Slide
Slide
Slide
previous arrow
next arrow

ಅಪ್ಪುಗೆ ಸಂಗೀತ ನಮನ ಕಾರ್ಯಕ್ರಮ

300x250 AD

ಶಿರಸಿ :ಪುನೀತ ರಾಜಕುಮಾರ ಇವರ ಪ್ರಥಮ ಪುಣ್ಯಸ್ಮರಣೆ ಅಂಗವಾಗಿ ಆತ್ಮೀಯ ಅಪ್ಪುಗೆ ಸಂಗೀತ ನಮನ ಕಾರ್ಯಕ್ರಮವನ್ನು ಅರುಣೋದಯ ತರಬೇತಿ ಕೇಂದ್ರದಲ್ಲಿ ಶಿರಸಿ ಮಾರಿಕಾಂಬ ಕರೋಕೆ ಸ್ಟುಡಿಯೊ ಮತ್ತು ಅರುಣೋದಯ ಸಂಸ್ಥೆಯ ಜಂಟಿ ಸಹಭಾಗಿತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ಪುನೀತ ರಾಜಕುಮಾರ ಇವರ ಭಾವಚಿತ್ರಕ್ಕೆ ಪುಷ್ಪವನ್ನು ಅರ್ಪಿಸುವ ಮೂಲಕ ವಿದೂಷಿ ರೇಖಾ ದಿನೇಶ ಉದ್ಘಟಿಸಿದರು. ನಂತರ ಮಾತನಾಡಿದ ಅವರು ಪುನಿತ್ ರಾಜಕುಮಾರ ತಮ್ಮ ಸಾಮಾಜಿಕ ಸೇವೆಯ ಮೂಲಕ ಅಮರರಾಗಿದ್ದು, ಅವರು ಇಂದು ದಾರ್ಶನಿಕರ ಸಾಲಿನಲ್ಲಿ ನಿಲ್ಲುತ್ತಾರೆ ಎಂದರು.
ಅತಿಥಿಗಳಾಗಿ ಆಗಮಿಸಿದ್ದ ಡಾ|| ಮಹೇಶ ಭಟ್ ಮಾತನಾಡಿ ಕೆಲ ಮನುಷ್ಯರು ದೈವಾಂಶ ಸಂಭೂತರಿರುತ್ತಾರೆ ಎಂದು ನಾವೂ ಕೇಳಿದ ನೆನಪಿತ್ತು ಆದರೆ ಅಪ್ಪುವಿನಿಂದ ದೈವಾಂಶ ಸಂಬೂತ ವ್ಯಕ್ತಿಯನ್ನು ನಾವು ನಮ್ಮ ಜೀವಿತ ಅವಧಿಯಲ್ಲಿ ನೋಡಿದ ಹಾಗಾಯ್ತು ಎಂದರು.

ಡಿ.ವಾಯ್ ಎಸ್.ಪಿ ಮಂಗಳೂರು ಶಿವಪ್ರಕಾಶ ನಾಯ್ಕ ಮಾತನಾಡಿ ಪುನೀತ ಇಂದು ಅವರು ತಮ್ಮ ಸೇವೆ ಮತ್ತು ವಿನಯತೆಯಿಂದ ಎಲ್ಲರ ಮನದಲ್ಲಿ ಅಮರರಾಗಿದ್ದಾರೆ. ಅವರ ಹಾದಿಯಲ್ಲಿ ನಾವೇಲ್ಲರು ನೆಡೆಯುವುದೆ ನಾವು ಅವರಿಗೆ ಸಲ್ಲಿಸುವ ನಿಜವಾದ ಶೃದ್ದಾಂಜಲಿ ಎಂದರು

300x250 AD

ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಉದ್ಯಮಿ ಪ್ರದೀಪ ಎಲ್ಲನಕರ ಮಾತನಾಡಿ ನಾವೇಲ್ಲರೂ ಪುನಿತ ಇವರ ಆದರ್ಶವನ್ನು ಮೈಗೂಡಿಸಿಕೊಂಡು ಸಮಾಜದ ಅಭಿವೃದ್ದಿಗೆ ಶ್ರಮಿಸೋಣ ಎಂದರು.
ಪ್ರಾರಂಭದಲ್ಲಿ ಅರುಣೋದಯ ಸಂಸ್ಥೆಯ ಸಂಸ್ಥಾಪಕ ಶ್ರೀ ಸತೀಶ ನಾಯಕ ಕಾರ್ಯಕ್ರಮದ ಔಚಿತ್ಯದ ಬಗ್ಗೆ ಪ್ರಸ್ತಾವಿಕವಾಗಿ ಮಾತನಾಡಿ ಎಲ್ಲರನ್ನು ಸ್ವಾಗತಿಸಿದರು. ವಿನಾಯಕ ಶೇಟ ಕಾರ್ಯಕ್ರಮ ನಿರ್ವಹಿಸಿದರು. ವೇದಿಕೆಯ ಮೇಲೆ ಸಂತೋಷ ಶೇಟ ದಿನೇಶ ಹೆಗಡೆ. ರೋಷನ ಪಾವಸ್ಕರ ಉಪಸ್ಥಿತರಿದ್ದರು. ನಂತರ ಎಲ್ಲರು ದೀಪ ಬೆಳಗಿ ಪುನೀತ ಇವರಿಗೆ ನಮನ ಸಲ್ಲಿಸಿದರು. ನಂತರ ಕರೋಕೆ ಸ್ಟುಡಿಯೊದ ಗಾಯಕ ಗಾಯಕಿಯರು ಪುನೀತ ಅಭಿನಯದ ಚಿತ್ರದ ಗೀತೆಯನ್ನು ಹಾಡಿ ಸಂಗೀತ ನಮನ ಸಲ್ಲಿಸಿದರು ಸುಮಾರು 45 ಗಾಯಕ/ಕಿಯರು ಗಾಯನದಲ್ಲಿ ಭಾಗವಹಿಸಿದ್ದರು.

Share This
300x250 AD
300x250 AD
300x250 AD
Back to top