Slide
Slide
Slide
previous arrow
next arrow

ಕಲ್ಪನಾ ಭಟ್ಟಗೆ ಶ್ರೀಗುರುಕುಲ ತಿಲಕ ಪುರಸ್ಕಾರ ಪ್ರದಾನ

300x250 AD

ಬೆಂಗಳೂರು: ಕಸ್ತೂರಿ ಸಿರಿಗನ್ನಡ ವೇದಿಕೆ ಬೆಳಗಾವಿ ವತಿಯಿಂದ ಆಯೋಜಿಸಿದ್ದ ವಿಶ್ವ ಶಿಕ್ಷಕಕರ ದಿನಾಚರಣೆ ಹಾಗೂ ಶ್ರೀಗುರುಕುಲ ತಿಲಕ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಬಿ.ನಾರಾಯಣಪುರದ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಕಲ್ಪನಾ ಭಟ್ಟ (ಕಲ್ಪನಾ ಅರುಣ) ಅವರಿಗೆ ಶ್ರೀಗುರುಕುಲ ತಿಲಕ ಪ್ರಶಸ್ತಿ ಪ್ರದಾನಿಸಲಾಯಿತು.

ಕಲ್ಪನಾ ಅವರು ವೃತ್ತಿಯಲ್ಲಿ ಶಿಕ್ಷಕಿಯಾಗಿ ರೋಟರಿ ಇಂದಿರಾನಗರ ಇವರಿಂದ ಉತ್ತಮ ಶಿಕ್ಷಕಿ ಪ್ರಶಸ್ತಿ ಪಡೆದಿದ್ದಾರೆ. ಪ್ರವೃತ್ತಿಯಲ್ಲಿ ಕವಿಯತ್ರಿಯಾಗಿ ಸಾಹಿತ್ಯ ಸೇವೆಯಲ್ಲಿ ತೊಡಗಿಸಿಕೊಂಡು ಹಲವಾರು ಸಂಘ- ಸಂಸ್ಥೆಗಳಿ0ದ ಪ್ರಶಸ್ತಿ- ಪುರಸ್ಕಾರಗಳನ್ನು, ಅಭಿನಂದನಾ ಪತ್ರಗಳನ್ನು ಪಡೆದಿದ್ದಾರೆ. ಕಲ್ಪನಾರವರ ಶೈಕ್ಷಣಿಕ, ಸಾಹಿತ್ಯಿಕ, ಸಮಾಜ ಸೇವೆಯನ್ನು ಪರಿಗಣಿಸಿ ಅವರಿಗೆ ಶ್ರೀಗುರುಕುಲ ತಿಲಕ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗಿದೆ.

300x250 AD

ಈ ವೇಳೆ ವೇದಿಕೆಯ ಗೌರವ ಮಾರ್ಗದರ್ಶಕಿ, ಬೆಸ್ಟ್ ಟೀಚರ್ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಡಾ.ರಾಧಾ ಕುಲಕರ್ಣಿ, ಧಾರವಾಡ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಗಜಾನನ ಮನ್ಸಿಕೇರಿ ಹಾಗೂ ಅಧ್ಯಕ್ಷ ಸಿ.ಎಮ್.ಬಂಡಗರ ಇನ್ನಿತರರು ಇದ್ದರು.

Share This
300x250 AD
300x250 AD
300x250 AD
Back to top