Slide
Slide
Slide
previous arrow
next arrow

ಮತದಾರರ ಪಟ್ಟಿ ಪರಿಶೀಲಿಸಲು ಕಾಂಗ್ರೆಸ್ ಜಾಗೃತಿ ಸಭೆ

300x250 AD

ಸಿದ್ದಾಪುರ: ಬ್ಲಾಕ್ ಕಾಂಗ್ರೆಸ್ ಸಮಿತಿಯು ತಾಲೂಕಿನ ವಿವಿಧ ಗ್ರಾಮ ಪಂಚಾಯತಗಳಲ್ಲಿ ಬೂತ್ ಏಜೆಂಟ್‌ಗಳಿಗೆ ಮತ್ತೊಮ್ಮೆ ಮತದಾರರ ಪಟ್ಟಿಯನ್ನು ಮತ್ತು ಡಿಲಿಟ್ ಆದವರ ಹೆಸರನ್ನು ಪರಿಶೀಲಿಸಲು ಜಾಗೃತಿ ಸಭೆಗಳನ್ನು ನಡೆಸುತ್ತಿದೆ. ಅದರಂತೆ ತಂಡ ನಿಲ್ಕುಂದ, ತಂಡಾಗುಂಡಿ , ಹೆಗ್ಗರಣೆ, ಅಣಲೇಬೈಲು, ಹಸರಗೋಡು, ಕಾನಸೂರು ಮತ್ತು ತ್ಯಾಗಲಿ ಪಂಚಾಯತಿ ವ್ಯಾಪ್ತಿಗೆ ಭೇಟಿ ನೀಡಿತು.
ಬಿಜೆಪಿ ಸರ್ಕಾರದಲ್ಲಿ ಮತದಾರರ ಪಟ್ಟಿಯಲ್ಲಿ ಅನೇಕರ ಹೆಸರುಗಳು ಡಿಲಿಟ್ ಆಗಿದ್ದು, ಈ ನಿಟ್ಟಿನಲ್ಲಿ ಬ್ಲಾಕ್ ಕಾಂಗ್ರೆಸ್ ಬೂತ್ ಏಜೆಂಟ್‌ಗಳಿಗೆ ಮತ್ತೊಮ್ಮೆ ಮತದಾರರ ಪಟ್ಟಿಯನ್ನು ಮತ್ತು ಡಿಲಿಟ್ ಆದವರ ಹೆಸರನ್ನು ಪರಿಶೀಲಿಸಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ಎಲ್.ನಾಯ್ಕ, ಸಿ.ಆರ್.ನಾಯ್ಕ, ಬಾಲಕೃಷ್ಣ ನಾಯ್ಕ, ಸೀತಾರಾಮ ಗೌಡ, ಚಂದ್ರಶೇಖರ್ ಗೌಡ, ಸೀಮಾ ಹೆಗಡೆ, ಅಬ್ದುಲ್ಲಾ ಶರೀಫ್ ಸಾಬ್, ಪಾಂಡುರಂಗ ನಾಯ್ಕ, ಗಾಂಧೀಜಿ ಆರ್ ನಾಯ್ಕ, ಮಂಜುನಾಥ ಹೆಗಡೆ, ಅರುಣ ಬಣಗಾರ, ಆನಂದ ಪೈ ಸೇರಿದಂತೆ ಆಯಾ ಪಂಚಾಯತಿ ಘಟಕ ಅಧ್ಯಕ್ಷರು, ಬೂತ್ ಅಧ್ಯಕ್ಷರು ಮತ್ತು ಕಾಂಗ್ರೆಸ್ ಬೆಂಬಲಿತ ಚುನಾಯಿತ ಪಂಚಾಯತ್ ಸದಸ್ಯರು ತೆರಳಿ ಪರಿಶೀಲಿಸಿದರು.

300x250 AD
Share This
300x250 AD
300x250 AD
300x250 AD
Back to top