ನವದೆಹಲಿ: ಭಾರತದಿಂದ ಕಳ್ಳ ಸಾಗಣೆ ಮಾಡಿದ ಸುಮಾರು 307 ಪುರಾತನ ವಸ್ತುಗಳನ್ನು ಅಮೇರಿಕವು ಭಾರತಕ್ಕೆ ಹಿಂತಿರುಗಿಸಿದೆ. ಈ ವಸ್ತುಗಳ ಬೆಲೆ ಸುಮಾರು 4 ಮಿಲಿಯನ್ ಡಾಲರ್ ಅಂದರೆ 33 ಕೋಟಿ ರೂಪಾಯಿಗಳು ಎಂದು ಅಂದಾಜಿಸಲಾಗಿದೆ.
ಸುಧೀರ್ಘ 15 ವರ್ಷಗಳ ತನಿಖೆಯಲ್ಲಿ ಈ ವಸ್ತುಗಳನ್ನು ಪತ್ತೆ ಮಾಡಲಾಗಿದ್ದು, ವ್ಯಾಪಾರಿ ಸುಭಾಶ್ ಕಪೂರ್ ಎಂಬುವವರಿಂದ ಅತಿ ಹೆಚ್ಚು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮ್ಯಾನ್‌ಹ್ಯಾಟನ್ ಡಿಸ್ಟ್ರಿಕ್ಟ್ ಅಟಾರ್ನಿ ಆಲ್ವಿನ್ ಬ್ರಾಗ್ ಅವರು ಸುಮಾರು USD 4 ಮಿಲಿಯನ್ ಮೌಲ್ಯದ 307 ಪ್ರಾಚೀನ ವಸ್ತುಗಳನ್ನು ಭಾರತದ ಜನರಿಗೆ ಹಿಂದಿರುಗಿಸುವುದಾಗಿ ಈ ಹಿಂದೆ ಘೋಷಿಸಿದ್ದರು.
ಅದರ ನ್ಯೂಯಾರ್ಕ್‌ನಲ್ಲಿರುವ ಭಾರತೀಯ ಕಾನ್ಸುಲೇಟ್‌ನಲ್ಲಿ ಭಾರತದ ಕಾನ್ಸುಲ್ ಜನರಲ್ ರಣದೀರ್ ಜೈಸ್ವಾಲ್ ಮತ್ತು ಯುಎಸ್ ಹೋಮ್‌ಲ್ಯಾಂಡ್ ಸೆಕ್ಯುರಿಟಿ ಇನ್ವೆಸ್ಟಿಗೇಷನ್ಸ್ ಆಕ್ಟಿಂಗ್ ಡೆಪ್ಯುಟಿ ಸ್ಪೆಷಲ್ ಏಜೆಂಟ್-ಇನ್-ಚಾರ್ಜ್ ಕ್ರಿಸ್ಟೋಫರ್ ಲಾವ್ ಭಾಗವಹಿಸಿದ್ದ ವಾಪಸಾತಿ ಸಮಾರಂಭದಲ್ಲಿ ಎಲ್ಲಾ ಪ್ರಾಚೀನ ವಸ್ತುಗಳನ್ನು ಹಿಂತಿರುಗಿಸಲಾಗಿದೆ ಎಂದು ಮ್ಯಾನ್‌ಹ್ಯಾಟನ್ ಜಿಲ್ಲಾ ಅಟಾರ್ನಿ ಕಚೇರಿ ಹೊರಡಿಸಿದ ಹೇಳಿಕೆ ತಿಳಿಸಿದೆ.
ಇವುಗಳಲ್ಲಿ 235 ಪುರಾತನ ವಸ್ತುಗಳನ್ನು ಮ್ಯಾನ್‌ಹ್ಯಾಟನ್ ಜಿಲ್ಲಾ ಅಟಾರ್ನಿಯು ಸುಭಾಶ್ ಕಪೂರ್ ಅವರ ಕಛೇರಿಯಲ್ಲಿ ನಡೆಸಿದ ತನಿಖೆಯ ನಂತರ ವಶಪಡಿಸಿಕೊಂಡಿದೆ. ಈತ ಅಫ್ಘಾನಿಸ್ತಾನ, ಕಾಂಬೋಡಿಯಾ, ಭಾರತ, ಇಂಡೋನೇಷ್ಯಾ, ಮ್ಯಾನ್ಮಾರ್, ನೇಪಾಳ, ಪಾಕಿಸ್ತಾನ, ಶ್ರೀಲಂಕಾ, ಥೈಲ್ಯಾಂಡ್‌ಗಳಿಂದ ಅಪಾರ ಪ್ರಾಚೀನ ವಸ್ತುಗಳನ್ನು ಕಳ್ಳಸಾಗಾಣೆ ಮಾಡಿದ್ದಾನೆ ಎಂದು ಹೇಳಲಾಗಿದೆ.
ಕೃಪೆ: http://news13.in