Slide
Slide
Slide
previous arrow
next arrow

ಡಾ.ಟಿ.ಸಿ.ಮಲ್ಲಾಪುರಮಠ ನಿಧನ

300x250 AD

ಹಳಿಯಾಳ: ತಾಲೂಕಿನ ಹಿರಿಯ ಆಧ್ಯಾತ್ಮಿಕ ಚಿಂತಕ, ಜ್ಯೋತಿಷ್ಯ ಪರಿಣಿತ, ಆಯುರ್ವೇದ ವೈದ್ಯ, ತೇರಗಾಂವ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾ.ಟಿ.ಸಿ.ಮಲ್ಲಾಪುರಮಠ ಅವರು ಪಟ್ಟಣದ ಬ್ರಾಹ್ಮಣಗಲ್ಲಿಯ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ನಿಧನ ಹೊಂದಿದರು.

ಮೂಲತಃ ರಾಮದುರ್ಗ ತಾಲೂಕಿನ ಕಲ್ಲಾಳ ಗ್ರಾಮದವರಾಗಿದ್ದ ಮಲ್ಲಾಪುರಮಠ ಅವರು ಕಳೆದ 30 ವರ್ಷಗಳ ಹಿಂದೆ ತಮ್ಮ ಶಿಕ್ಷಕ ವೃತ್ತಿ ನಿರ್ವಹಿಸಲು ತಾಲೂಕಿಗೆ ಬಂದು ಕಾಲಕ್ರಮೇಣ ಇಲ್ಲಿಯೇ ನೆಲೆ ಕಂಡುಕೊಂಡಿದ್ದರು. ಅತ್ಯಂತ ಪ್ರಖರ ವಾಗ್ಮಿ, ಆಧ್ಯಾತ್ಮದಲ್ಲಿ ಅಪಾರ ಅನುಭವ, ಆಧ್ಯಾತ್ಮಿಕ ಚಿಂತಕರಾಗಿ, ಆಯುರ್ವೇದ ವೈದ್ಯರಾಗಿ, ಜ್ಯೋತಿಷ್ಯದಲ್ಲಿಯೂ ಪರಿಣಿತರಾಗಿದ್ದ ಇವರ ಬಳಿ ರಾಜ್ಯದ ವಿವಿಧ ಭಾಗಗಳಿಂದ ಜನರು ಆಗಮಿಸುತ್ತಿದ್ದರು.

ಸಾವಯವ ಕೃಷಿಯ ಬಗ್ಗೆ ಅಪಾರ ಜ್ಞಾನ ಹೊಂದಿದ್ದ ಇವರು ಅನೆಕರ ಬಾಳಿಗೆ ದಾರಿದೀಪವಾಗಿದ್ದಾರೆ. ಇನ್ನು ಹಿಂದೂ ಧಾರ್ಮಿಕ ಕಾರ್ಯಗಳಲ್ಲಿ ಮುಂಚೂಣಿಯಲ್ಲಿರುತ್ತಿದ್ದ ಇವರು, ಸಿದ್ದೇಶ್ವರ ಸ್ವಾಮೀಜಿ ಸೇರಿ ಅನೇಕ ಸ್ವಾಮಿಜಿಗಳ ನಿಕಟವರ್ತಿಗಳಾಗಿದ್ದರು. ಸುತ್ತಮುತ್ತಲ ತಾಲೂಕಿನಲ್ಲೂ ಇವರು ಚಿರಪರಿಚಿತರು. ಅವರು ಪತ್ನಿ, ಮಾವ, ಇಬ್ಬರು ಗಂಡು ಮಕ್ಕಳು, ಓರ್ವ ಹೆಣ್ಣು ಮಗಳನ್ನು ಹಾಗೂ ಅಪಾರ ಬಂಧು- ಬಳಗವನ್ನು ಅಗಲಿದ್ದಾರೆ.

300x250 AD

ಬೆಂಗಳೂರಿನ ಗೋಸಾಯಿ ಮಹಾಸಂಸ್ಥಾನ ಮಠ, ಭವಾನಿ ದತ್ತ ಪಿಠದ ಮರಾಠಾ ಜಗದ್ಗುರು ಮಂಜುನಾಥ ಭಾರತಿ ಸ್ವಾಮೀಜಿ, ಉಪ್ಪಿನ ಬೇಟಗೇರಿಯ ಶ್ರೀವೀರುಪಾಕ್ಷೇಶ್ವರ ಮಹಾಸ್ವಾಮೀಜಿ, ಹಳಿಯಾಳ ಆದಿಶಕ್ತಿ ಪಿಠದ ಕೃಷ್ಣಾನಂದ ಭಾರತಿ ಸ್ವಾಮೀಜಿ, ಶಾಸಕ ಆರ್.ವಿ.ದೇಶಪಾಂಡೆ, ಮಾಜಿ ಶಾಸಕ ಸುನಿಲ್ ಹೆಗಡೆ, ವಿಧಾನ ಪರಿಷತ್ ಮಾಜಿ ಸದಸ್ಯರಾದ ವಿ.ಡಿ.ಹೆಗಡೆ, ಎಸ್.ಎಲ್.ಘೋಟ್ನೇಕರ, ಕರ್ನಾಟಕ ರಕ್ಷಣಾ ವೇದಿಕೆ, ಶರಣ ಸಾಹಿತ್ಯ ಪರಿಷತ್, ಹಳಿಯಾಳ ಲಿಂಗಾಯತ ಸಮಾಜ, ಜಯಕರ್ನಾಟಕ ಸಂಘಟನೆ ಸೇರಿದಂತೆ ಹಲವು ಸಂಘ- ಸಂಸ್ಥೆಗಳವರು ಸಂತಾಪ ಸೂಚಿಸಿದ್ದಾರೆ.

Share This
300x250 AD
300x250 AD
300x250 AD
Back to top