Slide
Slide
Slide
previous arrow
next arrow

ಗೋವು ಮಾನವ ಕುಲದ ಸಂಪತ್ತು: ಎಂ.ಪಿ.ಭಟ್

300x250 AD

ಅಂಕೋಲಾ: ವಿಶ್ವ ಹಿಂದೂ ಪರಿಷತ್ ಮತ್ತು ಮಾತೃ ಮಂಡಳಿ ತಾಲೂಕು ಘಟಕ, ಹನುಮಟ್ಟಾ ಶ್ರೀ ಲಕ್ಷ್ಮೀನಾರಾಯಣ ಮಹಾಮಾಯ ದೇವಸ್ಥಾನದ ಧರ್ಮದರ್ಶಿ ಮಂಡಳಿ ಮತ್ತು ಎಲ್ಲಾ ಗೋ ಪ್ರೇಮಿಗಳ ಸಂಯುಕ್ತ ಆಶ್ರಯದಲ್ಲಿ ಇತ್ತೀಚಿಗೆ ಶ್ರೀ ಲಕ್ಷ್ಮಿ ನಾರಾಯಣ ಮಹಾಮಾಯ ದೇವಸ್ಥಾನದ ಸಭಾಭವನದ ಪಕ್ಕದಲ್ಲಿ ಗೋ ಪೂಜಾ ಕಾರ್ಯಕ್ರಮ ನಡೆಯಿತು. ಸಭಾ ಕಾರ್ಯಕ್ರಮ 3 ಬಾರಿ ಓಂಕಾರದೊಂದಿಗೆ ಪ್ರಾರಂಭವಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಕೀಲ ಎಂ.ಪಿ.ಭಟ್, ಗೋವು ಮಾನವ ಕುಲದ ಸಂಪತ್ತು. ಗೋವು ಪೋಷಿಸುತ್ತಿರುವಾಗ ಅದರಿಂದ ನಾವು ಅಮೃತವನ್ನು ಪಡೆಯುತ್ತೇವೆ. ಗೋವು ಸತ್ತ ನಂತರವು ಅದರ ಅವಶೇಷಗಳು ಔಷಧಿಯ ರೂಪದಲ್ಲಿ ಮತ್ತು ತಾಂತ್ರಿಕ ಕೆಲಸಗಳಲ್ಲಿಯೂ ಬಳಕೆಯಾಗುತ್ತದೆ ಎಂದು ನುಡಿದರು. ಗೋವಿನ ವಧೆ ಮಾಡಬಾರದೆಂಬ ಕಾನೂನು ಇದೆ ಎಂದು ನುಡಿದರು.
ಮುಖ್ಯ ವಕ್ತರರಾಗಿ ಆಗಮಿಸಿದ್ದ ಗೋವಿಂದ ಕೆಸನ್‌ಮನೆ, ಗೋವುಗಳನ್ನು ಪೋಷಿಸುವುದರಿಂದ ವಾತಾವರಣ ಶುದ್ಧಿಯಾಗುವುದು. ಮತ್ತು ಗೋವಿನ ತಳಿಗಳ ಬಗ್ಗೆ ಮಾಹಿತಿ ನೀಡಿ, ಯಾವ ಯಾವ ಪರಿಸರ ಯಾವ ತಳಿಗಳನ್ನು ಪೋಷಿಸಲು ಯೋಗ್ಯ, ಪಂಚಜನ್ಯದ ಉಪಯೋಗ ಹಾಗೂ ಕೃಷಿಯಲ್ಲಿ ಗೋವು ಪೋಷಿಸುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ತಿಳಿಸಿದರು. ಗೋ ಪೂಜೆಯನ್ನು ತಮ್ಮ ಊರಿನಲ್ಲಿ ಸಂಘಟಿಸಿಬೇಕೆಂದು ಆಗ್ರಹಪಡಿಸಿದರು.
ವಸಂತ ನಾಯ್ಕ ಮಾತನಾಡಿ, ಶ್ರೀಕೃಷ್ಣ ಪರಮಾತ್ಮನೇ ಗೋವಿನ ಮಹತ್ವವನ್ನು ಸಾರುತ್ತ ‘ಗೋಪಾಲಕ’ ಎಂದು ಕರೆಯಿಸಿಕೊಂಡಿದ್ದಾನೆ ಎಂದು ನುಡಿದರು. ಪ್ರಾರಂಭದಲ್ಲಿ ಗೀತಾ ಶೆಟ್ಟಿ ಪ್ರಾರ್ಥನೆ ಮಾಡಿದರು. ಸುರಕ್ಷಾ ಭೋವಿ ಅತಿಥಿಗಳನ್ನು ಸ್ವಾಗತಿಸಿದರು. ಸುರೇಶ ಭೋವಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.
ವೇದಿಕೆಯಲ್ಲಿ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಎಂ.ಎಂ ಕರ್ಕಿಕರ, ಗೌರವಾಧ್ಯಕ್ಷ ಸುರೇಶ್ಚಂದ್ರ ಬಾಂತೆ, ಮಾತೃ ಮಂಡಳಿ ಅಧ್ಯಕ್ಷೆ ಭಾಗೀರಥಿ ಹೆಗಡೆಕಟ್ಟೆ ಉಪಸ್ಥಿತರಿದ್ದರು. ರವಳನಾಥ ಮುಕುಂದ ಗೋಡೆ, ಶ್ರೀಲಕ್ಷ್ಮೀನಾರಾಯಣ ಮಹಾಮಾಯಾ ದೇವಸ್ಥಾನದ ಆಡಳಿತ ಮಂಡಳಿಯ ಮೊಕ್ತೇಸರರು ಗೋ ಪೂಜೆ ಮಾಡಲು ಹಾಗೂ ಎಲ್ಲ ಗೋ ಪೋಷಕರಿಗೆ ಸನ್ಮಾನ ನಡೆಸಲು ಸಂಪೂರ್ಣ ಸಹಕಾರ ನೀಡಿದರು. ಅಲ್ಲದೇ ಎಲ್ಲ ಗೋ ಪ್ರೇಮಿಗಳಿಗೆ ಮತ್ತು ಊರಿನ ನಾಗರಿಕರಿಗೆ ಉಪಹಾರದ ವ್ಯವಸ್ಥೆ ಮಾಡಿದರು. ಈ ಕಾರ್ಯಕ್ರಮದಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಮಾತೃ ಮಂಡಳಿ ಸದಸ್ಯರು, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸೇವೆಕರು ಕಾರ್ಯಕ್ರಮದಲ್ಲಿ ಸಹಕರಿಸಿದ್ದರು.

300x250 AD
Share This
300x250 AD
300x250 AD
300x250 AD
Back to top