Slide
Slide
Slide
previous arrow
next arrow

ಆರ್ಥಿಕವಾಗಿ ದುರ್ಬಲರಿಗೆ ಶೇ.10 ಮೀಸಲಾತಿ ತೀರ್ಪಿಗೆ ದೇಶಪಾಂಡೆ ಸ್ವಾಗತ

300x250 AD

ಹಳಿಯಾಳ: ಆರ್ಥಿಕವಾಗಿ ದುರ್ಬಲರಾದ ವರ್ಗಗಳಿಗೆ ಶೇ 10 ಮೀಸಲಾತಿಯನ್ನು ಕಲ್ಪಿಸುವ (ಹಿಂದುಳಿದ ವರ್ಗಗಳಿಗೆ ನೀಡಿರುವ 50%ರಷ್ಟು ಮೀಸಲಾತಿಯ ಹೊರಗೆ) ಸಂವಿಧಾನದ 103ನೇ ತಿದ್ದುಪಡಿಯನ್ನು ಭಾರತದ ಸುಪ್ರೀಂಕೋರ್ಟ್ ಎತ್ತಿಹಿಡಿದಿರುವುದು ಬಹಳ ಸಂತೋಷದ ವಿಷಯ. ಈ ತೀರ್ಪು ಸ್ವಾಗತಾರ್ಹ. ಈ ತಿದ್ದುಪಡಿಯಿಂದಾಗಿ ಆರ್ಥಿಕವಾಗಿ ದುರ್ಬಲರಾದವರಿಗೆ ಶಿಕ್ಷಣ ಸಂಸ್ಥೆಗಳಲ್ಲಿ ಮತ್ತು ಉದ್ಯೋಗಗಳಲ್ಲಿ ಮೀಸಲಾತಿ ದೊರೆಯಲಿವೆ. ಸಮಾಜದ ಎಲ್ಲ ಸಮುದಾಯಗಳಲ್ಲಿರುವ ಆರ್ಥಿಕವಾಗಿ ಹಿಂದುಳಿದವರಿಗೆ ಇದು ಆಶಾಕಿರಣವಾಗಲಿದೆ. ಬಡವರು ಮತ್ತು ಅವಕಾಶ ವಂಚಿತರು ಮುಖ್ಯವಾಹಿನಿಗೆ ಬರುವಲ್ಲಿ ಇದರಿಂದ ಬಹಳ ಉಪಯೋಗವಾಗಲಿದೆ ಎಂದು ಮಾಜಿ ಸಚಿವ ಹಾಗೂ ಹಾಲಿ ಶಾಸಕ ಆರ್.ವಿ.ದೇಶಪಾಂಡೆ ಹೇಳಿದ್ದಾರೆ.
ಯಾವುದೇ ವರ್ಗದಲ್ಲಿರುವ ಪ್ರತಿ ಬಡವನಿಗೆ ಬದುಕುವ ಹಕ್ಕಿದೆ. ಬಡತನಕ್ಕೆ ಜಾತಿ, ಧರ್ಮಗಳಿರುವುದಿಲ್ಲ. ಅದು ಒಂದು ಸಾಮಾಜಿಕ ಶಾಪ. ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ನಮ್ಮ ದೇಶದ ಬೆಳವಣಿಗೆಯಲ್ಲಿ ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದಿರುವ ಎಲ್ಲರಿಗೂ ಕೂಡ ಬೆಂಬಲ ಸಿಗಲೇಬೇಕು. ಇದು ಸಾಮಾಜಿಕ ನ್ಯಾಯದ ಒಂದು ಮಹತ್ವದ ಭಾಗ. ಉಚ್ಚ ನ್ಯಾಯಾಲಯವು ಹೇಳಿದಂತೆ ಸಾಮಾಜಿಕ ವ್ಯವಸ್ಥೆಯನ್ನು ಸರಿಪಡಿಸಲು ಸರಕಾರಗಳು ತೆಗೆದುಕೊಳ್ಳುವ ನಿರ್ಧಾರಗಳು ಸಂವಿಧಾನದಲ್ಲಿ ನೀಡಲಾಗಿರುವ ಸಮಾನತೆಯ ತತ್ವ್ವದ ವಿರೋಧಿ ಕ್ರಿಯೆಗಳಲ್ಲ ಬದಲಾಗಿ ಪೂರಕವಾದವು ಎಂದಿದ್ದಾರೆ.
ಈ ವಿಷಯದ ಬಗ್ಗೆ ಬಹಳ ವರ್ಷಗಳಿಂದ ಕಾಂಗ್ರೆಸ್ ಪಕ್ಷ ರಾಜಕೀಯವಾಗಿ ಹೋರಾಟ ನಡೆಸುತ್ತಿದ್ದು ಎಲ್ಲರಿಗೂ ತಿಳಿದ ವಿಷಯ. ಹಲವು ವರ್ಷಗಳ ಹಿಂದೆ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ನೇತೃತ್ವದ ಸರಕಾರ ಮೊದಲ ಹೆಜ್ಜೆಗಳನ್ನಿಟ್ಟಿತ್ತು. ಹಾಗೆಯೇ ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರ ಇದ್ದಾಗ ಈ ಕುರಿತಾಗಿ ವರದಿ ನೀಡಲು ಆಗಿನ ಮುಖ್ಯ ಕಾರ್ಯದರ್ಶಿಯವರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಲಾಗಿತ್ತು. ಈ ಸಮಿತಿಯು ವರದಿ ನೀಡಿದ್ದು, ಸಮಿತಿಯ ಶಿಫಾರಸ್ಸುಗಳಂತೆ ಆರ್ಥಿಕವಾಗಿ ದುರ್ಬಲರಾದವರಿಗೆ ಶಿಕ್ಷಣ ಸಂಸ್ಥೆಗಳಲ್ಲಿ ಮತ್ತು ಉದ್ಯೋಗಗಳಲ್ಲಿ ಮೀಸಲಾತಿ ದೊರೆಯುವಂತೆ ಶೀಘ್ರವಾಗಿ ಜಾರಿಯಾಗಲು ಸಮರೋಪಾದಿಯಲ್ಲಿ ಕ್ರಮ ತೆಗೆದುಕೊಳ್ಳುವಂತೆ ನಾನು ಸರಕಾರವನ್ನು ಆಗ್ರಹಿಸುತ್ತೇನೆ ಎಂದಿದ್ದಾರೆ.

300x250 AD
Share This
300x250 AD
300x250 AD
300x250 AD
Back to top