ಹೊನ್ನಾವರ: ತಾಲೂಕಿನ ಹರಡಸೆಯ ಶ್ರೀಲಕ್ಷ್ಮೀ ನರಸಿಂಹ ದೇವಾಲಯದಲ್ಲಿ ಕಾರ್ತೀಕ ದೀಪೋತ್ಸವ ಸಮಾರೋಪವು 24 ಗಂಟೆಗಳ ನಿರಂತರ ಭಜನೆಯೊಂದಿಗೆ ಸಂಪನ್ನಗೊಂಡಿತು. ಅಮಾವಾಸ್ಯೆಯಂದು ಮಧ್ಯಾಹ್ನ ಭಜನೆ ಪ್ರಾರಂಭಿಸಿ ಮಾರನೇ ದಿನ ಮಧ್ಯಾಹ್ನ ಮಂಗಲ ಹಾಡಲಾಯಿತು. ಈ ಭಜನಾ ಕಾರ್ಯಕ್ರಮದಲ್ಲಿ ಊರಿನ, ಪರಊರಿನ ಭಜಕರು, ಹಾಗೂ ವಿವಿಧ ವೃತ್ತಿಪರ ಭಜನಾ ತಂಡಗಳು, ಮತ್ತು ಜನಪ್ರಿಯ ಗಾಯಕರು, ಸಾಥಿ ವಾದಕರೆಲ್ಲ ಪಾಲ್ಗೊಂಡು ಶ್ರೀ ದೇವರ ಸಂಕೀರ್ತನೆ ಮಾಡಿದರು.
ಹರಡಸೆಯಲ್ಲಿ ಕಾರ್ತೀಕ ದೀಪೋತ್ಸವ ಸಂಪನ್ನ
