• first
  second
  third
  Slide
  Slide
  previous arrow
  next arrow
 • ಕದರವೇ ಜೀವನನಗರ ಪದಾಧಿಕಾರಿಗಳ ಆಯ್ಕೆ

  300x250 AD

  ಕಾರವಾರ: ಕರ್ನಾಟಕ ದಲಿತ ರಕ್ಷಣಾ ವೇದಿಕೆಯ ನಗರದ ಜೀವನನಗರ ಘಟಕದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಬುಧವಾರ ಹಬ್ಬುವಾಡದ ಅಂಬೇಡ್ಕರ್ ಸಭಾಭವನದಲ್ಲಿ ನಡೆಯಿತು.
  ಕರ್ನಾಟಕ ದಲಿತ ರಕ್ಷಣಾ ವೇದಿಕೆಯ ಜಿಲ್ಲಾ ಅಧ್ಯಕ್ಷ ಎಲಿಷಾ ಯಲಕಪಾಟಿ ಇವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜೀವನನಗರ ಘಟಕದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಅಂಬೇಡ್ಕರ್ ಅವರ ಸಿದ್ಧಾಂತ, ತತ್ವಗಳು, ಅನ್ಯಾಯ, ದೌರ್ಜನ್ಯ ಹಾಗೂ ಮುಲಭೂತ ಸೌಕರ್ಯಕ್ಕಾಗಿ ಹೋರಾಟ ನಡೆಸುವ ಮೂಲಕ ನ್ಯಾಯ ಕೊಡಿಸುವಂತೆ ಆಯ್ಕೆಯಾದ ಪದಾಧಿಕಾರಿಗಳಿಗೆ ಎಲಿಷಾ ಈ ವೇಳೆ ಕಿವಿಮಾತು ಹೇಳಿದರು.
  ಕಾರವಾರ ತಾಲೂಕು ಅಧ್ಯಕ್ಷ ಎಲ್ಲಪ್ಪ ಎನ್.ವಡ್ಡರ್ ಹಾಗೂ ಉಪಾಧ್ಯಕ್ಷ ರುಸ್ತುಂಬ್ ಸಿದ್ಧಿ, ಕಾರ್ಯದರ್ಶಿ ಜಾಫರ್ ಎ.ಕರ್ಜಗಿ, ಸಂಘಟನೆ ಕಾರ್ಯದರ್ಶಿ ಮಹಮ್ಮದ್ ಎಂ.ಇನಾಮದಾರ್ ಉಪಸ್ಥಿತಿಯಲ್ಲಿ ಜೀವನನಗರ ಘಟಕದ ಅಧ್ಯಕ್ಷರನ್ನಾಗಿ ಸುರೇಶ ಎಸ್.ಪೂಜಾರಿ, ಉಪಾಧ್ಯಕ್ಷರನ್ನಾಗಿ ಶರದ್ ಪಿ.ಚಲವಾದಿ, ಕಾರ್ಯಾಧ್ಯಕ್ಷರನ್ನಾಗಿ ತುಕಾರಾಮ ಪೂಜಾರಿ, ಪ್ರಧಾನ ಕಾರ್ಯದರ್ಶಿಯನ್ನಾಗಿ ಅಕ್ಬರ್ ಎ.ಇನಾಮದಾರ್, ಸಂಘಟನಾ ಕಾರ್ಯದರ್ಶಿಯನ್ನಾಗಿ ದುರ್ಗಪ್ಪ ಆರ್.ಪೂಜಾರಿ, ರಾಘವೇಂದ್ರ ಎಸ್.ಪೂಜಾರಿ, ಮುಕ್ತುಂಸಾಬ ಎಂ.ಅಣ್ಣಿಗೇರಿ, ಕಾರ್ಯದರ್ಶಿಯನ್ನಾಗಿ ಹುಸೇನ್ ಡಿ.ನಾಗೂರು, ಖಜಾಂಚಿಯನ್ನಾಗಿ ಜಂಗಲಭಾಷಾ ವಿ. ಇನಾಮದಾರ ಅವರನ್ನು ಆಯ್ಕೆ ಮಾಡಲಾಗಿದೆ.

  300x250 AD
  Share This
  300x250 AD
  300x250 AD
  300x250 AD
  Back to top