.