Slide
Slide
Slide
previous arrow
next arrow

ಮಕ್ಕಳ ದಿನಾಚರಣೆಯಂದು ಮಕ್ಕಳೊಂದಿಗೆ ಮಕ್ಕಳಾದ ಶಿಕ್ಷಕರು

300x250 AD

ಶಿರಸಿ: ನಗರದ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನವೆಂಬರ್ 14ರಂದು ಮಕ್ಕಳ ದಿನಾಚರಣೆಯನ್ನು ವಿಶಿಷ್ಟವಾಗಿ ಆಚರಿಸಲಾಯಿತು.

ವಿದ್ಯಾರ್ಥಿಗಳಿಂದ ಆರಂಭವಾಗುತ್ತಿದ್ದ ಪ್ರತಿದಿನದ ಬೆಳಗಿನ ಪ್ರಾರ್ಥನೆಯನ್ನು ಈ ದಿನದಂದು ಶಿಕ್ಷಕರು ಪ್ರಾರಂಭಿಸಿದರು. ಮಕ್ಕಳ ದಿನಾಚರಣೆಯನ್ನು ಅತ್ಯಂತ ಸಂಭ್ರಮದಿಂದ ಆಚರಿಸುವ ಅವಕಾಶ ಕಲ್ಪಿಸಿಕೊಟ್ಟ ಗುರು ಹಿರಿಯರನ್ನು ಗೌರವದಿಂದ ಕಾಣುವ ಪ್ರತಿಜ್ಞಾ ಬೋಧನೆಯನ್ನು ಮುಖ್ಯಾಧ್ಯಾಪಕ ಶಶಾಂಕ ಹೆಗಡೆ ಎಲ್ಲಾ ವಿದ್ಯಾರ್ಥಿಗಳಿಗೆ ಬೋಧಿಸಿದರು.

300x250 AD

ನಂತರದಲ್ಲಿ ವಿದ್ಯಾರ್ಥಿಗಳು ಸ್ವತಃ ಶಿಕ್ಷಕರಾಗಿ ತಮ್ಮ ಕೆಳಗಿನ ತರಗತಿಯವರಿಗೆ ಪಾಠ ಮಾಡುವುದರ ಮೂಲಕ ವಿಶೇಷ ಅನುಭವ ಪಡೆದರು. ವಿದ್ಯಾರ್ಥಿಗಳಿಗಾಗಿ ಶಿಕ್ಷಕರು ಹಲವಾರು ಮನರಂಜನೆ ಆಟಗಳನ್ನು ಹಮ್ಮಿಕೊಂಡಿದ್ದರು. ಶಿಕ್ಷಕರು ವಿದ್ಯಾರ್ಥಿಗಳೊಂದಿಗೆ ಕಲೆತು ವಿದ್ಯಾರ್ಥಿಗಳಿಗೆ ಮನರಂಜನೆ ಆಟವನ್ನು ಆಡಿಸುವುದರ ಮೂಲಕ  ಸಂತಸದಿ ತಮ್ಮ ದಿನವನ್ನು ಕಳೆದರೆ, ವಿದ್ಯಾರ್ಥಿಗಳು ಕೂಡ ತಮ್ಮ ಶಿಕ್ಷಕರು ತಮಗಾಗಿ ಆಯೋಜಿಸಿದ್ದ ಎಲ್ಲಾ ಆಟಗಳಲ್ಲೂ ಉತ್ಸಾಹದಿಂದ ಪಾಲ್ಗೊಂಡು, ಬಣ್ಣ ಬಣ್ಣದ ಉಡುಗೆಗಳನ್ನು ತೊಟ್ಟು, ಸಿಹಿ ತಿಂದು ಮಕ್ಕಳ ದಿನದಂದು ಸಂಭ್ರಮದಿಂದ ನಲಿದರು.

Share This
300x250 AD
300x250 AD
300x250 AD
Back to top