Slide
Slide
Slide
previous arrow
next arrow

ನ.27ಕ್ಕೆ “ನಾವು – ನಮ್ಮಿಷ್ಟ”ದ ದಶಮಾನೋತ್ಸವ ಸಂಭ್ರಮ

300x250 AD

ಹೊನ್ನಾವರ: ಕೆಲವು ಸಮಾನಾಸಕ್ತ ಗೃಹಸ್ಥರಿಂದ ಆರಂಭವಾದ “ನಾವು – ನಮ್ಮಿಷ್ಟ” ವಾಟ್ಸ್ ಆಪ್ ಗ್ರೂಪ್ ಹತ್ತು ವರ್ಷಗಳನ್ನು ಪೂರೈಸಿದ್ದು, ಈಗ 3300 ಕುಟುಂಬಗಳನ್ನೊಳಗೊಂಡಿದೆ. ಲಘುಹಾಸ್ಯ, ರಂಜನೆ ಮತ್ತು ಜೀವನೋತ್ಸಾಹವನ್ನು ಉಕ್ಕಿಸುವ ಸುದ್ದಿ ಘಟನೆಗಳನ್ನು ಹಂಚಿಕೊಳ್ಳುವ ಈ ಗ್ರೂಪಿನಲ್ಲಿ ಜಿಲ್ಲೆಯ ಗ್ರಾಮೀಣ ಭಾಗದ ಪುರುಷರು, ಮಹಿಳೆಯರು ಬಹುಸಂಖ್ಯೆಯಲ್ಲಿದ್ದಾರೆ. ಪ್ರತಿವರ್ಷ ಹಳದೀಪುರದ ಗೋಗ್ರೀನ್‌ನಲ್ಲಿ ಸೇರಿ ದಿನವಿಡೀ ವಿಚಾರ ವಿನಿಮಯ ಮನರಂಜನಾ ಕಾರ್ಯಕ್ರಮಗಳಿಂದ ಸಂಭ್ರಮಿಸುವ ಈ ಗ್ರೂಪ್ ನ.27ರಂದು ದಶಮಾನೋತ್ಸವದ ಅಂಗವಾಗಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ಅಂದು ಬೆಳಿಗ್ಗೆ ಗೋಗ್ರೀನ್‌ನಲ್ಲಿ ಸತ್ಯನಾರಾಯಣ ವ್ರತ, 9 ಗಂಟೆಯಿಂದ ರಾಜು ಸಂಪೇಸರ ಅವರ ಮಿಮಿಕ್ರಿ, 9:30ರಿಂದ ಖುಷಿ, ಸ್ನೇಹಶ್ರೀ, ಸಿಂಧೂರ ಅವರಿಂದ ನೃತ್ಯವೈವಿಧ್ಯ, 10 ಗಂಟೆಯಿಂದ ಸ್ಪಂದನಾ ಭಟ್ಟ ಗಾಯನ, ಸತೀಶ ಭಟ್ಟ, ವಿನಾಯಕ ಭಟ್ಟ ಅವರಿಂದ ಸಾಥ್, ಸುಮಾ ಜಗದೀಶ ಅವರಿಂದ ಯಕ್ಷಗಾನ ಹಾಡುಗಾರಿಕೆ, ಸ್ಮಿತಾ ಹೆಗಡೆ ಕುಂಟೆಮನೆ ಅವರಿಂದ ಚಿತ್ರಸಂಗೀತ, ಅಖಿಲ ಭಾರತ ಹವ್ಯಕ ಮಹಾಸಭಾದ ಉಪಾಧ್ಯಕ್ಷ ಶ್ರೀಧರ ಭಟ್ಟ ಕೆಕ್ಕಾರು ಅವರ ಅಧ್ಯಕ್ಷತೆಯಲ್ಲಿ, ವೆಂಕಟ್ರಮಣ ಹೆಗಡೆ ಕವಲಕ್ಕಿ, ಶಿವಾನಂದ ಹೆಗಡೆ ಕಡತೋಕಾ, ಶಶಾಂಕ ಹೆಗಡೆ ಶಿಗೇಹಳ್ಳಿ, ದತ್ತಗುರು ಹೆಗಡೆ ಶಿರಸಿ, ಶ್ರೀರಾಮ ಭಟ್ಟ, ಆಶಾ ಹೆಗಡೆ ಕಲಬುರ್ಗಿ ಇವರ ಪಾಲ್ಗೊಳ್ಳುವಿಕೆಯಲ್ಲಿ ಸಭೆ. ಸುಬ್ರಹ್ಮಣ್ಯ ಧಾರೇಶ್ವರ ಇವರಿಗೆ ಸನ್ಮಾನ ನಡೆಯಲಿದೆ.
12 ಗಂಟೆಯಿಂದ ಫ್ಯಾಶನ್ ಶೋ, ರಸಪ್ರಶ್ನೆ, ಕೋಲಾಟ, ಮಧ್ಯಾಹ್ನ ಕಿರುನಾಟಕ, ಪ್ರಭಾಕರ ಭಟ್ಟ ಅವರಿಂದ ಗಾಯನ, ಶುಭಾ ಭಟ್ಟ ಅವರಿಂದ ಲಾವಣಿ, 2.30ರಿಂದ ನಾಟಕ, ಭಜನೆ, ಮಹಿಳಾ ಯಕ್ಷಗಾನ, 4:30ರಿಂದ ಗಣಪತಿ ಹೆಗಡೆ ತೋಟಿಮನೆ ಮತ್ತು ಅಶ್ವಿನಿ ಕೊಂಡದಕುಳಿ ಇವರಿಂದ ಯಕ್ಷಗಾನ ಹೀಗೆ ಸರಣಿ ಕಾರ್ಯಕ್ರಮವಿದೆ. ಎಲ್ಲಾ ಸದಸ್ಯರು ಉಪಸ್ಥಿತರಿರುತ್ತಾರೆ. ಆಸಕ್ತ ಸಾರ್ವಜನಿಕರು ಈ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಸಂಭ್ರಮ ಹೆಚ್ಚಿಸಬೇಕೆಂದು ಅಡ್ಮಿನ್ ಸೂರ್ಯನಾರಾಯಣ ಹೆಗಡೆ ಮತ್ತು ಸಾವಿತ್ರಿ ಕೋರಿದ್ದಾರೆ.

300x250 AD
Share This
300x250 AD
300x250 AD
300x250 AD
Back to top