• Slide
  Slide
  Slide
  previous arrow
  next arrow
 • ಚರ್ಮಗಂಟು ರೋಗ, ಕಾಲೊಡೆ-ಬಾಯೊಡೆ ಬಗ್ಗೆ ಮುನ್ನೆಚ್ಚರಿಕೆ ವಹಿಸಿ: ಸುರೇಶ್ಚಂದ್ರ ಹೆಗಡೆ

  300x250 AD

  ಶಿರಸಿ: ಧಾರವಾಡ, ಗದಗ ಮತ್ತು ಉತ್ತರ ಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ. ಧಾರವಾಡದ ವತಿಯಿಂದ ತಾಲೂಕಿನ ಕಲಕರಡಿ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡದ ನಿರ್ಮಾಣಕ್ಕಾಗಿ ಎರಡನೇ ಹಂತದ ಅನುದಾನದ ಮೊತ್ತ ರೂ.1,75,000/-ಗಳ ಚೆಕ್ ಹಾಗೂ ತಾಲೂಕಿನ ಮಧುರವಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರಾದ ಪ್ರಕಾಶ ರಾಮಾ ನಾಯ್ಕ ಇವರ ಜಾನುವಾರು ಮರಣ ಹೊಂದಿದ ಕಾರಣ ರಾಸು ವಿಮಾ ಯೋಜನೆಯಡಿ ರೂ.35,000/-ಗಳ ಚೆಕ್ ಧಾರವಾಡ, ಗದಗ ಮತ್ತು ಉತ್ತರ ಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ., ಧಾರವಾಡದ ನೌಕರರ ಕಲ್ಯಾಣ ಸಂಘದ ಅಧ್ಯಕ್ಷರಾದ ಸುರೇಶ್ಚಂದ್ರ ಕೃಷ್ಣ ಹೆಗಡೆ ಕೆಶಿನ್ಮನೆ ಅವರು ಒಕ್ಕೂಟದ ಶಿರಸಿ ಉಪ ವಿಭಾಗದ ಕಚೇರಿಯಲ್ಲಿ ವಿತರಿಸಿದರು.


  ಈ ಸಂದರ್ಭದಲ್ಲಿ ಮಾತನಾಡಿದ ಅವರು ಧಾರವಾಡ ಹಾಲು ಒಕ್ಕೂಟದ ವತಿಯಿಂದ ಆಯಾ ಉಪವಿಭಾಗದ ವ್ಯಾಪ್ತಿಯ ಒಕ್ಕೂಟದ ಪಶು ವೈದ್ಯರ ಮೂಲಕ ಹಾಲು ಉತ್ಪಾದಕರ ಜಾನುವಾರುಗಳಿಗೆ ವಿಮಾ ಸೌಲಭವನ್ನು ಈಗಾಗಲೇ ಕಲ್ಪಿಸಿಕೊಟ್ಟಿದ್ದು, ಕೇವಲ ರೂ. 400 ರಿಂದ 500 ಗಳ ವಿಮಾ ಕಂತನ್ನು ಹಾಲು ಉತ್ಪಾದಕರು ಪಾವತಿಸಿದ ಕಾರಣ, ಜಾನುವಾರು ವಿಮೆಯ ಅನುಕೂಲವನ್ನು ಹಾಲು ಉತ್ಪಾದಕರು ಪಡೆಯುವಂತಾಗಿದ್ದು, ಜಾನುವಾರು ವಿಮಾ ಯೋಜನೆಯ ಸೌಲಭ್ಯವನ್ನು ಜಿಲ್ಲೆಯ ಎಲ್ಲಾ ಹಾಲು ಉತ್ಪಾದಕ ರೈತರು ಪಡೆಯುಂತಾಗಬೇಕು ಎಂದರು. ಹಾಗೂ ಜಿಲ್ಲೆಯ ಹಲವು ಭಾಗಗಳಲ್ಲಿ ಈಗ ಜಾನುವಾರುಗಳಲ್ಲಿ ಚರ್ಮಗಂಟು ರೋಗ ಕಂಡು ಬರುತ್ತಿದ್ದು, ರೈತರು ಮುಂಜಾಗ್ರತಾ ಕ್ರಮವಾಗಿ ಹತ್ತಿರದ ಪಶುವೈದಾಧಿಕಾರಿಗಳನ್ನುಕೂಡಲೇ ಸಂಪರ್ಕಿಸಿ ತಮ್ಮ ತಮ್ಮ ಜಾನುವಾರುಗಳಿಗೆ ಪಾಕ್ಸ್ ವೈರಸ್ ಲಸಿಕೆಯನ್ನು ಹಾಕಿಸಿಕೊಳ್ಳಬೇಕು, ಹಾಗೇಯೇ ಜಿಲ್ಲೆಯಾದ್ಯಂತ ಪಶು ಸಂಗೋಪನಾ ಇಲಾಖೆಯ ವತಿಯಿಂದ ಜಾನುವಾರುಗಳಿಗೆ ಕಾಲೊಡೆ-ಬಾಯೊಡೆ ಲಸಿಕಾ ಅಭಿಯಾನವನ್ನು ನಡೆಸಲಾಗುತ್ತಿದ್ದು, ಹೈನುಗಾರರು ಪಶುಸಂಗೋಪನಾ ಇಲಾಖೆಯನ್ನು ಕೂಡಲೇ ಸಂಪರ್ಕಿಸಿ ತಮ್ಮ ಜಾನುವಾರುಗಳಿಗೆ ಕಾಲೊಡೆ-ಬಾಯೊಡೆ ರೋಗ ಬರದಂತೆ ಲಸಿಕೆಯನ್ನು ಹಾಕಿಸಿಕೊಳ್ಳಬೇಕೆಂದುಈ ಮೂಲಕ ಅವರು ಕರೆ ನೀಡಿದರು. ಮಾನ್ಯ ಮುಖ್ಯಂತ್ರಿಗಳ ನೇತೃತ್ವದಲ್ಲಿ ನವೆಂಬರ್ 20ರಂದು ನಡೆಯಲಿರುವ ಸಭೆಯಲ್ಲಿ ನಂದಿನಿ ಹಾಲಿನ ಪ್ರತೀ ಲೀಟರ್ ರೂ.3 ಹೆಚ್ಚಿಸುವ ನಿರ್ಣಯ ಕೈಗೊಳ್ಳಲಾಗುವುದೆಂಬ ಭರವಸೆಯಿದ್ದು, ಪ್ರತೀ ಲೀಟರ್ ಹಾಲಿಗೆ ರೂ.3 ಹೆಚ್ಚಳ ಮಾಡುವುದರಿಂದ ರಾಜ್ಯದ ಸಮಸ್ತ ಹೈನುಗಾರರ ಹಿತ ಕಾಪಾಡಿದಂತಾಗುತ್ತದೆ ಎಂದರು.

  300x250 AD

  ಈ ಸಂದರ್ಭದಲ್ಲಿ ಮಧುರವಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ಅಶೋಕ ಕೆ ನಾ ಯ್ಕ, ಮುಖ್ಯ ಕಾರ್ಯ ನಿರ್ವಾಹಕರಾದ ಚಂದ್ರಕಾಂತ ನಾಯ್ಕ, ಕಲಕರಡಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ಕೆ ಎಸ್ ಡಿಸೋಜಾ, ಒಕ್ಕೂಟದ ಉತ್ತರ ಕನ್ನಡ ಜಿಲ್ಲೆಯ ಶೇಖರಣೆ ಮತ್ತು ತಾಂತ್ರಿಕ ವಿಭಾಗ ಹಾಗೂ ಮಾರುಕಟ್ಟೆ ವಿಭಾಗದ ಮುಖ್ಯಸ್ಥರಾದ ಎಸ್.ಎಸ್.ಬಿಜೂರ್, ವಿಸ್ತರಣಾಧಿಕಾರಿ ಮೌನೇಶ ಎಂ ಸೋನಾರ, ಶಿರಸಿ ಉಪವಿಭಾಗದ ಗುರುದರ್ಶನ ಭಟ್, ವಿಸ್ತರಣಾ ಸಮಾಲೋಚಕರಾದ ಅಭಿಷೇಕ ನಾಯ್ಕ, ಜಯಂತ ಪಟಗಾರ ಉಪಸ್ಥಿತರಿದ್ದರು.

  Share This
  300x250 AD
  300x250 AD
  300x250 AD
  Leaderboard Ad
  Back to top