ನವದೆಹಲಿ: 2024ರ ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಪಕ್ಷದ ನೂತನ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಪಡೆ ಸೋಮವಾರ ಮೊದಲ ಬಾರಿಗೆ ಸಭೆ ಸೇರಲಿದೆ.
ಖರ್ಗೆ ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಕಾರ್ಯಪಡೆಯ ಮೊದಲ ಸಭೆ ಇದಾಗಿದೆ. ಚುನಾವಣಾ ಕಾರ್ಯತಂತ್ರದ ಗುಂಪಿನ ಸದಸ್ಯರು ಕಾರ್ಯಪಡೆಯ ಕೆಲಸ ಮತ್ತು 2024ರ ಚುನಾವಣೆಯ ಯೋಜನೆಯ ಬಗ್ಗೆ ಹೊಸ ಅಧ್ಯಕ್ಷರಿಗೆ ತಿಳಿಸುತ್ತಾರೆ.
ಕಾರ್ಯಪಡೆಯ ಸದಸ್ಯರಲ್ಲಿ ಪಿ ಚಿದಂಬರ0, ಮುಕುಲ್ ವಾಸ್ನಿಕ್, ಜೈರಾಮ್ ರಮೇಶ್, ಕೆಸಿ ವೇಣುಗೋಪಾಲ್, ಅಜಯ್ ಮಾಕನ್, ರಣದೀಪ್ ಸುರ್ಜೆವಾಲಾ, ಪ್ರಿಯಾಂಕಾ ಗಾಂಧಿ ವಾದ್ರಾ, ಮತ್ತು ಸುನಿಲ್ ಕಾನುಗೋಲು ಸೇರಿದ್ದಾರೆ.
2024ರ ರಾಷ್ಟ್ರೀಯ ಚುನಾವಣೆಗೆ ಮುಂಚಿತವಾಗಿ ರಾಜಕೀಯ ಸವಾಲುಗಳನ್ನು ಎದುರಿಸಲು ಅಧಿಕೃತ ಕ್ರಿಯಾ ಗುಂಪನ್ನು ರಾಜಸ್ಥಾನದ ಉದಯ್‌ಪುರದಲ್ಲಿ ಮೂರು ದಿನಗಳ ದೊಡ್ಡ ಸಮಾವೇಶದ ಮೊದಲು ಏಪ್ರಿಲ್‌ನಲ್ಲಿ ಕಾಂಗ್ರೆಸ್ ಪಾರ್ಟಿ ಘೋಷಿಸಿತ್ತು. ಎಂಟು ಸದಸ್ಯರ ಸಮಿತಿಯು ಸಲ್ಲಿಸಿದ ವರದಿಯ ನಂತರ ಪಕ್ಷದ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು 2024ರ ಕಾರ್ಯಪಡೆಯನ್ನು ರಚಿಸಿದ್ದರು.