• first
  second
  third
  Slide
  Slide
  previous arrow
  next arrow
 • ನ.13ಕ್ಕೆ ಬೋರಕರ ಬಂಧುಗಳ ಕ್ಷೇಮಾಭಿವೃದ್ಧಿ ಸಂಘದ ಉದ್ಘಾಟನಾ ಸಮಾರಂಭ

  300x250 AD

  ಶಿರಸಿ: ನಗರದ ಹುಬ್ಬಳ್ಳಿ ರಸ್ತೆಯಲ್ಲಿರುವ ಅಂಬೇಡ್ಕರ್ ಭವನದಲ್ಲಿ ನ. 13 ರವಿವಾರ ಬೆಳಿಗ್ಗೆ 10 ಗಂಟೆಗೆ ದಿ. ನಾಗೇಂದ್ರ ಕೊಲ್ಲೂರು ಬೋರಕರ ವೇದಿಕೆಯಲ್ಲಿ ಬೋರಕರ ಬಂಧುಗಳ ಕ್ಷೇಮಾಭಿವೃದ್ಧಿ ಸಂಘ (ರಿ.)ದ ಉದ್ಘಾಟನಾ ಸಮಾರಂಭವು ನಡೆಯಲಿದೆ.

  ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ‌ ಅಜ್ಜಪ್ಪ ಸೊಲಗದ ನೆರವೇರಿಸಲಿದ್ದು,
  ಅಧ್ಯಕ್ಷತೆಯನ್ನು ಉ.ಕ ಜಿಲ್ಲಾ ಬೋರಕರ ಬಂಧುಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸೀತಾರಾಮ ಕೋಥಾ ಬೋರಕರ ವಹಿಸಲಿದ್ದಾರೆ.
  ಮುಖ್ಯ ಅತಿಥಿಗಳಾಗಿ ನಿವೃತ್ತ ಪ್ರಾಂಶುಪಾಲ ಕೆ.ಎನ್. ಹೊಸಮನಿ ಆಗಮಿಸಲಿದ್ದಾರೆ.
  ಕಾರ್ಯಕ್ರಮದಲ್ಲಿ ಎಸ್.ಬಿ.ಎಂ.ನಿವೃತ್ತ ವ್ಯವಸ್ಥಾಪಕ ನಿರ್ದೇಶಕ ರಾಮಚಂದ್ರ ನಾಗೇಂದ್ರ ಬೋರಕರ,ಕೈಗಾರಿಕಾ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಧರ್ಮದಾಸ ಖೇಮು ಬೋರಕರ, ಅರಣ್ಯ ಇಲಾಖೆ ಯಲ್ಲಾಪುರ‌ದ ನಿವೃತ್ತ ಅಧೀಕ್ಷಕ ಬೀರಾ ಯೇಗು ಬೋರಕರ,ಎಪಿಎಂಸಿ ಶಿರಸಿ ನಿಕಟಪೂರ್ವ ಉಪಾಧ್ಯಕ್ಷ ಕೆರಿಯಾ ಆರ್. ಬೋರಕರ, ನಿವೃತ್ತ ಅಬಕಾರಿ ಅಧೀಕ್ಷಕ ಪುರಂದರ ವಾಮನ ಬೋರಕರ ಉಪಸ್ಥಿತರಿರುವರು .
  ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  300x250 AD

  Share This
  300x250 AD
  300x250 AD
  300x250 AD
  Back to top