ಮುಂಡಗೋಡ: ಜಿಲ್ಲಾ ಪಂಚಾಯತಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ತಾಲೂಕ ಪಂಚಾಯತಿ, ಪಟ್ಟಣ ಪಂಚಾಯತಿ ಹಾಗೂ ಭಾರತ ಸೇವಾದಳದ ಸಂಯುಕ್ತಾಶ್ರಯದಲ್ಲಿ ಭಾರತ ಸೇವಾದಳ ಶಿಕ್ಷಕ- ಶಿಕ್ಷಕಿಯರ ಪುನಃಶ್ಚೇತನ ಶಿಬಿರವನ್ನು ಪಟ್ಟಣದ ಪುರಸಭಾ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಪಟ್ಟಣ ಪಂಚಾಯತಿ ಅಧ್ಯಕ್ಷೆ ಜಯಸುಧಾ ಭೋವಿವಡ್ಡರ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ರಾಮಕೃಷ್ಣ ಮೂಲಿಮನಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪ್ರಭಾರ ಬಿಇಒ ಅಕ್ಕಮಹಾದೇವಿ ಗಾಣಿಗೇರ, ಎಲ್.ಟಿ.ಪಾಟೀಲ, ಎಮ್.ಪಿ.ಕುಸೂರ, ಸಿ.ಕೆ.ಅಶೋಕ, ಪ.ಪಂ ಉಪಾಧ್ಯಕ್ಷ ಶ್ರೀಕಾಂತ ಸಾನು, ಶಿವಮೂರ್ತಿ ಎಚ್.ಆರ್., ದಯಾನಂದ ನಾಯ್ಕ್, ಡಾ.ರಮೇಶ ಅಂಬಿಗೇರ, ಸೋಮಣ್ಣ ಮುಡೆಣ್ಣವರ, ಬಿಆರ್‌ಸಿ ಜಿ.ಎನ್.ನಾಯ್ಕ, ಪ್ರದೀಪ ಕುಲಕರ್ಣಿ, ಸರೋಜಾ, ವಿದ್ಯಾ ನಾಯ್ಕ ಹಾಗೂ ಇತರರು ಉಪಸ್ಥಿತರಿದ್ದರು.
ಶಾಸಕರ ಮಾದರಿ ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಗೌರವ ರಕ್ಷೆ ಹಾಗೂ ಸರ್ವಧರ್ಮ ಪ್ರಾರ್ಥನೆ ನಾಗರಾಜ ಕಳಲಕೊಂಡ ನಿರ್ವಹಿಸಿದರು. ಮಂಜುನಾಥ ಕಲಾಲ ಸ್ವಾಗತಿಸಿದರು, ರಾಮಚಂದ್ರ ಹೆಗಡೆ ಪ್ರಾಸ್ತಾವಿಕ ಮಾತನಾಡಿದರು. ಕೆ.ಕೆ.ಕರುವಿನಕೊಪ್ಪ ನಿರೂಪಿಸಿದರು. ಎನ್.ಎಸ್.ಹೆಗಡೆ ವಂದಿಸಿದರು.