ಕಾರವಾರ: ಜಿಲ್ಲೆಯಲ್ಲಿ ಡಿಸೆಂಬರ್ 16ರಂದು ವಿಜಯ ದಿವಸವನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಹೇಳಿದರು.
ವಿಜಯ ದಿವಸ ಆಚರಣೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 1971ರ ಭಾರತ- ಪಾಕಿಸ್ತಾನ ಯುದ್ಧದಲ್ಲಿ ವೀರ ಮರಣ ಹೊಂದಿದ ಹಾಗೂ ಗಾಯಗೊಂಡ ಯೋಧರ ನೆನಪಿನ ಗೌರವಾರ್ಥವಾಗಿ ದೇಶಾದ್ಯಂತ ವಿಜಯ ದಿವಸ ಆಚರಿಸಲಾಗುತ್ತದೆ. ಹಾಗೆಯೇ ಜಿಲ್ಲೆಯಲ್ಲೂ ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ಆಚರಿಸಲಾಗುವುದು ಎಂದರು.
ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕಿ, ಕಮಾಂಡರ್ ಇಂದುಪ್ರಭಾ ಕಾರ್ಯಕ್ರಮದ ನಡಾವಳಿಯನ್ನು ಸಭೆಯಲ್ಲಿ ಪ್ರಸ್ತುತಪಡಿಸಿದರು. ಸಭೆಯಲ್ಲಿ ಐಎನ್‌ಎಸ್ ಕದಂಬ ಪ್ರತಿನಿಧಿಗಳಾದ ಶಾಂತನು, ಬಿ.ಕೆ.ಬರಿಕ್, ಎಸ್.ಎಫ್.ಗಾಂವ್ಕರ್, ನೇವಿ ಎನ್‌ಸಿಸಿ ಅಧಿಕಾರಿ ನೀರಜ್‌ಕುಮಾರ್ ಮತ್ತು ಇತರ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
*
ಡಿ.16 ಕ್ಕೆ ಅರ್ಥಪೂರ್ಣವಾಗಿ ವಿಜಯ ದಿವಸ ಆಚರಣೆ: ಡಿಸಿ
