Slide
Slide
Slide
previous arrow
next arrow

ಅಜ್ಜೀಬಳದಲ್ಲಿ ಗೋಶಾಲೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಸ್ಪೀಕರ್ ಕಾಗೇರಿ

300x250 AD

ಶಿರಸಿ: ಗೋ ಹತ್ಯೆ ನಿಷೇಧವನ್ನು ನನ್ನ ಅಧ್ಯಕ್ಷತೆಯಲ್ಲಿ ಮಾಡಿರುವ ಹೆಮ್ಮೆ ನನಗೆ ಇದೆ. ದೇಶದ ಪ್ರತಿಯೋರ್ವ ಹಿಂದುಗಳಲ್ಲೂ ಗೋವಿಗೆ ಪೂಜ್ಯ ಭಾವನೆ ಇದೆ. ಆದರೇ ಇತ್ತಿಚೀನ ದಿನಗಳಲ್ಲಿ ಗೋ ಹತ್ಯೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಗೋ ಶಾಲೆ ಮಾಡಲಾಗುತ್ತಿದೆ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಅವರು ತಾಲೂಕಿನ ಅಜ್ಜೀಬಳದಲ್ಲಿ ಶನಿವಾರ ಗೋ ಶಾಲೆಗೆ ಗುದ್ದಲಿ ಪೂಜೆ ನೆರವೆರಿಸಿ ಮಾತನಾಡಿದರು. 100 ಜಾನುವಾರಗಳನ್ನು ಗೋ ಶಾಲೆಯಲ್ಲಿ ರಕ್ಷಿಸಲಾಗುತ್ತಿದ್ದು ಸುಮಾರು 50ಲಕ್ಷ ರೂ. ವೆಚ್ಚದಲ್ಲಿ ಈ ಕಾಮಗಾರಿಯನ್ನು ನಿರ್ಮಿತ ಕೇಂದ್ರದವರು ನಿರ್ಮಿಸುತ್ತಿದ್ದಾರೆ. ಇತ್ತಿಚೀನ ದಿನಗಳಲ್ಲಿ ಚರ್ಮಗಂಟು ರೋಗ ಅತಿಯಾಗಿ ಹಬ್ಬುತ್ತಿದ್ದು ಇದಕ್ಕೆ ಪಶುಸಂಗೋಪನೆ ಇಲಾಖೆಯಲ್ಲಿ ರೋಗಕ್ಕೆ ಔಷಧಿ ಇದ್ದು ರೈತರು ಇದರ ಸದುಪಯೋಗ ಪಡಿಸಿಕೊಳ್ಳಿ ಎಂದು ಹೇಳಿದರು.
ರಾಜ್ಯ ಸರ್ಕಾರ ಜಿಲ್ಲೆಯ 4 ತಾಲೂಕುಗಳಲ್ಲಿ ಗೋಶಾಲೆ ಅನುಷ್ಠಾನ ಮಾಡಲು ಮುಂದಾಗಿದೆ. ಅದರಲ್ಲಿ ಶಿರಸಿ ತಾಲೂಕಿನಲ್ಲಿ ಮೊದಲ ಗೋ ಶಾಲೆ ಅನುಷ್ಠಾನ ಆಗುತ್ತಿರುವುದು ಸಂತಸ ತಂದಿದೆ. ಅಂದಾಜು 100 ಜಾನುವಾರುಗಳಿಗೆ ಇಲ್ಲಿ ವ್ಯವಸ್ಥೆ ಕಲ್ಪಿಸಲಾಗುತ್ತಿದ್ದು, ಗೋಹತ್ಯೆಯಂಥ ಪಾಪಕೃತ್ಯ ತಡೆಯುವ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮ ಅನುಸರಿಸಿದೆ ಎಂದರು.
ವೇದಿಕೆಯಲ್ಲಿ ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಸುರೇಶ್ಚಂದ್ರ ಹೆಗಡೆ, ಕಾನಗೋಡ ಗ್ರಾ.ಪಂ. ಅಧ್ಯಕ್ಷೆ ಗೀತಾ ಪೂಜಾರಿ, ಉಪಾಧ್ಯಕ್ಷ ಪ್ರಶಾಂತ ಹೆಗಡೆ, ಸದಸ್ಯೆ ಬಂಗಾರಿ ಹರಿಜನ, ಪಶುಪಾಲನೆ ವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ.ರಾಕೇಶ ಬಂಗ್ಲೆ , ಜಿ.ಪಂ. ಮಾಜಿ ಸದಸ್ಯೆ ಉಷಾ ಹೆಗಡೆ, ತಾ.ಪಂ. ಮಾಜಿ ಸದಸ್ಯ ನಾಗರಾಜ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top