Slide
Slide
Slide
previous arrow
next arrow

ಕ್ರೀಡಾಕೂಟ: ಸರಕುಳಿ ಪ್ರೌಢಶಾಲೆ ವಿದ್ಯಾರ್ಥಿನಿ ರಾಜ್ಯಮಟ್ಟಕ್ಕೆ

300x250 AD

ಸಿದ್ದಾಪುರ: ಶಿರಸಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆದ ಶಿರಸಿ ಶೈಕ್ಷಣಿಕ ಜಿಲ್ಲಾಮಟ್ಟದ 17 ವರ್ಷ ವಯೋಮಿತಿಯ ಕ್ರೀಡಾಕೂಟದಲ್ಲಿ ತಾಲೂಕಿನ ಸರಕುಳಿಯ ಶ್ರೀ ಜಗದಂಬಾ ಪ್ರೌಢಶಾಲೆಯ ವಿದ್ಯಾರ್ಥಿನಿ ನಂದಿನಿ ಗೌಡ 800ಮೀ ಓಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.

ಇವಳು ಶಿರಸಿ ತಾಲೂಕಿನ ಮತ್ತಿಗಾರ ಓಣಿಮನೆಯ ತಿಮ್ಮಾ ಗೌಡ ಮತ್ತು ಗೌರಿ ಗೌಡ ಇವರ ಪುತ್ರಿ. ವಿದ್ಯಾರ್ಥಿನಿಯ ಈ ಸಾಧನೆಗೆ ಶಾಲಾ ಸಿಬ್ಬಂದಿಗಳು, ಸಮಿತಿಯ ಸದಸ್ಯರು ಹಾಗೂ ಊರವರು ಹರ್ಷ ವ್ಯಕ್ತಪಡಿಸಿ ರಾಜ್ಯಮಟ್ಟದಲ್ಲಿಯೂ ಸಹ ವಿದ್ಯಾರ್ಥಿನಿಗೆ ಗೆಲುವು ದೊರೆಯಲೆಂದು ಹಾರೈಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top