Slide
Slide
Slide
previous arrow
next arrow

ಚೆಲುವ ಕನ್ನಡ ನಾಡಿನ ಭವ್ಯತೆಯನ್ನು ಪರಿಚಯಿಸಿದ ಅಂಕೋಲಾ ಸಿಟಿ ಲಯನ್ಸ್ ಕ್ಲಬ್

300x250 AD

ಅಂಕೋಲಾ : 67ನೇ ಕನ್ನಡ ರಾಜ್ಯೋತ್ಸವ ನಿಮಿತ್ತ ಅಂಕೋಲಾ ನಗರದ ಹಲವು ಕಿರಿಯ-ಹಿರಿಯ ಮತ್ತು ಪ್ರೌಢಶಾಲೆಗಳು ನಗರದ ಪ್ರಮುಖ ರಸ್ತೆಗಳಲ್ಲಿ ಹಲವು ರೂಪಕಗಳೊಂದಿಗೆ ಪಥ ಸಂಚಲನ ನಡೆಸಿ ಜೈಹಿಂದ್ ಮೈದಾನದಲ್ಲಿ ಸಮಾವೇಶಗೊಂಡಿತು.
ಅಂಕೋಲಾ ಸಿಟಿ ಲಯನ್ಸ್ ಮೆರವಣಿಗೆಯಲ್ಲಿ ಭಾಗವಹಿಸಿದ ಮಕ್ಕಳಿಗಾಗಿ ಸುಮಾರು ಇಪ್ಪತ್ತು ಸಾವಿರದ ಚದರ ಅಡಿ ವಿಸ್ತೀರ್ಣದ ಬೃಹತ್ ಶಾಮಿಯಾನ ಭವ್ಯವಾಗಿ ನಿರ್ಮಿಸಿ, ಮಕ್ಕಳಿಗಾಗಿ, ನಾಗರೀಕರಿಗಾಗಿ ನೆರಳು ಮತ್ತು ನೀರಿನ ವ್ಯವಸ್ಥೆ ಮಾಡಿತ್ತು. ಲಯನ್ಸ್ ಸದಸ್ಯರಾದ, ಲ. ಗಣಪತಿ ಎಂ. ಹೆಗಡೆ, ಮೋಹನ ಎಸ್. ಶೆಟ್ಟಿ, ಲ. ಎನ್.ಎಚ್. ನಾಯ್ಕ, ಲ. ಅಪೂರ್ವ ರಾಯ್ಕರ್, ಲ. ಕಮಲಾಕರ ಬೋರಕರ, ಉದಯಾನಂದ ನೇರಲಕಟ್ಟೆ, ಲ. ಸುಬ್ರಹ್ಮಣ್ಯ ರೇವಣಕರ, ಸುಮಾ ರೇವಣಕರ, ಲ. ನಾಗರಾಜ ಮಹಾಲೆ, ನೀತಾ ಮಹಾಲೆ, ಲ. ನಯನಾ ಶೇಟ್, ಲ.ಅರುಣ ಶೇಟ್ ಸಂಪೂರ್ಣ ಪ್ರಾಯೋಜಕತ್ವ ವಹಿಸಿದರು.
ರಾಜ್ಯೋತ್ಸವದ ಪ್ರಮುಖ ಆಕರ್ಷಣೆಯಾಗಿ ಶಾಮಿಯಾನದಲ್ಲಿ ಸುಮಾರು 480 ಮೀ. ಉದ್ದ ಮತ್ತು 1 ಮೀ. ಅಗಲದ ಕನ್ನಡ ನಾಡಿನ ಭವ್ಯತೆಯನ್ನು ಸಾರುವ ಆಕರ್ಷಕ ನಾಡಿನ ಜ್ಞಾನಕೋಶದಂತಿರುವ, ಹೋಲ್ಡಿಂಗ್ ಬ್ಯಾನರ್ ನಿರ್ಮಿಸಿ, ನಾಡಿನ ಪ್ರಮುಖ ರಾಜಮನೆತನ, ರಾಜ-ಮಹಾರಾಜರುಗಳ ಅವರ ಕೊಡುಗೆಗಳನ್ನು ಶಿಲ್ಪಕಲೆಗಳನ್ನು, ನಾಡಿನ ಹೆಮ್ಮೆಯ ಸಾಧು-ಸಂತರು, ಕವಿಗಳು, ಸಾಹಿತಿಗಳು ಶಿವಶರಣರನ್ನು, ದಾಸರುಗಳನ್ನು, ಆಕರ್ಷಕ ಪ್ರವಾಸಿ ತಾಣಗಳು, ಪಕ್ಷಿಧಾಮ, ವನ್ಯಜೀವಿ ಅಭಯಾರಣ್ಯಗಳು, ಕನ್ನಡ ಏಕೀಕರಣಕ್ಕಾಗಿ ಶ್ರಮಿಸಿದ ಮಹನೀಯರನ್ನು ದೇಗುಲಗಳನ್ನು ಪರಿಚಯಿಸಿದ ಕಾರ್ಯ ಕೈಗೊಳ್ಳಲಾಯಿತು.
ಈ ಅಪರೂಪದ ಕಾರ್ಯಗಳಿಗೆ ‘ಶ್ರೀ ಮಹಾಲಕ್ಷ್ಮಿ ಕೇಟರ‍್ಸ್’ನ ಎಂ.ಜೆ.ಎಫ್. ಲ. ಶಶಿಧರ ಶೇಣ್ವಿ, ಲ. ಸಹನಾ ಶೇಣ್ವಿ, ‘ಶ್ರೀ ಕನ್ಸ್ಟ್ರಕ್ಷನ್ ’ ಉದ್ಯಮಿ ಲ. ಅಮೋಲ ಪ್ರಭು ಮತ್ತು ಲ. ವಿಜಯಶ್ರೀ ಪ್ರಭು, ‘ಅಚ್ಯುತ್ ಪಂಡಿತ ಸ್ಮಾರಕ ಹಾಸ್ಪಿಟಲ್’ ವೈದ್ಯರಾದ ಡಾ: ವಿಜಯದೀಪ್ ಮಣಿಕೋಟ್ ಹಾಗೂ ಲ. ರೋಶ್ನಾ ವಿಜಯದೀಪ್, ಲಯನ್ಸ್ ಅಧ್ಯಕ್ಷೆ, ‘ಜೀವಿಕಾ ಜನರೇಶನ್’ ಮಾಲೀಕರಾದ ಲ. ಜಯಶ್ರೀ ಪಿ. ಶೆಟ್ಟಿ ಮತ್ತು ಪ್ರಶಾಂತ ಶೆಟ್ಟಿ, ‘ಇಝೀ ಮಾರ್ಟ’ ಮಾಲೀಕರಾದ ಲ. ಪ್ರದೀಪ ರಾಯ್ಕರ, ಲ. ಪ್ರಿಯಾ ರಾಯ್ಕರ, ‘ಮಾಯಾ ಬ್ಯೂಟಿ ಪಾರ್ಲರ್’ ಸಂಚಾಲಕರಾದ ಲ. ಮಾಯಾ ಶೆಟ್ಟಿ ಮತ್ತು ಲ. ಕೃಷ್ಣಾನಂದ ವಿ. ಶೆಟ್ಟಿ, ಗೋಖಲೆ ಶತಮಾನೋತ್ಸವ ಕಾಲೇಜು ಪ್ರಾಣಿಶಾಸ್ತ್ರ ವಿಭಾಗ ಮುಖ್ಯಸ್ಥರಾದ ಲ. ಡಾ: ಶಾಂತಾರಾಮ ಶಿರೋಡ್ಕರ, ಲ. ಭಾರತಿ ಶಿರೋಡ್ಕರ ಪ್ರಾಯೋಜಕತ್ವ ವಹಿಸಿ ಕನ್ನಡಾಭಿಮಾನವನ್ನು ಮೆರೆದರು. ವಿದ್ಯಾರ್ಥಿಗಳು, ಶಿಕ್ಷಕರು, ಸಾರ್ವಜನಿಕರಿಂದ ಪ್ರದರ್ಶನ ಕುರಿತು ಅಪಾರ ಮೆಚ್ಚುಗೆ-ಪ್ರಶಂಸೆಗೆ ಪಾತ್ರವಾಯಿತು.
ಚಲುವ ಕನ್ನಡ ನಾಡಿನ ಭವ್ಯತೆ ಮೆರೆಯುವ ಈ ಪ್ರದರ್ಶನವನ್ನು ತಾಲೂಕಾ ತಹಸೀಲ್ದಾರ ಉದಯ ಕುಂಬಾರ ಅವರು ರಿಬ್ಬನ್ ಕತ್ತರಿಸಿ ಉದ್ಘಾಟಿಸಿದರು. ಪುರಸಭಾ ಅಧ್ಯಕ್ಷೆ ಶಾಂತಲಾ ನಾಡ್ಕರ್ಣಿ, ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಪಿ.ವೈ. ಸಾವಂತ, ಪುರಸಭೆ ಮುಖ್ಯಾಧಿಕಾರಿ ಎಂ.ಎನ್. ಮೇಸ್ತಾ, ಪೊಲೀಸ್ ವೃತ್ತ ನಿರೀಕ್ಷಕ ಸಂತೋಷಕುಮಾರ ಶೆಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಲಲಕ್ಷ್ಮಿ ಪಾಟೀಲ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಗದೀಶ ನಾಯಕ ಹೊಸ್ಕೇರಿ, ನ್ಯಾಯವಾದಿ ಸುಭಾಷ್ ನಾರ್ವೇಕರ, ಪತ್ರಕರ್ತರ ಸಂಘದ ಅಧ್ಯಕ್ಷ ಅರುಣ ಶೆಟ್ಟಿ, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಸಿಟಿ ಲಯನ್ಸ್ ಕ್ಲಬ್ ಸದಸ್ಯರು ಪಾಲ್ಗೊಂಡು ಲಯನ್ಸ್ ಅಂಕೋಲಾ ಸಿಟಿಯ ವಿನೂತನ ಕಾರ್ಯ ಸ್ಥಾಪಿಸಿದರು.

300x250 AD
Share This
300x250 AD
300x250 AD
300x250 AD
Back to top