ಕಾರವಾರ: ಕಾಂಗ್ರೆಸ್ ಅಪರಾಧಿಗಳ ಪಕ್ಷ ಮತ್ತು ಜಿಹಾದಿ ಮನಸ್ಥಿತಿಯ ಪಕ್ಷವಾಗಿದ್ದು, ಕಾಂಗ್ರೆಸ್ಸಿನಿಂದಾಗಲಿ ಅಥವಾ ಅಂಕೋಲಾದ ಕೆಪಿಸಿಸಿ ಮಾಜಿ ಕಾರ್ಯದರ್ಶಿಯವರಿಂದಾಗಲಿ ಬಿಜೆಪಿ ಏನೂ ಕಲಿಯಬೇಕಾದ ಅಗತ್ಯವಿಲ್ಲವೆಂದು ಜಿಲ್ಲಾ ಬಿಜೆಪಿ ಹಿಂದುಳಿದ ಮೋರ್ಚಾದ ವಕ್ತಾರ ಮನೋಜ್ ಭಟ್ ತಿಳಿಸಿದ್ದಾರೆ.
ಅಮಾಯಕ ಮೂರು ಸಾವಿರ ಸಿಖ್ ಜನರನ್ನು ಹುರಿದು ಮುಕ್ಕಿದ್ದು ಕಾಂಗ್ರೆಸ್ ಪಕ್ಷವಾಗಿದೆ. ಶಾಸ್ತ್ರಿ ಮತ್ತು ಸುಭಾಷಚಂದ್ರ ಭೋಸ್ ಹೇಗೆ ಅಂತ್ಯ ಕಂಡರು ಎನ್ನುವುದನ್ನು ಕಾಂಗ್ರೆಸ್ಸೇ ಹೇಳಬೇಕು. ಸಿದ್ದರಾಮಯ್ಯನವರ ಸರ್ಕಾರ ಇದ್ದಾಗ ಸುಮಾರು ಮೂವತ್ತಕ್ಕಿಂತಲೂ ಹೆಚ್ಚು ಹಿಂದೂ ಕಾರ್ಯಕತರ ಕಗ್ಗೊಲೆ ಆಗಿದ್ದನ್ನು ಈ ರಾಜ್ಯ ಮರೆತಿಲ್ಲ. ಆದ್ದರಿಂದ ರಾಜಕೀಯದ ಇತಿಹಾಸವನ್ನು ಮತ್ತು ಕನಿಷ್ಠ ಶಿಕ್ಷಣವನ್ನು ಪಡೆದು ಕೆಪಿಸಿಸಿ ಮಾಜಿ ಕಾರ್ಯದರ್ಶಿ ಮಾತನಾಡಲಿ ಎಂದಿದ್ದಾರೆ. ತಿಹಾರ ಜೈಲಿಗೆ ಹೋಗಿ ಬಂದ ಅಧ್ಯಕ್ಷನನ್ನು ಹೊಂದಿರುವ ಪಕ್ಷವಾಗಿದೆ. ಕೈಗೆ ಯಾರೋ ಕೊಟ್ಟ ಒಂದು ಕೋಟಿ ಕೈ ಗಡಿಯಾರವನ್ನು ಕಟ್ಟಿದ ನಾಯಕನ ಪಕ್ಷ ಅಮಾಯಕ ವ್ಯಕ್ತಿಗೆ ಗನ್ ತೋರಿಸಿ ಹೆದರಿಸಲು ನೋಡಿದ ನಾಯಕನ ಪಕ್ಷದಿಂದ ಬಿಜೆಪಿ ಏನೂ ಕಲಿಯುವುದು ಉಳಿದಿಲ್ಲ ಎಂದು ಟೀಕಿಸಿದ್ದಾರೆ.
ಕಾಂಗ್ರೆಸ್ಸಿನವರು ಇಂದು ಕ್ರಿಮಿನಲ್ ವಾಮಾಚಾರ ಮಾಡುತ್ತಾ ಕೈಯಲ್ಲಿ ಗನ್ ಹಿಡಿದು ಓಡಾಡುತ್ತಿರುವವರ ಪಕ್ಷವಾಗಿದೆ. ಪೊಲೀಸರು ಗನ್ ಜಪ್ತಿ ಮಾಡಿದ ನಂತರ ಜಾತ್ರೆಗೆ ಬರುವ ಗನ್ನೇ ಇವರಿಗೆ ಗತಿಯಾಗಲಿದೆ. ಕಾಂಗ್ರಸ್ಸಿನ ಕನಿಷ್ಠ ಶಿಕ್ಷಣ ಹೊಂದದ ನಾಯಕರಿಂದ ತಲೆಯೆತ್ತಿ, ಎದೆಯುಬ್ಬಿಸಿ ನಡೆಯುವ ರಾಷ್ಟ್ರಭಕ್ತ ಬಿಜೆಪಿ ಕಾರ್ಯಕರ್ತರು ಏನೂ ಕಲಿಯಬೇಕಿಲ್ಲ ಎಂದು ಕಿಡಿಕಾರಿದ್ದಾರೆ. ಪರೇಶ್ ಮೇಸ್ತ ಪ್ರಕರಣದಲ್ಲಿ ಕಾಂಗ್ರೆಸ್ ಹೇಗೆಲ್ಲಾ ಅನ್ಯಾಯವೆಸೆಗಿದೆ ಎನ್ನುವುದನ್ನು ದಾಖಲೆ ಸಮೇತ ನಾವು ಮುಂದಿಟ್ಟು ಚರ್ಚೆಗೆ ಸಿದ್ಧ. ಅಲ್ಲಿಯವರೆಗೆ ರಾತ್ರಿ ಶಾಲೆಗಾದರೂ ಹೋಗಿ, ಶಿಕ್ಷಣ ಕಲಿತು, ಪರೇಶ್ ಪ್ರಕರಣದಲ್ಲಿನ ಫಿರ್ಯಾದು,ಅಂದಿನ ಸಿದ್ದರಾಮಯ್ಯ ಸರ್ಕಾರದ ನಿರ್ಲಕ್ಷ್ಯದ ಕುರಿತಂತೆ ಜೆ.ಎಮ್.ಫ್.ಸಿ ನ್ಯಾಯಾಲಯ ಅರ್ಜಿ ವಜಾ ಮಾಡಿದ ಆದೇಶ ಇವುಗಳನ್ನ ಓದಿ ಬನ್ನಿ ಎಂದು ಉಪದೇಶಿಸಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ವ್ಯಕ್ತಿಯದಷ್ಟೇ ಅಲ್ಲದೇ ಪ್ರಕರಣದ ತಿಥಿ ಹೇಗೆ ಮಾಡಬೇಕೆಂಬುದು ತಿಳಿದಿದೆ. ಕಳೆದೆರಡು ವರ್ಷಗಳ ಹಿಂದೆ ಹಟ್ಟಿಕೇರಿಯ ಟೋಲ್ ಬಳಿ ಸತೀಶ್ ಸೈಲ್ ಮತ್ತು ನಮ್ಮ ಪಕ್ಷದ ಶಾಸಕರ ಸಮ್ಮುಖದಲ್ಲಿ ನಾನು ಕಾಂಗ್ರೆಸ್ ಪಕ್ಷಕ್ಕೆ ಓಟ್ ಹಾಕಲಿಲ್ಲ, ಬಿಜೆಪಿಗೆ ಓಟ್ ಹಾಕಿದ್ದೆ ಎಂದು ಕೆಪಿಸಿಸಿ ಮಾಜಿ ಕಾರ್ಯದರ್ಶಿ ಹೇಳುವುದನ್ನು ಕೇಳಿದ್ದೆ. ಮತ್ಯಾವಾಗ ಇವರು ಕಾಂಗ್ರೆಸ್ ಆಗಿದ್ದಾರೆ ಎನ್ನುವುದು ಯಕ್ಷ ಪ್ರಶ್ನೆ ಆಗಿದೆ ಎಂದು ಮನೋಜ್ ಭಟ್ ವ್ಯಂಗ್ಯವಾಡಿದ್ದಾರೆ.