Slide
Slide
Slide
previous arrow
next arrow

ಕ್ಯಾನ್ಸರ್ ಎದುರಿಸಲು ಬೇಕಿದೆ ಮಾನವೀಯ ನೆರವು

300x250 AD

ಶಿರಸಿ: ವೈದ್ಯಕೀಯ ಕ್ಷೇತ್ರದಲ್ಲಿ ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಬಡವರ ಪಾಲಿಗೆ ಅದು ಗಗನಕುಸುಮವಾಗಿಯೇ ಉಳಿದಿದೆ ಎನ್ನುವುದಕ್ಕೆ ತಾಲೂಕಿನ ಸಾಲ್ಕಣಿ ಬಳಿಯ ಹಕ್ರೆಮನೆಯ ಮಂಜುನಾಥ ಹೆಗಡೆ ಅವರ ಕುಟುಂಬ ಸಾಕ್ಷಿಯಾಗಿದೆ.

ತಮಗಿರುವ 8 ಗುಂಟೆ ಜಮೀನನಲ್ಲಿ ದುಡಿದು ಅದರೊಂದಿಗೆ ಅಡುಗೆ ಕೆಲಸ, ಸಿಹಿ ತಿಂಡಿಗಳನ್ನು ತಯಾರಿಸಿ ಮಾರಾಟ ಮಾಡಿ ಅದರಿಂದ ಬಂದ ಅಲ್ಪ ಆದಾಯದಲ್ಲಿಯೆ ಜೀವನ ಸಾಗಿಸುತ್ತಿದ್ದ ಮಂಜುನಾಥ ಹೆಗಡೆ ಅವರ ಕುಟುಂಬವೀಗ ಅಕ್ಷರಶಃ ಕಂಗಾಲಾಗಿದೆ.

ಮಾರಕ ಖಾಯಿಲೆ ಕ್ಯಾನ್ಸರ್‌ನಿಂದ ಮಂಜುನಾಥ ಹೆಗಡೆ ಅವರು ಬಳಲುತ್ತಿದ್ದು ಚಿಕಿತ್ಸೆಗೆ ಹಣವಿಲ್ಲದೆ ಪರದಾಡುತ್ತಿದ್ದಾರೆ. ಮಂಜುನಾಥ ಹೆಗಡೆ ಅವರು ಅತೀ ಸಣ್ಣ ಹಿಡುವಳಿದಾರರಾಗಿದ್ದು ಮಗಳ ವಿದ್ಯಾಭ್ಯಾಸದ ಖರ್ಚು-ವೆಚ್ಛಗಳಿಗೆ ಹಾಗೂ ಕುಟುಂಬ ನಿರ್ವಹಣೆಗಾಗಿ ಹಣಕಾಸಿನ ಅಡಚಣೆ ಇರುವುದರಿಂದ ಮಾಡಿದ ಸಾಲದ ಹೊರೆಯೂ ಹೆಚ್ಚಾಗಿದೆ.

300x250 AD

ಸಂಘ ಸಂಸ್ಥೆಗಳು, ದಾನಿಗಳು ಆರ್ಥಿಕ ನೆರವು ನೀಡುತ್ತಿದ್ದಾರೆಯಾದರೂ ಇನ್ನೂ ಮೂರುವರೆ ಲಕ್ಷಕ್ಕೂ ಹೆಚ್ಚಿನ ಹಣ ಅವರ ಚಿಕಿತ್ಸೆಗೆ ಅವಶ್ಯಕತೆ ಇದೆ. ಸಾರ್ವಜನಿಕರು ಬಡ ಕೃಷಿ ಕುಟುಂಬಕ್ಕೆ ಆರ್ಥಿಕ ನೆರವು ನೀಡಿ ಮಾನವೀಯ ಸ್ಪಂದನೆ ನೀಡಬೇಕಿದೆ. ಮಂಜುನಾಥ ಹೆಗಡೆ ಅವರ ಕೆಡಿಸಿಸಿ ಬ್ಯಾಂಕ್ ಸಾಲ್ಕಣಿ ಶಾಖೆ ಖಾತೆ ಸಂಖ್ಯೆ 622017524779, IFS CODE: KSCB0016001  ಇದಕ್ಕೆ ನೆರವು ನೀಡಬಹುದಾಗಿದೆ.

Share This
300x250 AD
300x250 AD
300x250 AD
Back to top