• Slide
    Slide
    Slide
    previous arrow
    next arrow
  • ಅಕ್ಷರದಾಸೋಹ ನೌಕರರು, ಅಧಿಕಾರಿಗಳ ಸಭೆ ನಡೆಸಿದ ಸಿಇಒ

    300x250 AD

    ಕಾರವಾರ: ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಿಯಾಂಗಾ ಅವರ ಅಧ್ಯಕ್ಷತೆಯಲ್ಲಿ ಸಿಐಟಿಯು ಸಂಯೋಜಿತ ಅಕ್ಷರದಾಸೋಹ ನೌಕರರ ಸಂಘದ ಪ್ರತಿನಿಧಿಗಳು ಹಾಗೂ ಯೋಜನೆಯ ಜಿಲ್ಲಾ ಮಟ್ಟದ ಅಧಿಕಾರಿಗಳ ಜಂಟಿ ಸಭೆ ಜಿ.ಪಂ ಸಭಾಭವನದಲ್ಲಿ ನಡೆಯಿತು.
    ಯೋಜನೆಯ ಅನುಷ್ಠಾನದಲ್ಲಿ ಅಡುಗೆ ಸಿಬ್ಬಂದಿಗಳು ಎದುರಿಸುತ್ತಿರುವ ಸಮಸ್ಯೆಗಳ ಆಧಾರದಲ್ಲಿ ಚರ್ಚೆಗಳು ಮೂಡಿಬಂದವು. 18-20 ವರ್ಷ ಕೆಲಸ ಮಾಡಿದವರನ್ನು ವಯಸ್ಸಿನ ಕಾರಣಕ್ಕೆ ಕೆಲಸದಿಂದ ಕೈಬಿಟ್ಟು ನಿವೃತ್ತಿ ಸೌಲಭ್ಯ ಇಡಿಗಂಟು ಕೊಡುವುದು, ಶಾಲೆಯ ಬಿಸಿಯೂಟ ಕೆಲಸದ ಅವಧಿ ಆರು ತಾಸು ಎಂದು ಅಧಿಕೃತ ನಮೂದಿಸುವುದು ಮತ್ತು ಎಂಟು ತಾಸಿಗೆ ವಿಸ್ತರಿಸುವುದು, ನರೇಗಾ ಉದ್ಯೋಗವನ್ನು ಶಾಲಾ ಕೈತೋಟದಲ್ಲಿ ಮಾಡಿಸಿ ಕನಿಷ್ಟ ಕೂಲಿ ನೀಡುವುದು, ವಿಮಾ ಸೌಲಭ್ಯ ನೀಡುವುದು, ಆರೋಗ್ಯ ನಿಧಿ ನೀಡುವುದು, ಅಪಘಾತ ಪರಿಹಾರ ಮೊತ್ತ ಹೆಚ್ಚಿಸುವುದು, ರಜಾ ಸೌಲಭ್ಯ, ಹೆರಿಗೆ ರಜೆ ನೀಡುವುದು ಇತ್ಯಾದಿ ಜೊತೆಗೆ ಜಿಲ್ಲಾ ಮಟ್ಟದಲ್ಲಿ ಈಡೇರಿಸಲೇಬೇಕಾದ ಸಮಸ್ಯೆಗಳ ಕುರಿತು ಮುಂದಿಟ್ಟು ಚರ್ಚಿಸಲಾಯಿತು.
    ಇವುಗಳಿಗೆ ಸ್ಪಂದಿಸಿದ ಸಿಇಓ, ಶಿಕ್ಷಣಾಧಿಕಾರಿಗಳು ಮತ್ತು ಎರಡೂ ಶೈಕ್ಷಣಿಕ ಜಿಲ್ಲೆಯ ಡಿಡಿಪಿಐ ಅವರಲ್ಲಿ ಚರ್ಚಿಸಿ ಸೂಕ್ತ ಸಲಹೆ, ಮಾರ್ಗದರ್ಶನ ನೀಡಿದರು. ಕೆಲವು ವಿಷಯಗಳಿಗೆ ಸ್ಥಳದಲ್ಲೇ ಪರಿಹಾರ ಕ್ರಮ ಸೂಚಿಸಿದರು. ಪ್ರಾರಂಭದಲ್ಲಿ ಅಕ್ಷರದಾಸೋಹ ಶಿಕ್ಷಣಾಧಿಕಾರಿಗಳು ಸ್ವಾಗತಿಸಿದರು. ಜಿಲ್ಲೆಯಲ್ಲಿ ಐದು ತಿಂಗಳ ಸಂಭಾವನೆ ಬಾಕಿ ಇತ್ಯರ್ಥವಾಗುತ್ತಿದೆ ಮತ್ತು ಪರಿವರ್ತನ ವೆಚ್ಚ ಹೆಚ್ಚುವರಿ ಆದೇಶ ಬಂದಿರುವುದನ್ನು ಗಮನಕ್ಕೆ ತಂದು ಪ್ರಾಸ್ತಾವಿಕ ಮಾತಾಡಿದರು. ಸಿಐಟಿಯು ಸಂಘಟನೆಯ ಕಾರ್ಯದರ್ಶಿ ಗಂಗಾ ನಾಯ್ಕ ಸಿಇಒ ಅವರಿಗೆ ಜಂಟಿಸಭೆಯ ಬೇಡಿಕೆ ಪಟ್ಟಿ ಸಲ್ಲಿಸಿದರು. ಯೂನಿಯನ್ ಜಿಲ್ಲಾ ಸಮಿತಿ ಅಧ್ಯಕ್ಷರಾದ ಯಮುನಾ ಗಾಂವ್ಕರ್ ಜಿಲ್ಲೆಯ ಎಲ್ಲಾ ತಾಲೂಕಿನ ಸಮಗ್ರ ಸಮಸ್ಯೆಗಳನ್ನು ಬಿಡಿಬಿಡಿಯಾಗಿ ಅಧಿಕಾರಿಗಳಿಗೆ ವಿವರಿಸಿ ಮನವರಿಕೆ ಮಾಡಿಕೊಟ್ಟರು.
    ಸಭೆಯಲ್ಲಿ ಜಿ.ಪಂ ಮುಖ್ಯ ಹಣಕಾಸು ಅಧಿಕಾರಿಗಳು, ಎರಡು ಶೈಕ್ಷಣಿಕ ಜಿಲ್ಲೆಯ ಡಿಡಿಪಿಐ, ಸಂಘಟನೆಯ ಪರವಾಗಿ ಪದಾಧಿಕಾರಿಗಳಾದ ವಂದನಾ ದುಮೆ, ಕೋಮಲಾ ದೇವಾಡಿಗ, ಶ್ರೀಮತಿ ನಾಯ್ಕ, ಗೀತಾ ಗೌಡ, ಜಯಶ್ರೀ, ಶೈಲಾ ಹರಿಕಂತ್ರ, ಮೀನಾಕ್ಷಿ ಶೋಭಾ, ಲಕ್ಷ್ಮಿ, ಭಾರತಿ ನಾಯ್ಕ, ರೂಪಾ ಪಾಠಣಕರ್, ವರದಾ ಅಂಕೋಲಾ, ಸುನಂದಾ ನಾಯ್ಕ, ಗಣೇಶ್ ರಾಠೋಡ್, ರೇಣುಕಾ ಮುಂತಾದವರು ವಿವಿಧ ಸಮಸ್ಯೆಗಳನ್ನು ಗಮನಕ್ಕೆ ತಂದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top