Slide
Slide
Slide
previous arrow
next arrow

ಕನ್ನಡ ರಾಜ್ಯೋತ್ಸವದ ಅಂಗವಾಗಿ ನಡೆದ ಶಾಲಾ ಮಕ್ಕಳ ಆಕರ್ಷಕ ಪಥಸಂಚಲನ

300x250 AD

ಅಂಕೋಲಾ: 67ನೇ ಕನ್ನಡ ರಾಜ್ಯೋತ್ಸವವನ್ನು ತಾಲೂಕಿನಲ್ಲಿ ಸಂಭ್ರಮದಿಂದ ಆಚರಿಸಲಾಗಿದ್ದು, ಪಟ್ಟಣದಲ್ಲಿನ ಆಯಾ ಶಾಲೆಗಳ ಸ್ಥಬ್ಧ ಚಿತ್ರಗಳು ಸೇರಿದಂತೆ ಸ್ಥಳೀಯ ಶಾಲಾ ಮಕ್ಕಳ ಆಕರ್ಷಕ ಪಥಸಂಚಲನ ಪಟ್ಟಣದಲ್ಲಿ ನಡೆಯಿತು.

ತಹಶೀಲ್ದಾರ ಉದಯ ಕುಂಬಾರ ರಾಜ್ಯೋತ್ಸವದ ಪಥಸಂಚಲನಕ್ಕೆ ಚಾಲನೆ ನೀಡಿದರು. ಸ್ಥಳೀಯ ಶಾಲಾ ಕಾಲೇಜು ಮಕ್ಕಳ ಜೊತೆ ಜನಪ್ರತಿನಿದಿಗಳು ಮತ್ತು ಕನ್ನಡಪರ ಸಂಘಟನೆ ಕಾರ್ಯಕರ್ತರು ಸೇರಿಕೊಂಡು ಜೈಹಿಂದ ಮೈದಾನದಿಂದ ಹೊರಟ ಪಥಸಂಚಲನ ಕೆಸಿ ರಸ್ತೆ, ನಗರದ ಮುಖ್ಯ ರಸ್ತೆಯ ಮೂಲಕ ಪುನಃ ಜೈಹಿಂದ್ ಮೈದಾನದಲ್ಲಿ ಸೇರಿದರು.

ಈ ಪಥಸಂಚಲನದಲ್ಲಿ ಮುಖ್ಯವಾಗಿ ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನ, ಕರ್ನಾಟಕ ಭುವನೇಶ್ವರಿ, ಗಡಿ ಕಾಯುವ ಸೈನಿಕರು, ಹುಲಿವೇಷ ಕುಣಿತ, ಉಳುವ ಯೋಗಿ, ಸೈಕಲ್ ಜಾಥಾ, ಬೇಡರವೇಶ, ಯಕ್ಷಗಾನ, ಕಿತ್ತೂರು ರಾಣಿ ಚೆನ್ನಮ್ಮ, ನಟ ಪುನೀತ ಕರ್ನಾಟಕ ರತ್ನ ಪ್ರಶಸ್ತಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೀಡುವ ಸ್ಥಬ್ಧ ಚಿತ್ರ ಸೇರಿದಂತೆ ಅನೇಕ ಸ್ಥಬ್ಧ ಚಿತ್ರಗಳು ನಗರದಲ್ಲಿ ವಿಶೇಷ ಪ್ರರ್ದಶ್ರನ ನೀಡಿದವು.

300x250 AD

ಶಾಲಾ ಮಕ್ಕಳ ಪೂರ್ಣಕುಂಬ, ಕನ್ನಡ ದ್ವಜ ಹಿಡಿದು ಪಥಸಂಚಲನದಲ್ಲಿ ಭಾಗವಹಿಸಿರುವುದು ಆಕರ್ಷಕವಾಗಿತ್ತು. ಸ್ಥಬ್ಧಚಿತ್ರ ಮತ್ತು ಪಥಸಂಚಲನ ನಡೆಸಿದ ಶಾಲೆಗಳಿಗೆ ಬಹುಮಾನ ವಿತರಣೆ ಕಾರ್ಯಕ್ರಮ ಜೈಹಿಂದ ಮೈದಾನದಲ್ಲಿ ನಡೆಯಿತು.

Share This
300x250 AD
300x250 AD
300x250 AD
Back to top