Slide
Slide
Slide
previous arrow
next arrow

ಸುಪ್ರೀಂ ಕೋರ್ಟಿನಲ್ಲಿ ತಿದ್ದುಪಡಿ ಪ್ರಮಾಣ ಪತ್ರ ಸಲ್ಲಿಸದಿದ್ದಲ್ಲಿ ಅತಿಕ್ರಮಣದಾರರು ಅತಂತ್ರ: ರವೀಂದ್ರ ನಾಯ್ಕ

300x250 AD

ಕುಮಟಾ : ಅರಣ್ಯವಾಸಿಗಳ ಅರಣ್ಯ ಹಕ್ಕಿಗೆ ಸ್ಫಂದಿಸಿ, ಸರಕಾರ ಕಾನೂನಾತ್ಮಕವಾಗಿ ಸುಪ್ರೀಂ ಕೋರ್ಟಿನಲ್ಲಿ ಸ್ಫಂದಿಸದಿದ್ದಲ್ಲಿ ಅರಣ್ಯವಾಸಿಗಳು ಅತಂತ್ರವಾಗುವುದರಲ್ಲಿ ಸಂಶಯವಿಲ್ಲ, ಆದ್ದರಿಂದ ಸುಫ್ರೀಂ ಕೋರ್ಟನಲ್ಲಿ ಅರಣ್ಯವಾಸಿಗಳ ಪರವಾಗಿ ರಾಜ್ಯಸರಕಾರ  ತಿದ್ದುಪಡಿ ಪ್ರಮಾಣ ಪತ್ರ ಸಲ್ಲಿಸುವಂತೆ ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಸರಕಾರಕ್ಕೆ ಹೇಳಿದರು.

 ಅವರು ಕುಮಟಾದ ಮಾಸ್ತಿಕಟ್ಟೆ ಸಭಾಭವನದಲ್ಲಿ ಜರುಗಿದ ತಾಲೂಕ ಅರಣ್ಯ ಅತಿಕ್ರಮಣದಾರರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

 ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ತಿರಸ್ಕಾರವಾದ ಅರಣ್ಯ ಅತಿಕ್ರಮಣದಾರನ್ನು ಹಂತ ಹಂತವಾಗಿ ಒಕ್ಕಲೆಬ್ಬಿಸಲಾಗುದೆಂದು ರಾಜ್ಯ ಸರಕಾರ ಸುಪ್ರೀಂ ಕೋರ್ಟಿನಲ್ಲಿ ಪ್ರಮಾಣ ಪತ್ರ ಸಲ್ಲಿಸಿರುವ ಹಿನ್ನೆಲೆಯಲ್ಲಿ ಅರಣ್ಯವಾಸಿಗಳು ಭೂಮಿ ಹಕ್ಕಿನಿಂದ ವಂಚಿತರಾಗುವರೆ0ದು ಅವರು ಹೇಳಿದರು.

300x250 AD

 ಸಭೆಯಲ್ಲಿ ತಾಲೂಕ ಅಧ್ಯಕ್ಷ ಮಂಜುನಾಥ ಮರಾಠಿ ಅಧ್ಯಕ್ಷತೆ ವಹಿಸಿದ್ದರು, ಕಾರ್ಯಕ್ರಮದಲ್ಲಿ ಜಗದಿಶ್ ಹರಿಕಾಂತ, ಸೀತಾರಾಮ ನಾಯ್ಕ ಬೊಗ್ರಿಬೈಲ್, ಪರಶುರಾಮ ಕರಿಕಟ್ಟಿ ಹೆಗಡೆ, ವೆಂಕಟ್ರಮಣ ಪಟಗಾರ ಚಿತ್ರಗಿ, ಯಾಕೂಬ್ ಬೆಟ್ಕುಳಿ, ಸಾರಂಬಿ ಬೆಟ್ಕುಳಿ, ಸುರೇಶ್ ಭಟ್ಟ ನಾಗೂರು, ರಾಮಚಂದ್ರ ಮರಾಠಿ ಸೇಡಿಗದ್ದೆ, ಕುಪ್ಪಯ್ಯ ಪಟಗಾರ್ ಕೋಡ್ಕಣಿ, ಮಹೇಂದ್ರ ನಾಯ್ಕ ಕತಗಾಲ್, ಕೈರುನ್ನಿಸಾ ಕಿಮಾನಿ, ಸದಾನಂದ ನಾಯ್ಕ, ಭವಾನಿ ಲುಮ್ಮ ಮರಾಠಿ ಶೆಡಿಗದ್ದೆ  ಮುಂತಾದವರು ಉಪಸ್ಥಿತರಿದ್ದರು.

ರಾಜ್ಯಾದ್ಯಂತ ಸಂಘಟನೆ:
 ಅರಣ್ಯವಾಸಿಗಳ ಅರಣ್ಯ ಭೂಮಿ ಹಕ್ಕಿಗಾಗಿ ರಾಜ್ಯಾದ್ಯಂತ ತೀವ್ರ ಸ್ವರೂಪದ ಹೋರಾಟ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ, ಹೋರಾಟದಿಂದ ಮಾತ್ರ ಅರಣ್ಯ ಭೂಮಿ ಹಕ್ಕು ಸಿಗಲು ಸಾಧ್ಯ ಎಂದು ರವೀಂದ್ರ ನಾಯ್ಕ ಹೇಳಿದರು.

Share This
300x250 AD
300x250 AD
300x250 AD
Back to top