• Slide
  Slide
  Slide
  previous arrow
  next arrow
 • ವಿದ್ಯಾರ್ಥಿಗಳು ಸವಾಲು ಎದುರಿಸಲು ಸಿದ್ಧವಾಗಿರಬೇಕು: ದಿನಕರ ಶೆಟ್ಟಿ

  300x250 AD

  ಹೊನ್ನಾವರ: ವೃತ್ತಿ ಮಾರ್ಗದರ್ಶನ ಕಾರ್ಯಕ್ರಮವನ್ನು ವಿದ್ಯಾರ್ಥಿಗಳಿಗೆ ಮಾಡುತ್ತಿರುವುದು ನಿಜಕ್ಕೂ ಅಭಿನಂದನಾರ್ಹ. ವಿದ್ಯಾರ್ಥಿಗಳು ಸವಾಲನ್ನು ಎದುರಿಸಲು ಸಿದ್ಧವಾಗಿರಬೇಕು. ಚಾಲೆಂಜ್ ಎದುರಿಸುವ ಗುರಿ ಇದ್ದರೆ ಏನು ಬೇಕಾದರು ಸಾಧಿಸಬಹುದು. ಎಂ.ಪಿ.ಇ ಸೊಸೈಟಿಯ ಕಾರ್ಯ ನಿಜಕ್ಕು ಶ್ಲಾಘನೀಯ. ಕಾಲೇಜಿನ ಆಡಳಿತ ಮಂಡಳಿ ದೂರದೃಷ್ಟಿತ್ವವನ್ನು ಹೊಂದಿದ್ದು, ಅವರ ಕೆಲಸವನ್ನು ಅಭಿನಂದಿಸಲೇಬೇಕು. ಜಿಲ್ಲೆಯ ಉತ್ತಮ ಕಾಲೇಜುಗಳಲ್ಲಿ ಎಸ್‌ಡಿಎಮ್ ಕಾಲೇಜು ಮುಂಚೂಣಿಯಲ್ಲಿ ನಿಲ್ಲುತ್ತದೆ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.
  ದಿ ಇನ್ಸ್ಟಿಟ್ಯೂಟ್ ಆಫ್ ಚಾರ್ಟೆರ್ಡ್ ಅಕೌಂಟೆನ್ಸ್ ಆಫ್ ಇಂಡಿಯಾ ಹಾಗೂ ಮಲ್ನಾಡ್ ಪ್ರೊಗ್ರೆಸ್ಸಿವ್ ಎಜ್ಯುಕೇಶನ್ ಸೊಸೈಟಿ ಸಹಯೋಗದೊಂದಿಗೆ ನಡೆದ ವೃತ್ತಿ ಮಾರ್ಗದರ್ಶನ ಮತ್ತು ಕರಿಯರ್ ಕೌನ್ಸಲಿಂಗ್ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
  ಮಲ್ನಾಡ್ ಪ್ರೊಗ್ರೆಸ್ಸಿವ್ ಎಜ್ಯುಕೇಶನ್ ಸೊಸೈಟಿ ಅಧ್ಯಕ್ಷ ಕೃಷ್ಣಮೂರ್ತಿ ಭಟ್ ಶಿವಾನಿ, ವಿದ್ಯಾರ್ಥಿಗಳ ಭವಿಷ್ಯವನ್ನು ನಿರ್ಧರಿಸುವ ಇಂತಹ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕು. ಎಲ್ಲಾ ವಿದ್ಯಾರ್ಥಿಗಳು ಸ್ವಾವಲಂಬನೆಯ ಜೀವನವನ್ನು ನಡೆಸುವ ಕನಸನ್ನು ಹೊಂದಿರಬೇಕು. ಸಿ.ಎ. ಕೋರ್ಸ್ ಕಬ್ಬಿಣದ ಕಡಲೆ ಅನ್ನುವ ಮಾತು ಕೇಳಿಬರುತ್ತದೆ. ಆದರೆ ಸಿ.ಎ. ಕಬ್ಬಿಣದ ಕಡಲೆ ಅಲ್ಲ. ಸರಿಯಾದ ಮಾರ್ಗದರ್ಶನ ಸಿಕ್ಕರೆ ಈ ಕೋರ್ಸ್ ಆರಾಮವಾಗಿ ಮಾಡಬಹುದು. ಎಲ್ಲಾ ವಿದ್ಯಾರ್ಥಿಗಳು ಇಂತಹ ಕೋರ್ಸ್ಗಳಿಗೆ ಹೆಚ್ಚು ನೋಂದಣೆ ಮಾಡುವಂತಾಗಬೇಕು ಎಂದು ಅಭಿಪ್ರಾಯಪಟ್ಟರು.
  ಸ್ಥಳೀಯ ಊರಿನಲ್ಲಿಯೇ ಸಿಎ ಅಕೌಂಟೆಂಟ್ ಆಗಿ ಕೆಲಸ ಮಾಡುವ ಹೆಮ್ಮೆಯೇ ಬೇರೆ ರೀತಿ ಆಗಿರುತ್ತದೆ. ಯಾರ ಜೊತೆಗೂ ನಿಮ್ಮನ್ನು ಹೋಲಿಸಿಕೊಳ್ಳಬೇಡಿ ಎಂದು ದಿ ದಿ ಇನ್ಸ್ಟಿಟ್ಯೂಟ್ಆಫ್ ಚಾರ್ಟೆರ್ಡ್ ಅಕೌಂಟೆನ್ಸ್ ಆಫ್ ಇಂಡಿಯಾ, ಉಡುಪಿ ಬ್ರಾಂಚ್ ಸದಸ್ಯೆ ಗೀತಾ ಎ.ಬಿ ಹೇಳಿದರು. ಸಿ.ಎ ಪ್ರದೀಪ್ ಜೋಗಿ, ಸಿ.ಎ.ವಸಂತ್ ಶಾನುಭೋಗ್ ವಿದ್ಯಾರ್ಥಿಗಳಿಗೆ ಕರಿಯರ್ ಕೌನ್ಸಲಿಂಗ್ ನಡೆಸಿಕೊಟ್ಟರು.
  ತಾಲೂಕಿನ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜು ಮತ್ತು ಪದವಿ ಕಾಲೇಜುಗಳಿಂದ ಸುಮಾರು 2 ಸಾವಿರ ವಿದ್ಯಾರ್ಥಿಗಳು ಪ್ರಯೋಜನವನ್ನು ಪಡೆದುಕೊಂಡರು. ದಿ ಇನ್ಸ್ಟಿಟ್ಯೂಟ್ ಆಫ್ ಚಾರ್ಟೆರ್ಡ್ ಅಕೌಂಟೆನ್ಸ್ ಆಫ್ ಇಂಡಿಯಾ, ಉಡುಪಿ ಬ್ರಾಂಚ್ ಚೇರ್‌ಮನ್ ಸಿ.ಎ. ಲೋಕೇಶ್ ಶೆಟ್ಟಿ, ಸ್ವಾಗತಿಸಿದರು. ಉಡುಪಿ ಬ್ರಾಂಚ್ ವೈಸ್ ಚೇರ್‌ಮೇನ್ ಸಿ.ಎ.ಪ್ರಭಾಕರ್.ಎನ್.ನಾಯಕ್,ಕಾರ್ಯದರ್ಶಿ ಮಹೆಂದ್ರ ಶೆಣೈ, ಖಜಾಂಚಿ ಅರ್ಚನಾ ಮಯ್ಯ, ಎಸ್.ಐ.ಸಿಎಎಸ್‌ಎ ಚೇರ್ ಮನ್ ಸಿ.ಎ.ಮಲ್ಲೆಶ್ ಕುಮಾರ್, ಸಿ.ಎ ರಂಗನಾತ್ ಆಚಾರ್ ಕೆ. ವೆದಿಕೆಯ ಮೇಲೆ ಹಾಜರಿದ್ದರು. ಎಂ.ಪಿ. ಇ ಸೊಸೈಟಿಯ ಸದಸ್ಯರು, ಪದವಿ, ಪದವಿ ಪೂರ್ವ ಕಾಲೇಜು, ಕೇಂದ್ರಿಯ ವಿದ್ಯಾಲಯದ ಪ್ರಾಚಾರ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top