Slide
Slide
Slide
previous arrow
next arrow

ಪುನೀತ್ ಸೆಟಲೈಟ್ ಕಾರ್ಯಕ್ರಮ: ಬನವಾಸಿ ಕಾಲೇಜು ವಿದ್ಯಾರ್ಥಿಗಳ ಸಾಧನೆ

300x250 AD

ಶಿರಸಿ: ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ವತಿಯಿಂದ ವಿದ್ಯಾರ್ಥಿ ಕೇಂದ್ರಿತ ಕಾರ್ಯಕ್ರಮವಾದ ಪುನೀತ್ ಸೆಟಲೈಟ್ ಕಾರ್ಯಕ್ರಮದ ಅಂಗವಾಗಿ ರಾಜ್ಯಾದ್ಯಂತ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಕಿತ್ತೂರು ಕರ್ನಾಟಕ ವಿಭಾಗ ಮಟ್ಟದ ಪೋಸ್ಟರ್ ಪ್ರೆಸೆಂಟೇಶನ್ ಸ್ಪರ್ಧೆಯನ್ನು ಇತ್ತೀಚೆಗೆ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ತಾಲೂಕಿನ ಬನವಾಸಿ ಪದವಿಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಾದ ಕುಮಾರಿ ಜ್ಯೋತಿಕಾ ನಾಯ್ಕ, ಸಾಧನ ಕೆಳಗಿನಮನೆ,ಮುಸ್ಕಾನ್ ಬಾನು, ಸಿಂಧೂ ಉಪ್ಪಾರ್ ಹಾಗೂ ಕಲಾ ವಿಭಾಗದ ಕವನ ಇವರುಗಳು ಭಾಗವಹಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಹಾಗೆಯೇ ನ.10 ರಂದು ಜೂಮ್ ಮೀಟಿಂಗ್ ನಲ್ಲಿ ನಡೆದ ಪೋಸ್ಟರ್ ಪ್ರೆಸೆಂಟೇಶನ್ ನಲ್ಲಿ ಭಾಗವಹಿಸಿ ಮೆಚ್ಚುಗೆಯನ್ನು ಪಡೆದಿದ್ದಾರೆ. ಈ ಎಲ್ಲ ವಿದ್ಯಾರ್ಥಿಗಳಿಗೆ ಕಾಲೇಜಿನ ಪ್ರಾಚಾರ್ಯರಾದ ಎಂ.ಕೆ ನಾಯ್ಕ ಹಾಗೂ ಎಲ್ಲ ಉಪನ್ಯಾಸಕ ವರ್ಗದವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top