Slide
Slide
Slide
previous arrow
next arrow

ಅರಣ್ಯ ಅತಿಕ್ರಮಣದಾರರಿಗೆ ಹಕ್ಕು ಸಿಗದೇ ಇರಲು ಕಾಂಗ್ರೆಸ್ ಹಾಗೂ ಬಿಜೆಪಿ ಎರಡು ಪಕ್ಷಗಳು ಕಾರಣವಾಗಿವೆ :ವೀರಭದ್ರ ನಾಯ್ಕ

300x250 AD

ಸಿದ್ದಾಪುರ: ಅರಣ್ಯ ಅತಿಕ್ರಮಣ ದಾರದ ಭೂಮಿ ಮಂಜೂರಾತಿ ಕುರಿತು ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದವರು ಪರಸ್ಪರ ಆರೋಪ ಮಾಡಿಕೊಳ್ಳುತ್ತಿದ್ದಾರೆ. ಹಾಗಾದರೆ 2012 ರಲ್ಲಿ ಅರಣ್ಯ ಕಾಯ್ದೆಗೆ ತಿದ್ದುಪಡಿ ಆದಾಗ ಕಾಂಗ್ರೆಸ್ ಸರ್ಕಾರವೇ ಆಡಳಿತದಲ್ಲಿತ್ತು. ಆರ್.ವಿ. ದೇಶಪಾಂಡೆರವರೇ ಉಸ್ತುವಾರಿ ಸಚಿವರು ಇದ್ದರು. ಹಾಗಾದರೆ ಅರಣ್ಯ ಕಾಯ್ದೆಯಲ್ಲಿ ಏನಿದೆ ಎನ್ನುವುದು ದೇಶಪಾಂಡೆಯವರಿಗೆ ತಿಳಿದಿರಲಿಲ್ಲವೇ. ಅರಣ್ಯ ಅತಿಕ್ರಮಣ ದಾರರಿಗೆ ಹಕ್ಕು ಸಿಗದೇ ಇರಲು ಕಾಂಗ್ರೆಸ್ ಹಾಗೂ ಬಿಜೆಪಿ ಎರಡು ಪಕ್ಷಗಳು ಕಾರಣವಾಗಿವೆ ಎಂದು ಆಮ್ ಆದ್ಮಿ ಪಕ್ಷದ ಜಿಲ್ಲಾ ಉಪಾಧ್ಯಕ್ಷ ವೀರಭದ್ರ ನಾಯ್ಕ ಆರೋಪಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 32 ವರ್ಷಗಳಿಂದ ರವೀಂದ್ರ ನಾಯ್ಕ ನೇತೃತ್ವದಲ್ಲಿ ಅರಣ್ಯ ಭೂಮಿವಾಸಿಗಳಿಗೆ ಹಕ್ಕು ಪತ್ರ ನೀಡಬೇಕೆಂದು ಹೋರಾಟ ನಡೆಸುತ್ತಾ ಬಂದಿರುತ್ತಾರೆ. 2009 ನೇ ಸಾಲಿನಿಂದ ನಾವು ಈ ಹೋರಾಟದಲ್ಲಿ ಅವರೊಂದಿಗೆ ಕೈಜೋಡಿಸಿದ್ದೇವೆ. ಮೊನ್ನೆ ನಡೆದ ಅರಣ್ಯ ಅತಿಕ್ರಮಣ ದಾರದ ಪಾದಯಾತ್ರೆಯಲ್ಲಿ ಯಾವುದೇ ಪಕ್ಷದಿಂದ ಹೋರಾಟ ಅಂತ ಹೇಳಿಲ್ಲ. ನಮ್ಮನ್ನು ಕೂಡ ಯಾವುದೇ ಪಕ್ಷದ ವತಿಯಿಂದ ಬರದೆ ರೈತ ಮುಖಂಡರಾಗಿ ಈ ಹೋರಾಟಕ್ಕೆ ಬನ್ನಿ ಪಕ್ಷಾತೀತವಾಗಿ ಎಲ್ಲರೂ ಹೋರಾಡೋಣ ಎಂದು ಕರೆ ನೀಡಿದ್ದರು ಆ ಕರೆಯ ಮೇರೆಗೆ ನಾವು ಸಹ ಭಾಗವಹಿಸಿದ್ದೆವು.ಕೆಲವು ರಾಜಕೀಯ ಪಕ್ಷಗಳು ಇದರ ಲಾಭವನ್ನು ಪಡೆದುಕೊಳ್ಳಲು ಪ್ರಯತ್ನಿಸಿದ್ದು ವಿಷಾಧಕರ ಎಂದರು.
ಈ ಪಾದಯಾತ್ರೆಯ ವಿಷಯದ ಕುರಿತು ಬಿಜೆಪಿ ಪಕ್ಷದವರು ಸಹ ಪತ್ರಿಕಾಗೋಷ್ಠಿ ಕರೆದರು ಕಾಂಗ್ರೆಸ್ ಪಕ್ಷದ ಮೇಲೆ ಆರೋಪಗಳ ಮೇಲೆ ಆರೋಪವನ್ನು ಹಾಕಿದರು. ಆದರೆ ಆ ದಿನ ಪತ್ರಿಕಾಗೋಷ್ಠಿ ನಡೆಸಿದ ಬಿಜೆಪಿ ಪ್ರಮುಖರಾದ ರವಿ ಹೆಗಡೆಯವರಿಗಾಗಲಿ, ಅವರ ಪಕ್ಷಕ್ಕಾಗಲಿ ಅರಣ್ಯ ಅಧಿಕ್ರಮಣ ದಾರದ ಕುರಿತು ಮಾತನಾಡುವ ನೈತಿಕ ಹಕ್ಕಿಲ್ಲ. ಬಿಜೆಪಿ ಪ್ರಮುಖ ರವಿ ಹೆಗಡೆಯವರು ಪತ್ರಿಕಾಗೋಷ್ಠಿ ನಡೆಸುತ್ತಾರೆ. ಅರಣ್ಯ ಹಕ್ಕು ಕಾಯ್ದೆ 2012ರಲ್ಲಿ ತಿದ್ದುಪಡಿ ಆಯಿತು. ತಿದ್ದುಪಡಿ ಆದ ನಂತರ ಮೂರು ತಲೆಮಾರಿನ ದಾಖಲೆಗಳನ್ನು ಕೇಳಬಾರದು.
ಕಾಗೇರಿಯವನ್ನಾಗಿ ಬಿಜೆಪಿ ಪಕ್ಷವನ್ನಾಗಲಿ ಆರೋಪ ಮಾಡಲು ಕಾಂಗ್ರೆಸ್ಸಿಗರಿಗೆ ನೈತಿಕ ಹಕ್ಕಿಲ್ಲ. ಕಾಗೇರಿ ರವರು ಕಾಂಗ್ರೆಸ್ ಪಕ್ಷ ಆಡಳಿತದಲ್ಲಿದ್ದಾಗ ಸಹ ಇಲ್ಲಿಯ ಶಾಸಕರಾಗಿದ್ದರು ನಂತರ ಬಿಜೆಪಿ ಆಡಳಿತಕ್ಕೆ ಬಂದಾಗ ಸಚಿವರಾಗಿದ್ದರು. ಆದರೆ ಈ ಅರಣ್ಯ ಅತಿಕ್ರಮಣ ಸಮಸ್ಯೆ ಬಗ್ಗೆ ಎ.ಸಿ ಗಳೊಂದಿಗೆ ಆಗಲಿ ಡಿ.ಸಿ ಗಳೊಂದಿಗೆ ಆಗಲಿ ಅಧಿಕಾರಿಗಳ ಸಭೆ ಹಾಗೂ ಚರ್ಚೆ ನಡೆಸಿಲ್ಲ.
ಅರಣ್ಯ ಅತಿಕ್ರಮಣ ದಾರರ ಅರ್ಜಿಗಳನ್ನು ಎಸಿ ರವರು ಯಾವುದೇ ರೀತಿ ಮಂಜೂರಿ ನೀಡದೆ ವಿಲೆಗೆ ತಂದರು. ಎಸಿ ಅವರು ಅರ್ಜಿ ವಿಲೇಗೆ ತಂದ ನಂತರ ಪರಿಸರವಾದಿಗಳು ಅರಣ್ಯ ಅತಿಕ್ರಮಣ ಖುಲ್ಲಾಪಡಿಸುವಂತೆ ಸುಪ್ರೀಂ ಕೋರ್ಟಿಗೆ ಅಪಿಡವೆಟ್ ಹಾಕಿದರು. ಅರಣ್ಯ ಅತಿಕ್ರಮಣ ದಾರರನ್ನು ಒಕ್ಕಲಿಬ್ಬಿಸಿದರೆ ಅವರ ಪರಿಸ್ಥಿತಿ ತುಂಬಾ ಕಠಿಣವಾಗಲಿದೆ ಎಂಬುದನ್ನು ಅರಿತ ಅರಣ್ಯ ಹೋರಾಟಗಾರ ಅವರ ಪರವಾಗಿ ಒಂದು ಕಾರ್ಯಕ್ರಮ ಹಮ್ಮಿಕೊಂಡರು ಜನ ಕೂಡ ಇದಕ್ಕೆ ಸ್ಪಂಧಿಸಿದರು.
ರವೀಂದ್ರ ನಾಯ್ಕ ರವರ ಬಗ್ಗೆ ಆಗಲಿ ಅಥವಾ ಯಾವುದೇ ಪಕ್ಷದ ಬಗ್ಗೆ ಆಗಲಿ ನಾನು ಕೆಟ್ಟದ್ದನ್ನು ಹೇಳುವುದಿಲ್ಲ. ಈ ಹೋರಾಟ ಕಾಂಗ್ರೆಸ್ ಪಕ್ಷದ ಪರವಾಗಿದೆ ಎಂಬುದು ತಿಳಿದು ತುಂಬಾ ಬೇಸರವಾಗಿದೆ. ಅರಣ್ಯ ಅತಿಕ್ರಮಣ ಮಾಡಿದ ರೈತರಿಗೆ ಶೀಘ್ರದಲ್ಲಿ ನ್ಯಾಯ ಸಿಗುವ ವ್ಯವಸ್ಥೆಯಾಗಬೇಕೆಂದು ಆಮ್ ಆದ್ಮಿ ಪಕ್ಷದ ಮುಖಂಡನಾಗಿ ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತೇನೆ. ಕಾಗೇರಿ ಅವರು ಮನಸ್ಸು ಮಾಡಿದರೆ 24 ಗಂಟೆಯೊಳಗೆ ಸಮಸ್ಯೆ ಪರಿಹರಿಸುವ ಶಕ್ತಿ ಅವರಲ್ಲಿದೆ. ಈ ಕುರಿತು ಕಾಗೇರಿ ಅವರು ಗಮನ ಹರಿಸಿ ರೈತರಿಗೆ ನ್ಯಾಯ ಒದಗಿಸಿ ಕೊಡಬೇಕೆಂದು ವಿನಂತಿಸಿಕೊಳ್ಳುತ್ತೇನೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ತಾಲೂಕ ಅಧ್ಯಕ್ಷ ಲಕ್ಷ್ಮಣ ನಾಯ್ಕ ಬೇಡ್ಕಣಿ, ಪ್ರಧಾನ ಕಾರ್ಯದರ್ಶಿ ಲೊಕೇಶ ಹೆಗಡೆ, ಪದಾಧಿಕಾರಿಗಳಾದ ರಾಘವೇಂದ್ರ ನಾಯ್ಕ ಕಾವಂಚೂರು, ಸುರೇಶ ನಾಯ್ಕ ತೆಂಗಿನಮನೆ, ಐ.ಸಿ.ನಾಯ್ಕ ಹುಲಿಮನೆ ಮೊದಲಾದವರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮ ಮಾಡುವಲ್ಲಿ ಕಾಂಗ್ರೆಸ್ ಅಥವಾ ಬಿಜೆಪಿ ಪಕ್ಷದ ಯಾವ ಪ್ರಯತ್ನವೂ ಇಲ್ಲ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ ಕೂಡ ಕವಂಚೂರು ಹೊರತುಪಡಿಸಿ ಅರಣ್ಯ ಹೋರಾಟದ ಕುರಿತು ತಾಲೂಕಿನ ಯಾವುದೇ ಭಾಗದಲ್ಲಿ ನಡೆದ ಗ್ರಾಮ ಸಭೆಯಲ್ಲಿ ಭಾಗವಹಿಸಿಲ್ಲ. ಮೊನ್ನೆ ನಡೆದ ಹೋರಾಟದಲ್ಲಿ ಅರಣ್ಯ ಭೂಮಿ ಹಕ್ಕು ಹೋರಾಟದಲ್ಲಿ ಈ ಹೋರಾಟ ಸಮಿತಿ ಕಾಂಗ್ರೆಸ್ ಪರವಾಗಿದೆ ಎಂಬುದು ನನಗೆ ಆ ದಿನ ಗೋಚರವಾಯಿತು ಎಂದು ಆಮ್ಮ ಆದ್ಮಿ ಪಕ್ಷದ ಜಿಲ್ಲಾ ಉಪಾಧ್ಯಕ್ಷ ವೀರಭದ್ರ ನಾಯ್ಕ ಹೇಳಿದರು .

300x250 AD
Share This
300x250 AD
300x250 AD
300x250 AD
Back to top