ಶಿರಸಿ: ಕಾರ್ತಿಕ ಸಂಜೆ ನಿಮಿತ್ತ ಸ್ಥಳೀಯ ಅಯ್ಯಪ್ಪ ದೇವಸ್ಥಾನದಲ್ಲಿ ನ.12, ಶನಿವಾರದಂದು ಭಜನಾ ಕಾರ್ಯಕ್ರಮ ನೆರವೇರಿತು.
ಪ್ರಜ್ವಲ ಟ್ರಸ್ಟ್ ಶಿರಸಿ ನಡೆಸಿಕೊಟ್ಟ ಈ ಕಾರ್ಯಕ್ರಮದಲ್ಲಿ ನಗರದ ಆಂಜನೇಯ ಸೇವಾ ಸಮಿತಿಯ ಕಲಾವಿದರಾದ ರಮಾಕಾಂತ ಮುರ್ಡೇಶ್ವರ,ಅರವಿಂದ ಪೈ, ಸುದರ್ಶನ ಹೆಗಡೆ, ಶ್ರೀನಿವಾಸ ಆಚಾರ್ ಭಜನಾ ಕಾರ್ಯಕ್ರಮ ನಡೆಸಿಕೊಟ್ಟು ಕೇಳುಗರನ್ನು ಭಕ್ತಿ ಪರವಶಗೊಳಿಸಿದರು.
ಮಂಜುನಾಥ ಶೇಟ್ ದಂಪತಿಗಳು ಕಾರ್ಯಕ್ರಮ ಪ್ರಾಯೋಜಿಸಿದ್ದು ಅಯ್ಯಪ್ಪ ದೇವಸ್ಥಾನ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜ್ವಲ ಟ್ರಸ್ಟ್ ಅಧ್ಯಕ್ಷೆ ಬಿಂದು ಹೆಗಡೆ ಸ್ವಾಗತಿಸಿದರು. ಕಾರ್ಯದರ್ಶಿ ಸುಮಾ ಹೆಗಡೆ ನಿರ್ವಹಿಸಿ, ವಂದಿಸಿದರು. ಕಾರ್ತಿಕ ದೀಪೋತ್ಸವದ ಜೊತೆ ಪ್ರಸಾದ ವಿತರಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.
ಭಕ್ತಿ ಪರವಶಗೊಳಿಸಿದ ಭಜನಾ ಕಾರ್ಯಕ್ರಮ
