• first
  second
  third
  Slide
  Slide
  previous arrow
  next arrow
 • ಸಾರ್ವಜನಿಕರೊಂದಿಗೆ ಆತ್ಮೀಯವಾಗಿ ಬೆರೆತು ಗಮನ ಸೆಳೆದ ಕಮಾಂಡೆಂಟ್

  300x250 AD

  ಕಾರವಾರ: ಕೋಸ್ಟ್ ಗಾರ್ಡ್ ಪಶ್ಚಿಮ ವಲಯದ ಕಮಾಂಡೆಂಟ್ ಮನೋಜ್ ಬಾಡಕರ್ ಅವರು ಶುಕ್ರವಾರ ಮಧ್ಯಾಹ್ನ ನಗರಕ್ಕೆ ಹೆಲಿಕಾಪ್ಟರ್‌ನಲ್ಲಿ ಬಂದಿಳಿದಿದ್ದು, ಸಾರ್ವಜನಿಕರೊಂದಿಗೆ ಆತ್ಮೀಯವಾಗಿ ಬೆರೆತು ಗಮನ ಸೆಳೆದರು.
  ಸಾಮಾನ್ಯವಾಗಿ ಉನ್ನತ ಹುದ್ದೆಯಲ್ಲಿದ್ದವರು ಜನರನ್ನ ತಮ್ಮ ಹತ್ತಿರ ಬಿಟ್ಟುಕೊಳ್ಳುವುದು ಕೂಡ ಕಡಿಮೆ. ಆದರೆ ಮನೋಜ್ ಬಾಡಕರ್ ಅವರು ಕೊಂಚ ವಿಭಿನ್ನವಾಗಿ ಕಂಡಿದ್ದಾರೆ. ಶುಕ್ರವಾರ, ಶನಿವಾರ ಹಾಗೂ ಭಾನುವಾರ ಮೂರು ದಿನಗಳ ಕಾರವಾರ ಪ್ರವಾಸದಲ್ಲಿರುವ ಮನೋಜ್ ಬಾಡಕರ್ ಅವರು ಮೂಲತಃ ಕಾರವಾರದವರೇ ಆಗಿದ್ದಾರೆ. ಶುಕ್ರವಾರ ಮಧ್ಯಾಹ್ನ ಅವರು ಕಾರವಾರದ ಮಾಲಾದೇವಿ ಮೈದಾನಕ್ಕೆ ಹೆಲಿಕಾಪ್ಟರ್‌ನಲ್ಲಿ ಬಂದಿಳಿಯಲಿದ್ದಾರೆಂಬ ಸುದ್ದಿ ತಿಳಿದು ಅವರ ಸ್ನೇಹಿತರು, ಹಳೆಯ ಸಹಪಾಠಿಗಳು, ವಿವಿಧ ಸಂಘ- ಸಂಸ್ಥೆಗಳ ಮುಖಂಡರು ಸೇರಿದಂತೆ ಸಾರ್ವಜನಿಕರು ಮೊದಲೇ ಮೈದಾನದಲ್ಲಿ ಕಾಯುತ್ತಿದ್ದರು. ಹೆಲಿಕಾಪ್ಟರ್‌ನಿಂದ ಬಂದಿಳಿಯುತ್ತಿದ್ದಂತೆ ಯಾವುದೇ ಹಬ್ಬು ಬಿಮ್ಮು ಇಲ್ಲದೆ ಎಲ್ಲರನ್ನೂ ಅವರು ಭೇಟಿಯಾದರು. ಎಲ್ಲರೊಂದಿಗೂ ಆತ್ಮೀಯವಾಗಿ ಮಾತನಾಡಿ ಸೆಲ್ಫಿ, ಫೊಟೊ ಕ್ಲಿಕ್ಕಿಸಿಕೊಳ್ಳಲು ಅನುವು ಮಾಡಿಕೊಟ್ಟರು.
  ಇನ್ನು ತಾವು ಕಲಿತ ಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರನ್ನ ಭೇಟಿ ಮಾಡಿ ತಮ್ಮ ಶಾಲಾ ದಿನಗಳನ್ನ ನೆನಪಿಸಿಕೊಂಡರು. ವಿದ್ಯಾರ್ಥಿಗಳಿಗೆ ತಾವೂ ಮುಂದೊಂದು ದಿನ ನನ್ನಂತೆ ಅಥವಾ ನನಗಿಂತಲೂ ದೊಡ್ಡದಾದ ಹುದ್ದೆಯನ್ನ ಅಲಂಕರಿಸುವಂತಾಗಬೇಕೆಂಬ ಶುಭ ಹಾರೈಸಿದರು. ಕಾರವಾರ ನಗರದಿಂದ ಹೊರಟ ಅವರು, ಸೀಬರ್ಡ್ ನೌಕಾನೆಲೆಗೆ ತೆರಳಿ ಅಲ್ಲಿ ಎಫ್‌ಒಕೆ ಭೇಟಿಯಾಗಿ, ಶನಿವಾರ ಜಿಲ್ಲಾಧಿಕಾರಿಗಳು, ಮೀನುಗಾರರು, ಪತ್ರಕರ್ತರನ್ನ ಭೇಟಿಯಾಗಲಿದ್ದಾರೆ. ಭಾನುವಾರ ಸಂಜೆ ವಾಪಸ್ಸು ಮುಂಬೈಗೆ ತೆರಳಲಿದ್ದಾರೆ.

  300x250 AD
  Share This
  300x250 AD
  300x250 AD
  300x250 AD
  Back to top