• first
  second
  third
  Slide
  previous arrow
  next arrow
 • ನಾಡ ಭಾಷೆ, ಸಂಸ್ಕೃತಿಯನ್ನು ಸದಾ ಕಾಲ ಗೌರವಿಸಬೇಕು: ನಾಯ್ಕಡ್

  300x250 AD

  ಹೊನ್ನಾವರ: ನಾಡ ಭಾಷೆ ಹಾಗೂ ಸಂಸ್ಕೃತಿಯನ್ನು ನಾವು ಸದಾ ಕಾಲ ಗೌರವಿಸಬೇಕು ಎಂದು ತಹಶೀಲ್ದಾರ ನಾಗರಾಜ ನಾಯ್ಕಡ್ ಹೇಳಿದರು.

  ಪಟ್ಟಣದ ಪೊಲೀಸ್ ಪೆರೇಡ್ ಮೈದಾನದಲ್ಲಿ ತಾಲೂಕ ಆಡಳಿತ ಹಾಗೂ ವಿವಿಧ ಇಲಾಖೆಯ ಸಹಯೋಗದಲ್ಲಿ ನಡೆದ ಕನ್ನಡ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಿದ ಕಾರ್ಯಕ್ರಮದ ಅಂಗವಾಗಿ ಭುವನೇಶ್ವರಿ ದೇವಿಗೆ ಪುಷ್ಪಾರ್ಚನೆ ನಡೆಸಿದ ಬಳಿಕ ಮಾತನಾಡಿದರು.

  ಸಭಾ ಕಾರ್ಯಕ್ರಮದ ಬಳಿಕ ವಿವಿಧ ಶಾಲಾ ವಿದ್ಯಾರ್ಥಿಗಳು, ನಾಡಿನ ವಿವಿಧ ಹೋರಾಟಗಾರರು, ಸಂಸ್ಕ್ರತಿ ಸಾರುವ ಸ್ತಬ್ಧಚಿತ್ರ ಮೆರವಣೆಗೆ ಪಟ್ಟಣದ ವಿವಿಧಡೆ ಸಂಚರಿಸಿತು.

  300x250 AD

  ವೇದಿಕೆಯಲ್ಲಿ ಪ.ಪಂ. ಉಪಾಧ್ಯಕ್ಷೆ ನಿಶಾ ಶೇಟ್, ನಿಕಟಪೂರ್ವ ಅಧ್ಯಕ್ಷ ಶಿವರಾಜಮೇಸ್ತ, ಸದಸ್ಯೆ ಮೇಧಾ ನಾಯ್ಕ, ಇ.ಓ ಸುರೇಶ ನಾಯ್ಕ, ಸಿ.ಪಿ.ಐ ಶ್ರೀಧರ ಎಸ್.ಆರ್, ಪ.ಪಂ.ಮುಖ್ಯಾಧಿಕಾರಿ ಪ್ರವೀಣಕುಮಾರ್, ಯುವಜನಸೇವಾ ಕ್ರೀಡಾಧಿಕಾರಿ ಸುಧೀಶ ನಾಯ್ಕ, ಶಿಕ್ಷಕರು ಇದ್ದರು.

  Share This
  300x250 AD
  300x250 AD
  300x250 AD
  Back to top