• Slide
    Slide
    Slide
    previous arrow
    next arrow
  • ಶೃದ್ಧಾ ಹತ್ಯೆಗೈದು ಅದೇ ಮನೆಯಲ್ಲಿ ಮತ್ತೊಬ್ಬಳ ಜೊತೆ ಸಲ್ಲಾಪ ನಡೆಸಿದ್ದ ಅಫ್ತಾಬ್

    300x250 AD

    ದೆಹಲಿ: ದೇಶವನ್ನೇ ಬೆಚ್ಚಿ ಬೀಳಿಸಿದ 27 ವರ್ಷದ ಶ್ರದ್ಧಾ ವಾಲ್ಕರ್ ಹತ್ಯೆ ಪ್ರಕರಣದಲ್ಲಿ ಬಗೆದಷ್ಟೂ ಹೊಸ ಮಾಹಿತಿ ಸಿಗುತ್ತಲೇ ಇದೆ. ಶ್ರದ್ಧಾಳ ಹೆಣದ ತುಂಡುಗಳನ್ನು ಫ್ರಿಡ್ಜ್‌ನಲ್ಲಿಟ್ಟು ಅದೇ ಮನೆಯಲ್ಲಿ ಮತ್ತೊಬ್ಬ ಹೆಣ್ಣಿನ ಜೊತೆ ಅಫ್ತಾಬ್ ಸಲ್ಲಾಪ ನಡೆಸಿದ್ದ ವಿಷಯ ಹೊರಬಂದಿದೆ.

    ಅಫ್ತಾಬ್ ಶ್ರದ್ಧಾ ಜೊತೆ ಲಿವ್‌ಇನ್‌ನಲ್ಲಿ ಇರುವಾಗಲೂ ಡೇಟಿಂಗ್ ಆಪ್ ಬಳಸುವುದನ್ನು ಮುಂದುವರಿಸಿದ್ದರು. ಇದರಿಂದ ಶ್ರದ್ಧಾ ಮತ್ತು ಅಫ್ತಾಬ್ ನಡುವೆ ಆಗಾಗ ಜಗಳ ಆಗುತ್ತಿತ್ತು ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

    ಡೇಟಿಂಗ್ ಆಪ್ ಬಳಕೆ ಮುಂದುವರಿಸಿದ್ದ ಅಫ್ಲಾಬ್ ಮೇಲೆ ಶ್ರದ್ಧಾ ಆಗಾಗ ಕೋಪ ಮಾಡಿಕೊಳ್ಳುತ್ತಿದ್ದಳು. ಶ್ರದ್ಧಾ ನನ್ನ ಬಗ್ಗೆ ತುಂಬಾ ಪೊಸೆಸಿವ್ ಆಗಿದ್ದಳು. ಆದರೆ ಅವಳೂ ಡೇಟಿಂಗ್ ಆಪ್ ಬಳಸುತ್ತಿದ್ದಳು ಎಂದು ಅಫ್ಲಾಬ್ ವಿಚಾರಣೆ ವೇಳೆ ಹೇಳಿದ್ದಾನೆ.

    ಶ್ರದ್ಧಾ ಮೃತದೇಹ ಕತ್ತರಿಸಿ ಫ್ರಿಡ್ಜ್‌ನಲ್ಲಿ ಇಟ್ಟಿದ್ದ ರೂಮಿನಲ್ಲಿಯೇ ಅಫ್ಲಾಬ್ ಇತರೆ ಹೆಣ್ಣುಮಕ್ಕಳನ್ನು ಭೇಟಿ ಮಾಡುತ್ತಿದ್ದ, ಅವರೊಂದಿಗೆ ಸರಸ ಸಲ್ಲಾಪದಲ್ಲಿ ತೊಡಗಿದ್ದ ಎಂದು ವಿಚಾರಣೆ ವೇಳೆ ಬಾಯ್ದಿಟ್ಟಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

    300x250 AD

    ಅಫ್ಲಾಬ್ ಮನೆಯಲ್ಲಿ ಫ್ರಿಜ್ ಇರಲಿಲ್ಲ. ಶ್ರದ್ಧಾ ಮೃತದೇಹ ಇಡುವುದಕ್ಕಾಗಿಯೇ ಅಫ್ಲಾಬ್ ಫ್ರಿಡ್ಜ್ ಖರೀದಿಸಿದ್ದ. ಶ್ರದ್ಧಾ ಕತ್ತು ಹಿಸುಕಿ ಕೊಂದ ನಂತರ ಅಫ್ಲಾಬ್ ಮುಂದೇನು ಮಾಡಬೇಕು ಯೋಚಿಸಿದ್ದಾನೆ. ದೇಹ ಕೊಳೆಯಲು ಆರಂಭವಾಗಿದ್ದಕ್ಕೆ ಫ್ರಿಡ್ಜ್ ತಂದಿದ್ದ ಎಂದು ಹೇಳಿದ್ದಾನೆ.

    ಕೊಳೆತ ವಾಸನೆ ಹೋಗಲಾಡಿಸಲು ಆನ್‌ಲೈನ್‌ನಲ್ಲಿ ಆತ ಬ್ಲೀಚ್ ಆರ್ಡರ್ ಮಾಡಿದ್ದ. ಛತ್ತೀಸ್‌ಪುರ ಪ್ರದೇಶದ ಸ್ಥಳೀಯ ಅಂಗಡಿಯಿಂದ ಗರಗಸ ಖರೀದಿಸಿ, ಶ್ರದ್ಧಾ ದೇಹವನ್ನು 35 ತುಂಡುಗಳನ್ನಾಗಿ ಕತ್ತರಿಸಿದ್ದಾನೆ. ಶ್ರದ್ಧಾ ತಲೆಯ ಭಾಗವನ್ನು ಫ್ರಿಡ್ಜ್‌ನಲ್ಲಿಯೇ ಇಟ್ಟು, ಆಗಾಗ ಅದನ್ನು ನೋಡುತ್ತಿದ್ದ ಹಾಗೂ ಅದೇ ಕೋಣೆಯಲ್ಲಿಯೇ ಮಲಗುತ್ತಿದ್ದ ಎನ್ನುವ ಮಾಹಿತಿ ತಿಳಿದುಬಂದಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top