• Slide
    Slide
    Slide
    previous arrow
    next arrow
  • ಭೈರುಂಭೆಯಲ್ಲಿ ಯಶಸ್ವಿಯಾಗಿ ಜರುಗಿದ ಕಲರವೋತ್ಸವ 2022

    300x250 AD

    ಶಿರಸಿ: ಕಲರವ ಸೇವಾ ಸಂಸ್ಥೆಯಿಂದ ತಾಲೂಕಿನ ಭೈರುಂಬೆಯ ಹುಳಗೋಳ ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ನ. 27 ರಂದು ಆಯೋಜಿಸಲಾಗಿದ್ದ ‘ಕಲರವೋತ್ಸವ 2022’ ದೇಶಭಕ್ತಿಗೀತೆಗಳಿಗೆ ಸಂಬಂಧಿಸಿದ ಗುಂಪು ನೃತ್ಯಸ್ಪರ್ಧೆ ಕಾರ್ಯಕ್ರಮವು ಜನರ ಮನಸೂರೆಗೊಂಡಿತು. ಜಿಲ್ಲಾಮಟ್ಟದ ನೃತ್ಯ ಕಲರವ ಸ್ಪರ್ಧೆಯಲ್ಲಿ ಹೊನ್ನಾವರದ ಓಷಿಯನ್ ಹಾರ್ಟ್ ಬ್ರೇಕರ್ಸ್ ತಂಡವು ಪ್ರಥಮ, ಸೋಂದಾದ ಕಲಾರ್ಪಣ ಕಲಾ ಕೇಂದ್ರ ದ್ವಿತೀಯ ಹಾಗೂ ಯಲ್ಲಾಪುರದ ಭಾರತಿ ನೃತ್ಯ ಕಲಾ ಕೇಂದ್ರ ತಂಡವು ತೃತೀಯ ಸ್ಥಾನ ಪಡೆದವು.
    ಕಲರವೋತ್ಸವ 2022 ಕಾರ್ಯಕ್ರಮದಲ್ಲಿ ಶಿಕ್ಷಣ, ಸೈನ್ಯ, ಹೈನುಗಾರಿಕೆ ಮತ್ತು ಪಶುವೈದ್ಯಕೀಯ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಲಾಯಿತು. ಗ್ರಾಮೀಣ ಭಾಗದಲ್ಲಿ ಕಲರವ ಸೇವಾ ಸಂಸ್ಥೆಯು ಆಯೋಜಿಸುತ್ತಿರುವ ಕಾರ್ಯಕ್ರಮಗಳ ಕುರಿತು ಆಗಮಿಸಿದ ಅತಿಥಿಗಳಿಂದ ಮೆಚ್ಚುಗೆಯ ಮಾತುಗಳು ಕೇಳಿಬಂದವು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top