Slide
Slide
Slide
previous arrow
next arrow

ಪ್ರತಿಭಾನ್ವಿತರಿಗೆ ನನ್ನ ಸಹಕಾರ ಯಾವತ್ತೂ ಇದೆ: ಶಾಸಕಿ

300x250 AD

ಕಾರವಾರ: ಸಮಾಜದ ಏಳಿಗೆಗೆ ಯಾವುದೇ ಸಹಕಾರ ಬೇಕಿದ್ದರೂ ನಾನು ಸದಾ ನಿಮ್ಮೊಟ್ಟಿಗೆ ಇರುತ್ತೇನೆ. ಶಿಕ್ಷಣ, ಕ್ರೀಡೆಯಲ್ಲಿ ಸಾಧನೆ ಮಾಡುವ ಪ್ರತಿಭಾನ್ವಿತರಿಗೆ ನನ್ನ ಸಹಕಾರ ಇರುತ್ತದೆ ಎಂದು ಶಾಸಕಿ ರೂಪಾಲಿ ಎಸ್. ನಾಯ್ಕ ಹೇಳಿದರು.
ನಗರದ ನಂದನಗದ್ದಾದಲ್ಲಿ ನೂತನ ಪಡ್ತಿ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ಪಡ್ತಿ ಸಮಾಜದ ಸಮುದಾಯ ಭವನವು 60.43 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಲಿದೆ. ಅದರಲ್ಲಿ ಏನೇನು ಅವಶ್ಯಕತೆ ಇದೆಯೋ ಅದೆಲ್ಲ ಸೌಲಭ್ಯಗಳು ಲಭಿಸುವಂತಾಗಬೇಕು. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಈ ಸೌಲಭ್ಯ ತಲುಪಬೇಕು. ಸಮಾಜ ಒಗ್ಗಟ್ಟಾಗಿರಬೇಕು. ಯಾವುದೇ ರಾಜಕೀಯ ಮಾಡಬಾರದು ಎಂದರು.
ನಮ್ಮ ಯುವಕರಿಗೆ ಉದ್ಯೋಗ ಸೌಲಭ್ಯಕ್ಕಾಗಿ ಕಾರವಾರದ ಮುಡಗೇರಿಯಲ್ಲಿ ಕೈಗಾರಿಕೆ ಸ್ಥಾಪನೆಯಾಗಲಿದೆ. ಸ್ಥಳೀಯರಿಗೆ ಉದ್ಯೋಗ ಸಿಗಲಿದೆ. ಅಲ್ಲದೇ, ಮುಡಗೇರಿ ಭೂಸ್ವಾಧೀನವಾಗಿ ದಶಕಗಳೇ ಕಳೆದಿದೆ. ಅದರ ಪರಿಹಾರ ಸರಿಯಾಗಿಲ್ಲದ ಕಾರಣ ರೈತರು ಪರಿಹಾರವನ್ನು ಸ್ವೀಕರಿಸಿಲ್ಲ. ಆದರೆ, ಅಧಿವೇಶನದಲ್ಲಿ ಕೈಗಾರಿಕೆ ಸಚಿವರಾದ ಶ್ರಿ ಮುರಗೇಶ್ ನಿರಾಣಿ ಅವರೊಂದಿಗೆ ಮಾತನಾಡಿ ಹೆಚ್ಚುವರಿ ಪರಿಹಾರಕ್ಕೆ ಮನವಿಯನ್ನು ಮಾಡಿದ್ದು, ಅವರೂ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿ ಮೂರು ಪಟ್ಟು ಹೆಚ್ಚುವರಿ ಪರಿಹಾರ ನೀಡುವುದಾಗಿ ಹೇಳಿದ್ದಾರೆ ಎಂದರು.
ಪಡ್ತಿ ಸಮಾಜದ ಅಧ್ಯಕ್ಷರಾಗಿದ್ದ ದಿ.ಕೃಷ್ಣ ಕೋಚರೇಕರ ಅವರ ಆತ್ಮಕ್ಕೆ ಮೌನಾಚರಣೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ನಗರ ಮಂಡಲದ ಅಧ್ಯಕ್ಷರಾದ ನಾಗೇಶ್ ಕುರ್ಡೇಕರ, ನಗರ ಸಭೆ ಸದಸ್ಯರಾದ ನಂದಾ ನಾಯ್ಕ, ಸಂದೀಪ ತಳೇಕರ, ಸಮಾಜದ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು, ಗ್ರಾಮ ಪಂಚಾಯತ್ ಜನ ಪ್ರತಿನಿಧಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top